ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ

WIPL 2023: Womens IPL Auction Likely To Be Held On February 13 In Mumbai

2023ರ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WPL) ಉದ್ಘಾಟನಾ ಆವೃತ್ತಿಯ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಇದೇ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ ಮತ್ತು ಒಂದೆರಡು ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲಗಳ ಪ್ರಕಾರ, ಐದು ಫ್ರಾಂಚೈಸಿಗಳಿಂದ ಮಹಿಳಾ ಕ್ರಿಕೆಟಿಗರ ಹರಾಜು ಪ್ರಕ್ರಿಯೆಗೆ ಸಿದ್ಧತೆ ಆರಂಭಿಸಿದ್ದು, ದಕ್ಷಿಣ ಮುಂಬೈನ ದೊಡ್ಡ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ತಿಳಿಸಿವೆ.

WIPL 2023: ಮಹಿಳಾ IPLನಲ್ಲಿ ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿWIPL 2023: ಮಹಿಳಾ IPLನಲ್ಲಿ ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿ

ದಿನವಿಡೀ ನಡೆಯುವ ಹರಾಜು ಸಮಾರಂಭಕ್ಕೆ ತಯಾರಿಯನ್ನು ಪ್ರಾರಂಭಿಸಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣದ ಯೋಜನೆಗಳನ್ನು ಮಾಡಲು ಬಿಸಿಸಿಐನಿಂದ ಮನವಿ ಮಾಡಲಾಗಿದೆ.

ಮಹಿಳಾ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಗೆ ಐದು ಹೊಸ ತಂಡಗಳನ್ನು ಘೋಷಿಸಿಸಲಾಗಿದ್ದು, ಮಾರ್ಚ್ 4ರಿಂದ 24ರ ನಡುವೆ ಅಧಿಕೃತ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ. ಕಳೆದ ವಾರ ಬಿಸಿಸಿಐ ಅಧಿಕಾರಿಗಳು ಫೆಬ್ರವರಿ 6ರೊಳಗೆ ಹರಾಜನ್ನು ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಿದ್ದರು. ಆದರೆ, ಫ್ರಾಂಚೈಸಿಗಳು ಸ್ವಲ್ಪ ಸಮಯವಕಾಶ ಕೇಳಿದ್ದರು.

WIPL 2023: Womens IPL Auction Likely To Be Held On February 13 In Mumbai

ಕನಿಷ್ಠ ಮೂರು ಮಹಿಳಾ ಐಪಿಎಲ್ ಫ್ರಾಂಚೈಸಿಗಳು ತಮ್ಮ ಕೋಚಿಂಗ್ ಸಿಬ್ಬಂದಿಯನ್ನು ಒಟ್ಟುಗೂಡಿಸಲು ಕನಿಷ್ಠ ಒಂದು ವಾರದವರೆಗೆ ಹರಾಜು ಇವೆಂಟ್ ಅನ್ನು ಮುಂದೂಡಲು ಬಿಸಿಸಿಐಗೆ ವಿನಂತಿಸಿದ್ದಾರೆ.

ವಿನಂತಿಯ ಹಿಂದಿನ ಮತ್ತೊಂದು ಕಾರಣವೆಂದರೆ ಐದು ಮಹಿಳಾ ಐಪಿಎಲ್ ಫ್ರಾಂಚೈಸಿಗಳ ಹೆಚ್ಚಿನ ಮಾಲೀಕರು ದಕ್ಷಿಣ ಆಫ್ರಿಕಾದ SA20 ಲೀಗ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ILT20 ಲೀಗ್‌ನಲ್ಲಿ ತಂಡಗಳನ್ನು ಹೊಂದಿದ್ದಾರೆ. ಇದರ ಅಂತಿಮ ಪಂದ್ಯಗಳು ಫೆಬ್ರವರಿ 11 ಮತ್ತು 12ರಂದು ನಡೆಯಲಿವೆ.

ಹೀಗಾಗಿ, ಐಪಿಎಲ್ ತಂಡಗಳ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿ ಒಂದೇ ಸಂದರ್ಭದಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಂಡು ಹರಾಜು ಪ್ರಕ್ರಿಯೆ ನಡೆಸುವಂತೆ ಫ್ರಾಂಚೈಸಿಗಳು ತಿಳಿಸಿವೆ.

22 ಪಂದ್ಯಗಳು ನಡೆಯುವ ಮಹಿಳಾ ಪಂದ್ಯಾವಳಿಯಲ್ಲಿ ಅದಾನಿ ಗ್ರೂಪ್, ರಿಲಯನ್ಸ್ ಬೆಂಬಲಿತ ಇಂಡಿಯಾವಿನ್ ಸ್ಪೋರ್ಟ್ಸ್, ಕ್ಯಾಪ್ರಿ ಗ್ಲೋಬಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ತಂಡಗಳ ಮಾಲೀಕತ್ವ ಹೊಂದಿವೆ.

ಮಹಿಳಾ ಐಪಿಎಲ್ ಪಂದ್ಯಾವಳಿಯನ್ನು ಮುಂಬೈ ಬ್ರಬೋರ್ನ್ ಸ್ಟೇಡಿಯಂ ಮತ್ತು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಡಿಸುವ ನಿರೀಕ್ಷೆಯಿದೆ. ವಾಂಖೆಡೆ ಸ್ಟೇಡಿಯಂ ಅನ್ನು ಈಗಾಗಲೇ ಪುರುಷರ ಐಪಿಎಲ್ ಉದ್ಘಾಟನಾ ಪಂದ್ಯಕ್ಕಾಗಿ ಮೀಸಲಿಡಲಾಗಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಅನ್ನು ಬ್ಯಾಕ್-ಅಪ್ ಆಗಿ ಆಯ್ಕೆ ಮಾಡಲಾಗಿದೆ.

Story first published: Thursday, February 2, 2023, 18:59 [IST]
Other articles published on Feb 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X