ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಸ್ಟರ್‌ಕ್ಲಾಸ್ ಕೇನ್‌ ವಿಲಿಯಮ್ಸನ್‌: ಹಾಡಿ ಹೊಗಳಿದ ವಾರ್ನರ್

What A Masterclass From Kane: David Warner Lauds On Kane Williamson

ಐಪಿಎಲ್ 2020 ರ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಡೇವಿಡ್ ವಾರ್ನರ್ ನೇತೃತ್ವದ ತಂಡವು ಈಗ ಎರಡನೇ ಕ್ವಾಲಿಫೈಯರ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಟ ನಡೆಸಲಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 132ರನ್ ಗುರಿ ಬೆನ್ನತ್ತಿದ ಎಸ್‌ಆರ್‌ಹೆಚ್ ಕೂಡ ಆರ್‌ಸಿಬಿ ರೀತಿಯಲ್ಲೇ ಆರಂಭದಲ್ಲೇ ಆಘಾತ ಕಂಡಿತು. ಮೊದಲ ಓವರ್‌ನಲ್ಲೇ ಗೋಸ್ವಾಮಿ ವಿಕೆಟ್ ಒಪ್ಪಿಸಿದ್ರು. ಡೇವಿಡ್ ವಾರ್ನರ್ ಆಟವೂ 17ರನ್‌ಗೆ ಕೊನೆಗೊಂಡಿತು. ಮನೀಶ್ ಪಾಂಡೆ 24ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು.

 ಆರ್‌ಸಿಬಿ ಕನಸು ನುಚ್ಚುನೂರು: ಕ್ವಾಲಿಫೈಯರ್ ಪ್ರವೇಶಿಸಿದ ಸನ್‌ರೈಸರ್ಸ್ ಹೈದ್ರಾಬಾದ್ ಆರ್‌ಸಿಬಿ ಕನಸು ನುಚ್ಚುನೂರು: ಕ್ವಾಲಿಫೈಯರ್ ಪ್ರವೇಶಿಸಿದ ಸನ್‌ರೈಸರ್ಸ್ ಹೈದ್ರಾಬಾದ್

ಈ ವೇಳೆ ತಂಡಕ್ಕೆ ಆಧಾರವಾಗಿದ್ದು, ಕ್ರಿಕೆಟ್ ಲೋಕದ ಶಾಂತ ಪರ್ವತ ಕೇನ್ ವಿಲಿಯಮ್ಸನ್. ತಂಡಕ್ಕೆ ಬೇಕಾದ ರನ್‌ರೇಟ್‌ಗೆ ತಕ್ಕಂತೆ ಆಟವಾಡಿದ ಕೇನ್ ವಿಲಿಯಮ್ಸನ್‌ ಜೇಸನ್ ಹೋಲ್ಡರ್ ಜೊತೆಗೂಡಿ ಆರ್‌ಸಿಬಿಯಿಂದ ಗೆಲುವನ್ನು ಕಸಿದುಕೊಂಡರು. ಐಪಿಎಲ್‌ನಲ್ಲಿ 13ನೇ ಅರ್ಧಶತಕ ದಾಖಲಿಸಿದ ಕೇನ್ ತಂಡವನ್ನ ಗೆಲುವಿನ ದಡ ತಲುಪಿಸಿದರು.

44 ಎಸೆತಗಳಲ್ಲಿ 50 ರನ್ ಕಲೆಹಾಕಿದ ಕೇನ್ ವಿಲಿಯಮ್ಸನ್‌ರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಎರಡು ಆಕರ್ಷಕ ಸಿಕ್ಸರ್‌ಗಳಿದ್ದವು. ಇವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಎಸ್‌ಆರ್‌ಹೆಚ್ ಕ್ವಾಲಿಫೈಯರ್ ಪ್ರವೇಶಿಸಿದೆ.

ವಿಲಿಯಮ್ಸನ್ ಆಟವನ್ನು ಹಾಡಿ ಹೊಗಳಿದ ನಾಯಕ ಡೇವಿಡ್ ವಾರ್ನರ್ , ನ್ಯೂಜಿಲೆಂಡ್ ನಾಯಕನನ್ನು ಬಾಯಿ ತುಂಬಾ ಹೊಗಳಿದರು.

"ಕೇನ್‌ನಿಂದ ಎಂತಹ ಮಾಸ್ಟರ್‌ಕ್ಲಾಸ್ ಆಟವಿದು, ಅವರು ಇದನ್ನು ನ್ಯೂಜಿಲೆಂಡ್‌ಗಾಗಿ ಅನೇಕ ವರ್ಷಗಳ ಕಾಲ ಮಾಡಿದ್ದಾರೆ. ಅವರು ಹೊಂದಿದ್ದ ಬ್ಯಾಟಿಂಗ್ ಶ್ರೇಣಿಯೊಂದಿಗೆ, ಹೊಸ ಚೆಂಡನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ ಆ ವಿಕೆಟ್‌ನಲ್ಲಿ ಏನಾದರೂ ಇದೆ ಎಂದು ನಿಮಗೆ ತಿಳಿದಿತ್ತು. ಚೆಂಡನ್ನು ಓವರ್‌ಪಿಚ್ ಮಾಡಲು ನೀವು ಕಾಯಬೇಕಾಗಿತ್ತು. ಮಧ್ಯಮ ಓವರ್‌ಗಳ ಮೂಲಕ ಸ್ಪಿನ್ನರ್‌ಗಳು ಸಾಕಷ್ಟು ನಿಧಾನವಾಗಿ ಬೌಲಿಂಗ್ ಮಾಡಿದರು, "ಎಂದು ಡೇವಿಡ್ ವಾರ್ನರ್ ಹೇಳಿದರು.

ತಂಡ ಗೆಲ್ಲಲೇಬೇಕಾದ ಪಂದ್ಯದ ಕೊನೆಯಲ್ಲಿ ಕೇನ್‌ನಂತಹ ಪ್ಲೇಯರ್ ಇರುವಾಗ ತಂಡ ಗೆಲ್ಲದೇ ಇರಲು ಸಾಧ್ಯವಿಲ್ಲ. ಎಸ್‌ಆರ್‌ಹೆಚ್‌ಗೆ ಉತ್ತಮ ಗೆಲುವು ತಂದುಕೊಟ್ಟ ವಿಲಿಯಮ್ಸನ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿದು ಬಂದಿದೆ.

Story first published: Friday, November 6, 2020, 23:59 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X