ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಏಷ್ಯಾ ಕಪ್ 2022: ಥೈಲ್ಯಾಂಡ್ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ವನಿತೆಯರು

Womens Asia Cup 2022: India Women Beat Thailand Women By 74 Runs To Reach Final

ಗುರುವಾರ ಸಿಲ್ಹೆಟ್‌ನಲ್ಲಿ 74 ರನ್‌ಗಳಿಂದ ಥಾಯ್ಲೆಂಡ್ ಮಹಿಳಾ ತಂಡವನ್ನು ಸೋಲಿಸಿದ ಭಾರತ ತಂಡವು ಮಹಿಳಾ ಏಷ್ಯಾಕಪ್‌ನ ಫೈನಲ್ ತಲುಪಿದೆ. 149 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಥೈಲ್ಯಾಂಡ್ 74 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು, ದೀಪ್ತಿ ಶರ್ಮಾ ಮೂರು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು, ಶಫಾಲಿ ವರ್ಮಾ ಅವರ 42 ರನ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 36 ರನ್‌ಗಳ ಬಿರುಸಿನ ಪ್ರದರ್ಶನದಿಂದ ಭಾರತವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲು ಸಾಧ್ಯವಾಯಿತು. ಥೈಲ್ಯಾಂಡ್ ಪರ ಸೊರ್ನರಿನ್ ಟಿಪ್ಪೋಚ್ 24 ರನ್‌ಗಳಿಗೆ 3 ವಿಕೆಟ್‌ಗಳೊಂದಿಗೆ ಅತ್ಯುತ್ತಮ ಬೌಲರ್ ಆದರು.

T20 World Cup: ಟಿ20 ವಿಶ್ವಕಪ್ 2022ರಲ್ಲಿ ಸೆಮಿಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಿದ ರವಿಶಾಸ್ತ್ರಿT20 World Cup: ಟಿ20 ವಿಶ್ವಕಪ್ 2022ರಲ್ಲಿ ಸೆಮಿಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಿದ ರವಿಶಾಸ್ತ್ರಿ

ಮೊಟ್ಟಮೊದಲ ಬಾರಿಗೆ ಮಹಿಳಾ ಏಷ್ಯಾ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಥೈಲ್ಯಾಂಡ್ ಭಾರತ ವಿರುದ್ಧ ಸೋಲುವ ಮೂಲಕ ತನ್ನ ಅಭಿಯಾನ ಮುಗಿಸಿತು. ಲೀಗ್ ಹಂತದಲ್ಲಿ ಪಾಕಿಸ್ತಾನ ಮಹಿಳಾ ತಂಡವನ್ನು ಸೋಲಿಸಿ ಅಚ್ಚರಿ ಮೂಡಿಸಿತ್ತು.

Womens Asia Cup 2022: India Women Beat Thailand Women By 74 Runs To Reach Final

ಇದಕ್ಕೂ ಮೊದಲು, ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್ 2022ರ ಸೆಮಿಫೈನಲ್‌ನಲ್ಲಿ ಥೈಲ್ಯಾಂಡ್ ನಾಯಕಿ ನರುಮೊಲ್ ಚೈವಾಯ್ ಟಾಸ್ ಗೆದ್ದು ಭಾರತ ವಿರುದ್ಧ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಭಾರತ ಇದುವರೆಗೆ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದೆ, ಪಾಕಿಸ್ತಾನದ ವಿರುದ್ಧದ ಏಕೈಕ ಸೋಲು ಅನುಭವಿಸಿದೆ.

ಏಷ್ಯಾ ಕಪ್‌ನಲ್ಲಿ ವುಮೆನ್-ಇನ್-ಬ್ಲೂ ಫೈನಲ್‌ನಲ್ಲಿ ಸ್ಥಾನ ಗಟ್ಟಿಮಾಡಿಕೊಂಡರು ಮತ್ತು ಶನಿವಾರ (ಅಕ್ಟೋಬರ್ 15) ರಂದು ಫೈನಲ್ ಪಂದ್ಯ ನಡೆಯಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆ ಎರಡನೇ ಸೆಮಿಫೈನಲ್ ಗುರುವಾರ ನಡೆಯಲಿದೆ.

ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಸತತ 8ನೇ ಬಾರಿಗೆ ಫೈನಲ್‌ಗೆ ಅರ್ಹತೆ ಗಳಿಸಿದೆ. ಥೈಲ್ಯಾಂಡ್ ಪರ ನರುಮೊಲ್ ಚೈವಾಯ್ ಮತ್ತು ನಟ್ಟಾಯ ಬೂಚತಮ್ ಇಬ್ಬರೂ ಕ್ರಮವಾಗಿ 21 ರನ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ ಮೂರು ಹಾಗೂ ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಪಡೆದರು.

149 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಥೈಲ್ಯಾಂಡ್‌‌ಗೆ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಅವರು ಆರಂಭಿಕ ಆಟಗಾರ್ತಿ ನನ್ನಪತ್ ಕೊಂಚರೊಯೆಂಕೈ ಅವರನ್ನು ಐದು ರನ್‌ಗಳಿಗೆ ಔಟ್ ಮಾಡುವ ಮೂಲಕ ಕೆಟ್ಟ ಆರಂಭವನ್ನು ಪಡೆದರು. ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ದೀಪ್ತಿ ಮತ್ತೊಮ್ಮೆ ಥೈಲ್ಯಾಂಡ್‌ ಬ್ಯಾಟರ್ ಡೀಪ್ ಮಿಡ್-ವಿಕೆಟ್‌ನಲ್ಲಿ ಪೂಜಾ ವಸ್ತ್ರಾಕರ್‌ಗೆ ಸುಲಭವಾದ ಕ್ಯಾಚ್ ಅನ್ನು ಕೈಚೆಲ್ಲುತ್ತಿದ್ದಂತೆ ನತ್ತಕನ್ ಚಂತಮ್ ಪ್ಯಾಕಿಂಗ್ ಕಳುಹಿಸಿದರು.

ದೀಪ್ತಿ ಶರ್ಮಾ ತನ್ನ ಕೊನೆಯ ಓವರ್‌ನಲ್ಲಿ ಸೋರ್ನರಿನ್ ಟಿಪ್ಪೋಚ್ ಅವರನ್ನು ಐದು ರನ್‌ಗಳಿಗೆ ಔಟ್ ಮಾಡುವ ಮೂಲಕ ಇನ್ನಿಂಗ್ಸ್‌ನ ಮೂರನೇ ವಿಕೆಟ್ ಪಡೆದರು. ಇದಾದ ನಂತರ ರೇಣುಕಾ ಸಿಂಗ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಚನಿಡಾ ಸುಟ್ಟಿರುವಾಂಗ್ ಅವರನ್ನು ಔಟ್ ಮಾಡುವ ಮೂಲಕ ಥೈಲ್ಯಾಂಡ್‌ ಮಧ್ಯಮ ಕ್ರಮಾಂಕವನ್ನು ಮುರಿದರು.

15 ಓವರ್‌ಗಳ ನಂತರ, ಥೈಲ್ಯಾಂಡ್‌ 50 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು ಮತ್ತು ನಿಯಮಿತ ಮಧ್ಯಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು. ಉತ್ತಮ ಸೆಟ್ ಬ್ಯಾಟರ್ ನಟ್ಟಯಾ ಬೂಚತಮ್ ಅವರನ್ನು 29 ಎಸೆತಗಳಲ್ಲಿ 21 ರನ್ ಗಳಿಸಿ ಸ್ನೇಹ್ ರಾಣಾಗೆ ಎಲ್‌ಬಿಡಬ್ಲ್ಯೂ ಮೂಲಕ ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು.

ರಾಜೇಶ್ವರಿ ಗಾಯಕ್ವಾಡ್ ನಂತರ ಥೈಲ್ಯಾಂಡ್‌ ತಂಡಕ್ಕೆ ಎರಡು ಹೊಡೆತಗಳನ್ನು ನೀಡಿದರು, ನಾಯಕಿ ನರುಯೆಮೊಲ್ ಚೈವಾಯ್ 21 ಮತ್ತು ಫನ್ನಿತಾ ಮಾಯಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಥೈಲ್ಯಾಂಡ್‌ 72/8ಕ್ಕೆ ತತ್ತರಿಸಿತು. ಕೊನೆಯ ಎರಡು ಓವರ್‌ಗಳಲ್ಲಿ ಭಾರತದ ಬೌಲರ್‌ಗಳು ಥೈಲ್ಯಾಂಡ್‌ ಬ್ಯಾಟರ್‌ಗಳನ್ನು ರನ್ ಗಳಿಸದಂತೆ ನಿರ್ಬಂಧಿಸಿದರು ಮತ್ತು ಅವರ ಇನ್ನಿಂಗ್ಸ್ ಅನ್ನು 74/9ಕ್ಕೆ ಕೊನೆಗೊಳಿಸಿದರು ಮತ್ತು 74 ರನ್‌ಗಳ ಗೆಲುವು ಮತ್ತು ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿ ಸ್ಥಾನ ಪಡೆದರು.

ಥೈಲ್ಯಾಂಡ್ ಮಹಿಳೆಯರು: ನನ್ನಪತ್ ಕೊಂಚರೊಯೆಂಕೈ(ವಿಕೆಟ್ ಕೀಪರ್), ನತ್ತಕನ್ ಚಂತಮ್, ನರುಯೆಮೊಲ್ ಚೈವಾಯ್(ನಾಯಕಿ), ಚನಿದಾ ಸುತ್ತಿರುಯಾಂಗ್, ಸೊರ್ನ್ನರಿನ್ ಟಿಪ್ಪೊಚ್, ಫನ್ನಿತಾ ಮಾಯಾ, ರೋಸೆನನ್ ಕಾನೊಹ್, ನಟ್ಟಾಯ ಬೂಚತಮ್, ಒನ್ನಿಚಾ ಕಮ್ಚೊಂಫು, ತಿಪಾಟ್ಚಾ ಪುಟ್ಟವಾಂಗ್, ನಂತಿತ ಬೂನ್ಸುಖಂ

ಭಾರತ ಮಹಿಳೆಯರು: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

Story first published: Thursday, October 13, 2022, 12:30 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X