ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WIPL 2023: ಮಹಿಳಾ IPLನಲ್ಲಿ ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿ

WIPL 2023: Australias Alyssa Healy Expresses Desire To Play For RCB In Womens IPL

2023ರ 16ನೇ ಆವೃತ್ತಿಯ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮುನ್ನ ಚೊಚ್ಚಲ ಬಾರಿಗೆ ಮಹಿಳಾ ಐಪಿಎಲ್ 2023 ನಡೆಯಲಿದೆ. ಈಗಾಗಲೇ ಐದು ಫ್ರಾಂಚೈಸಿಗಳು ಮಾಲೀಕತ್ವದ ಬಿಡ್ ಖರೀದಿಸಿದ್ದು, ಕೆಲವೇ ದಿನಗಳಲ್ಲಿ ಮಹಿಳಾ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ.

ಮಾರ್ಚ್ 4ರಿಂದ ಮಾರ್ಚ್ 24ರವರೆಗೆ ನಡೆಯಲಿರುವ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಭಾರತೀಯ ಮಹಿಳಾ ಕ್ರಿಕೆಟಿಗರಲ್ಲದೇ, ವಿದೇಶಿ ಆಟಗಾರ್ತಿಯರೂ ತುದಿಗಾಲಿನಲ್ಲಿ ನಿಂತಿದ್ದಾರೆ.

U-19 Women's T20 World Cup: ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಭಾರತದ ಮೂವರು ಆಟಗಾರ್ತಿಯರುU-19 Women's T20 World Cup: ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಭಾರತದ ಮೂವರು ಆಟಗಾರ್ತಿಯರು

ಇದೇ ವೇಳೆ ಆಸ್ಟ್ರೇಲಿಯಾ ಮಹಿಳಾ ತಂಡದ ವಿಕೆಟ್ ಕೀಪರ್- ಬ್ಯಾಟರ್ ಅಲಿಸ್ಸಾ ಹೀಲಿ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಋತುವಿನಲ್ಲಿ ತಾನು ಸೇರಲಿಚ್ಚಿಸುವ ತಂಡವನ್ನು ಬಹಿರಂಗಪಡಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಪರ ಆಡುವುದು ಉತ್ತಮ ಎಂದು ಹೇಳಿದ್ದಾರೆ.

 ಆರ್‌ಸಿಬಿ ತಂಡಕ್ಕೆ ಹೋದರೆ ಹೆಚ್ಚು ಖುಷಿಯಾಗುತ್ತದೆ

ಆರ್‌ಸಿಬಿ ತಂಡಕ್ಕೆ ಹೋದರೆ ಹೆಚ್ಚು ಖುಷಿಯಾಗುತ್ತದೆ

ಆಸ್ಟ್ರೇಲಿಯಾ ಕ್ರಿಕೆಟ್ ಅವಾರ್ಡ್ಸ್‌ನಲ್ಲಿ ಮಾತನಾಡಿದ ಅಲಿಸ್ಸಾ ಹೀಲಿ, ಮಹಿಳಾ ಐಪಿಎಲ್ ಉದ್ಘಾಟನಾ ಋತುವಿಗೆ ಆರ್‌ಸಿಬಿ ತನ್ನನ್ನು ಆಯ್ಕೆ ಮಾಡಿದರೆ ಸಂತೋಷವಾಗುತ್ತದೆ ಎಂದು ಹೇಳಿದರು. ಕುತೂಹಲಕಾರಿ ಅಂಶವೆಂದರೆ, ಅಲಿಸ್ಸಾ ಹೀಲಿ ಅವರ ಪತಿ ಮಿಚೆಲ್ ಸ್ಟಾರ್ಕ್ ಕೂಡ ಆರ್‌ಸಿಬಿ ತಂಡದ ಪರವಾಗಿ ಆಡಿದ್ದರು.

"ಮಹಿಳಾ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ನಾನು ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದೇನೆ. ಹಾಗಾಗಿ ಯಾವ ತಂಡಕ್ಕೆ ಹೋಗುತ್ತೇನೆ ಎಂಬ ಕುತೂಹಲವಿದೆ. ಆದರೆ, ಆರ್‌ಸಿಬಿ ತಂಡಕ್ಕೆ ಹೋದರೆ ಹೆಚ್ಚು ಖುಷಿಯಾಗುತ್ತದೆ," ಎಂದು ಅಲಿಸ್ಸಾ ಹೀಲಿ ತಿಳಿಸಿದರು.

 ತಂಡಗಳ ಹಕ್ಕುಗಳು 4669.99 ಕೋಟಿ ರೂ.ಗೆ ಮಾರಾಟ

ತಂಡಗಳ ಹಕ್ಕುಗಳು 4669.99 ಕೋಟಿ ರೂ.ಗೆ ಮಾರಾಟ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಐದು ಫ್ರಾಂಚೈಸಿ ಮಾಲೀಕರ ಹೆಸರನ್ನು ಪ್ರಕಟಿಸಿದೆ. ಬಹು ನಿರೀಕ್ಷಿತ ಮಹಿಳಾ ಐಪಿಎಲ್ ಟೂರ್ನಿಯು ಭಾರತದಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್ ನಡುವಿನ ಅಸಮಾನತೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಸೀಸನ್‌ಗೆ ಮುನ್ನ ನಡೆಯುವ ಭಾರತದ ಮಹಿಳಾ ಕ್ರಿಕೆಟ್‌ ಹಬ್ಬದಲ್ಲಿ ವಿಶ್ವದ ಸ್ಟಾರ್ ಆಟಗಾರ್ತಿಯರಿಗೂ ವೇದಿಕೆ ಕಲ್ಪಿಸಲಿದೆ.

ತಂಡಗಳ ಹಕ್ಕುಗಳನ್ನು 4669.99 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದ್ದು, ಇದು 2008ರಲ್ಲಿ ನಡೆದ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಕ್ಕುಗಳಿಗಿಂತ ಹೆಚ್ಚಿನ ಮೊತ್ತವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 901 ಕೋಟಿ ರೂ.

ಅಹಮದಾಬಾದ್ ತಂಡದ ಮಾಲೀಕತ್ವವನ್ನು 1289 ಕೋಟಿ ರೂ.ಗಳಿಗೆ ಅದಾನಿ ಸ್ಪೋರ್ಟ್ಸ್‌ಲೈನ್ ಖರೀದಿಸಿದ್ದು, ಇದು ಅತ್ಯಂತ ದುಬಾರಿ ಫ್ರಾಂಚೈಸಿಯಾಗಿದೆ. ಮುಂಬೈ ಇಂಡಿಯನ್ಸ್ 912.99 ಕೋಟಿ ರೂ.ಗಳಿಗೆ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಖರೀದಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 901 ಕೋಟಿ ರೂ.ಗಳಿಗೆ, ದೆಹಲಿ ಕ್ಯಾಪಿಟಲ್ಸ್ 810 ಕೋಟಿ ರೂ.ಗಳು ಮತ್ತು ಲಕ್ನೋ ಫ್ರಾಂಚೈಸಿಗಾಗಿ ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ 757 ಕೋಟಿ ರೂ.ಗಳಿಗೆ ಬಿಡ್ ಖರೀದಿಸಿ ಮಹಿಳಾ ಐಪಿಎಲ್ ಪ್ರವೇಶಿಸಿವೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು 951 ಕೋಟಿ ರೂಪಾಯಿಗಳಿಗೆ Viacom18 ಖರೀದಿಸಿದೆ. ಅಂದರೆ, ಐದು ವರ್ಷಗಳವರೆಗೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂಪಾಯಿಗಳನ್ನು ನೀಡಲಿದೆ.

Story first published: Monday, January 30, 2023, 21:09 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X