ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Women's IPL: ಬೆಂಗಳೂರು ತಂಡ ಖರೀದಿಸಿದ ಆರ್​ಸಿಬಿ ಫ್ರಾಂಚೈಸಿ: 4669 ಕೋಟಿ ರುಪಾಯಿಗೆ 5 ತಂಡಗಳು ಹರಾಜು

Womens Premier League : RCB Buys Bengaluru City Based Womens IPL Franchise

ಬಹು ನಿರೀಕ್ಷಿತ ಮಹಿಳಾ ಐಪಿಎಲ್‌ ತಂಡಗಳ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬೆಂಗಳೂರು ಮೂಲದ ತಂಡವನ್ನು ಖರೀದಿ ಮಾಡಿದೆ. ಉಳಿದಂತೆ ಅಂಬಾನಿ, ಅದಾನಿ, ಡೆಲ್ಲಿ ಕ್ಯಾಪಿಟಲ್‌ ಮತ್ತು ಕ್ಯಾಪ್ರಿ ಗ್ಲೋಬಲ್ ನಾಲ್ಕು ತಂಡಗಳನ್ನು ಖರೀದಿ ಮಾಡಿವೆ. ಮಹಿಳಾ ಐಪಿಎಲ್‌ ಬದಲಾಗಿ ಮಹಿಳಾ ಪ್ರೀಮಿಯರ್ ಲೀಗ್‌ ಎಂದು ನಾಮಕರಣ ಮಾಡಲಾಗಿದೆ.

ಬೆಂಗಳೂರು, ಅಹಮದಾಬಾದ್, ಡೆಲ್ಲಿ, ಮುಂಬೈ, ಲಕ್ನೋ ಮೂಲದ 5 ತಂಡಗಳು ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಸೆಣೆಸಲಿವೆ. ಬಿಸಿಸಿಐ ಐದು ತಂಡಗಳ ಹರಾಜಿನಿಂದ ಬರೋಬ್ಬರಿ 4669 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ.

ICC Ranking: ಏಕದಿನ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್ICC Ranking: ಏಕದಿನ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್

ಅಹಮದಾಬಾದ್ ಮೂಲದ ಫ್ರಾಂಚೈಸಿಯನ್ನು ಅದಾನಿ ಒಡೆತನದ ಅದಾನಿ ಸ್ಪೋರ್ಟ್ಸ್‌ಲೈನ್‌ ಪ್ರೈವೇಟ್ ಲಿಮಿಟೆಡ್ 1289 ಕೋಟಿ ರುಪಾಯಿಗೆ ಖರೀದಿ ಮಾಡಿದೆ. ಮುಂಬೈ ಮೂಲದ ತಂಡವನ್ನು ಅಂಬಾನಿ ಒಡೆತನದ ಇಂಡಿಯಾ ವಿನ್ ಸ್ಪೋರ್ಟ್ಸ್‌ ಪ್ರೈವೇಟ್ ಲಿಮಿಟೆಡ್ 912.99 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದೆ.

ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್‌ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೂಲಕ ತಂಡಕ್ಕೆ 901 ಕೋಟಿ ರುಪಾಯಿ ನೀಡಿದೆ. ಜೆಎಸ್‌ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ 810 ಕೋಟಿ ರುಪಾಯಿ ನೀಡಿ ಡೆಲ್ಲಿ ಮೂಲದ ತಂಡವನ್ನು ಖರೀದಿ ಮಾಡಿದೆ. ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ 757 ಕೋಟಿ ರುಪಾಯಿ ನೀಡಿ ಲಖ್ನೋ ಮೂಲದ ತಂಡವನ್ನು ಖರೀದಿ ಮಾಡಿದೆ.

ICC ODI Rankings: ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತICC ODI Rankings: ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ

ಬೆಂಗಳೂರು ತಂಡಕ್ಕೆ 901 ಕೋಟಿ ರುಪಾಯಿ

ಬೆಂಗಳೂರು ಮೂಲದ ಫ್ರಾಂಚೈಸಿಯನ್ನು ಖರೀದಿ ಮಾಡಿದ ವಿಚಾರವನ್ನು ಆರ್ ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಲೋಗೋವನ್ನು ಕೂಡ ಬದಲಾವಣೆ ಮಾಡಿದೆ. ಇನ್ನು ಬೆಂಗಳೂರು ಮೂಲದ ಮಹಿಳಾ ತಂಡವನ್ನು ಖರೀದಿ ಮಾಡಲು 9 ಬಿಡ್ಡರ್ ಗಳು ಪೈಪೋಟಿ ಮಾಡಿದ್ದಾಗಿ ಅದು ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಆದರೂ ಆರ್ ಸಿಬಿ ಫ್ರಾಂಚೈಸಿ 901 ಕೋಟಿ ರುಪಾಯಿಗೆ ಮಹಿಳಾ ಐಪಿಎಲ್‌ ತಂಡವನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ಆರ್​ಸಿಬಿ ಮಹಿಳಾ ತಂಡ ಖರೀದಿ ಮಾಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ನೀವಾದ್ರು ಕಪ್ ಗೆಲ್ಲಿ ಎಂದಿದ್ದಾರೆ.

 ಅಹಮದಾಬಾದ್ ಮೂಲದ ತಂಡಕ್ಕೆ ಹೆಚ್ಚಿನ ಮೊತ್ತ

ಅಹಮದಾಬಾದ್ ಮೂಲದ ತಂಡಕ್ಕೆ ಹೆಚ್ಚಿನ ಮೊತ್ತ

ಅಹಮದಾಬಾದ್ ಮೂಲದ ತಂಡವನ್ನು ಅದಾನಿ ಒಡೆತನದ ಅದಾನಿ ಸ್ಪೋರ್ಟ್ಸ್‌ಲೈನ್‌ ಪ್ರೈವೇಟ್ ಲಿಮಿಟೆಡ್ 1289 ಕೋಟಿ ರುಪಾಯಿಗೆ ಖರೀದಿ ಮಾಡಿದೆ. ಮಹಿಳಾ ಐಪಿಎಲ್‌ ತಂಡಗಳಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ತಂಡವೆನಿಸಿಕೊಂಡಿದೆ. ಈ ಮೂಲಕ ಅದಾನಿ ಗ್ರೂಪ್ ಕ್ರಿಕೆಟ್‌ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದೆ.

ಮುಂಬೈ ಮೂಲದ ಮಹಿಳಾ ತಂಡವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಾದ ಇಂಡಿಯಾ ವಿನ್ ಸ್ಪೋರ್ಟ್ಸ್‌ ಪ್ರೈವೇಟ್ ಲಿಮಿಟೆಡ್ 912.99 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು. ಇದು ಎರಡನೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ತಂಡವೆನಿಸಿಕೊಂಡಿದೆ.

ನಿರೀಕ್ಷೆಗಿಂತ ಹೆಚ್ಚು ಮೊತ್ತ ಪಡೆದ ಬಿಸಿಸಿಐ

ನಿರೀಕ್ಷೆಗಿಂತ ಹೆಚ್ಚು ಮೊತ್ತ ಪಡೆದ ಬಿಸಿಸಿಐ

5 ಮಹಿಳಾ ತಂಡಗಳ ಹರಾಜಿನಿಂದ ಬಿಸಿಸಿಐ ಸುಮಾರು 4 ಸಾವಿರ ಕೋಟಿ ರುಪಾಯಿಗಳ ಆದಾಯದ ನಿರೀಕ್ಷೆಯಲ್ಲಿತ್ತು. ಆದರೆ, ಮಹಿಳಾ ತಂಡಗಳನ್ನು ಕೊಳ್ಳಲು ಬಿಡ್ಡರ್ ಗಳು ಹೆಚ್ಚಿನ ಆಸಕ್ತಿ ತೋರಿದ್ದರಿಂದ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದೆ.

5 ತಂಡಗಳ ಹರಾಜಿನಿಂದ ಬಿಸಿಸಿಐ ಒಟ್ಟು 4669 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ. ಅತಿ ಶೀಘ್ರದಲ್ಲೇ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಐಪಿಎಲ್‌ಗೆ ಮುನ್ನವೇ ಮಹಿಳಾ ಪ್ರೀಮಿಯರ್ ಲೀಗ್ ನಡೆಸುವ ಯೋಜನೆಯಲ್ಲಿದೆ.

Story first published: Wednesday, January 25, 2023, 15:50 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X