ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಪ್ಟೆಂಬರ್ 3ರಂದು ಕ್ರಿಕೆಟ್‌ ಜಗತ್ತಿನಲ್ಲಿ ನಡೆದದ್ದೇನು?

What happened in the cricket world on September 3

ಸೆಪ್ಟೆಂಬರ್ 3ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಫಾಲೋವರ್ಸ್ ಪೂರೈಸಿದ ಅಪರೂಪದ ದಾಖಲೆ ಪಟ್ಟಿಗೆ ಕಿಂಗ್ ಕೊಹ್ಲಿ ಸೇರ್ಪಡೆಯಾಗಿದ್ದರೆ ಮತ್ತೊಂದೆಡೆ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ನಲ್ಲಿ 150+ ವಿಕೆಟ್‌ ಸಾಧನೆಗಾಗಿ ಉಮೇಶ್ ಗುರುತಿಸಿಕೊಂಡಿದ್ದಾರೆ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಸೆಪ್ಟೆಂಬರ್ 3ರ ಶುಕ್ರವಾರದಂದು ನಡೆದ ಘಟನೆಗಳ ಒಂದು ಕಿರು ನೋಟ ಇಲ್ಲಿದೆ ನೋಡಿ..

* ತವರು ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ಜೇಮ್ಸ್ ಆ್ಯಂಡರ್ಸನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದುವರೆಗೂ ಜೇಮ್ಸ್ ಆ್ಯಂಡರ್ಸನ್ ತನ್ನ ತವರು (ಇಂಗ್ಲೆಂಡ್) ನೆಲದಲ್ಲಿ 95 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇತ್ತು. ತಮ್ಮ ತವರು ( ಭಾರತ ) ನೆಲದಲ್ಲಿ 94 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸಚಿನ್ ತೆಂಡೂಲ್ಕರ್, ತವರು ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಇದೀಗ ಈ ದಾಖಲೆಯನ್ನು ಇಂಗ್ಲೆಂಡ್ ಆಟಗಾರ ಜೇಮ್ಸ್ ಆ್ಯಂಡರ್ಸನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

* ಸೆಹ್ವಾಗ್ ಎದುರಾಳಿ ತಂಡದ ಎಲ್ಲ ಆಟಗಾರರು ತನ್ನನ್ನು ಮೈದಾನದಲ್ಲಿಯೇ ನಿಂದಿಸಿದ್ದರು ಎಂದು ಹೇಳಿಕೆ ನೀಡಿ ಆರೋಪ ಮಾಡಿರುವುದು ಭಾರತ ತಂಡದ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ. ಹೌದು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪೆಪ್ಸಿ ಏಕದಿನ ಸರಣಿಯ ಆರನೇ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆಯನ್ನು ಮಾಡಿದರು. ಈ ಪಂದ್ಯದಲ್ಲಿ ಏಳನೇ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದ ವಿರೇಂದ್ರ ಸೆಹ್ವಾಗ್ ವಿರುದ್ಧ ಇಡೀ ಪಾಕಿಸ್ತಾನ ತಂಡವೇ ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿತ್ತಂತೆ. ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ತಂಡದ ಪ್ರಮುಖ ಆಟಗಾರರು ಸೇರಿದಂತೆ ಎಲ್ಲರೂ ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿದ್ದರು ಎಂದು ವಿರೇಂದ್ರ ಸೆಹ್ವಾಗ್ ಹಳೆಯ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ.

'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್

* ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ನಲ್ಲಿ 150+ ವಿಕೆಟ್‌ ಸಾಧನೆಗಾಗಿ ಉಮೇಶ್ ಗುರುತಿಸಿಕೊಂಡಿದ್ದಾರೆ. ಶುಕ್ರವಾರ (ಸೆಪ್ಟೆಂಬರ್‌ 3) ಲಂಡನ್‌ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಯಾದವ್ ಈ ಸಾಧನೆ ತೋರಿದ್ದಾರೆ.

* 'ಕೇವಲ 2-3 ವರ್ಷಗಳ ಅನುಭವವಿರುವ ಯುವ ಕ್ರಿಕೆಟಿಗ ರಿಷಭ್ ಪಂತ್‌ನ್ನು ವಿಶ್ವವಿಖ್ಯಾತ ಆ್ಯಡಮ್ ಗಿಲ್‌ಕ್ರಿಸ್ಟ್ ಜೊತೆ ಹೋಲಿಕೆ ಮಾಡಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಗಿಲ್‌ಕ್ರಿಸ್ಟ್ ಕ್ರಿಕೆಟ್ ಆಡುವ ಸಮಯದಲ್ಲಿ ದೊಡ್ಡ ದೊಡ್ಡ ಭಯಾನಕ ಬೌಲರ್‌ಗಳ ಬೌಲಿಂಗ್ ದಾಳಿಯನ್ನು ಎದುರಿಸಿ ಅತ್ಯುತ್ತಮ ಆಟವನ್ನು ಆಡಿದ್ದಾರೆ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಆ ಮಟ್ಟಿಗಿನ ಮಾರಕ ಬೌಲಿಂಗ್ ನಡೆಸುವ ಬೌಲರ್‌ಗಳು ಯಾರೂ ಸಹ ಇಲ್ಲ ಹಾಗೂ ರಿಷಭ್ ಪಂತ್ ಕೂಡ ಕೆಲವೊಂದಷ್ಟು ಉತ್ತಮ ಇನ್ನಿಂಗ್ಸ್ ಆಡಿದ್ದು ಬಿಟ್ಟರೆ ದೊಡ್ಡ ಮಟ್ಟದ ಸಾಧನೆಯನ್ನೇನು ಮಾಡಿಲ್ಲ' ಎಂದು ಹೇಳಿಕೆ ನೀಡಿರುವ ಸಲ್ಮಾನ್ ಬಟ್ ಆ್ಯಡಮ್ ಗಿಲ್‌ಕ್ರಿಸ್ಟ್ ಜೊತೆ ರಿಷಭ್ ಪಂತ್ ಹೋಲಿಕೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

ಮತ್ತೆ ಮೈದಾನಕ್ಕೆ ನುಗ್ಗಿ ಕಿರಿಕಿರಿ ಮಾಡಿದ ಜಾವ್ರೋ! | Oneindia Kannada

* ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಫಾಲೋವರ್ಸ್ ಪೂರೈಸಿದ ಅಪರೂಪದ ದಾಖಲೆ ಪಟ್ಟಿಗೆ ಕಿಂಗ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಏಷ್ಯಾದಲ್ಲೇ ಇಷ್ಟು ಇನ್‌ಸ್ಟಾಗ್ರಾ ಫಾಲೋವರ್ಸ್ ಯಾರಿಗೂ ಇಲ್ಲ. ಏಷ್ಯಾದಲ್ಲಿ 150+ ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಇರುವ ಮೊದಲ ಕ್ರಿಕೆಟಿಗನಾಗಿ, ಮೊದಲ ವ್ಯಕ್ತಿಯಾಗಿ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ.

Story first published: Friday, September 3, 2021, 23:11 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X