ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಹಿಟ್ ವಿಕೆಟ್ : ಛಕಬ್ವಾ ಗೂ ಮುನ್ನ 8 ಬ್ಯಾಟ್ಸ್ ಮನ್

By Mahesh

ಬೆಂಗಳೂರು, ಫೆ.19: ವಿಶ್ವಕಪ್ 2015 ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಗುರುವಾರ ಜಿಂಬಾಬ್ವೆಯ ರೆಗಿಸ್ ಛಕಬ್ವಾ ಅವರು ಹಿಟ್ ವಿಕೆಟ್ ಮಾಡಿಕೊಂಡು ಔಟಾದರು. ವಿಶ್ವಕಪ್ ಇತಿಹಾಸದಲ್ಲಿ ಹಿಟ್ ವಿಕೆಟ್ ಮಾಡಿಕೊಂಡು ವಿಕೆಟ್ ಒಪ್ಪಿಸಿದ ಆಟಗಾರರ ಪಟ್ಟಿಗೆ ಛಕಬ್ವಾ ಹೊಸ ಸೇರ್ಪಡೆಯಾದರು.

| ವಿಶ್ವಕಪ್ ವಿಶೇಷ ಪುಟ

ಜಿಂಬಾಬ್ವೆ ಪರ ಸಿಕಂದರ್ ರಾಜಾ ಜೊತೆಗೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಸಿದ ಛಕಬ್ವಾ ಅವರು ಮೊಹಮ್ಮದ್ ತೌಕಿರ್ ಬೌಲಿಂಗ್ ನಲ್ಲಿ ಹಿಟ್ ವಿಕೆಟ್ ಮಾಡಿಕೊಂಡರು. 62 ಎಸೆತಗಳಲ್ಲಿ 4 ಬೌಂಡರಿ ಗಳಿಸಿ 35ರನ್ ಹೊಡೆದಿದ್ದ ಛಕಬ್ವಾ ಹಿಟ್ ವಿಕೆಟ್ ಆಗಿ ಔಟ್ ಆಗುವ ಮೂಲಕ ವಿಶ್ವಕಪ್ ದಾಖಲೆ ಪುಟ ಸೇರಿದರು.

World Cup 2015: List of hit wickets in WC, Kenya's Maurice Odumbe did it twice against WI

1975ನೇ ಮೊದಲ ವಿಶ್ವಕಪ್ ಟೂರ್ನಿಯಲ್ಲೇ ಹಿಟ್ ವಿಕೆಟ್ ಔಟ್ ದಾಖಲಾಗಿತ್ತು. ಇಲ್ಲಿ ತನಕ 8 ಬಾರಿ ಈ ರೀತಿ ಔಟ್ ಕಂಡು ಬಂದಿದೆ. ಕೀನ್ಯಾದ ಮಾರಿಸ್ ಒಡುಂಬೆ ಎರಡು ಬಾರಿ(1996, 2003) ಹಿಟ್ ವಿಕೆಟ್ ಮಾಡಿಕೊಂಡಿದ್ದು ವಿಶೇಷ.

ಹಿಟ್ ವಿಕೆಟ್ ಗೆ ಬಲಿಯಾದ ಆಟಗಾರರ ಪಟ್ಟಿ ಇಂತಿದೆ:

* ರಾಯ್ ಫೆಡ್ರಿಕ್ಸ್ 7ರನ್ ಗಳಿಸಿದ್ದಾಗ (ವೆಸ್ಟ್ ಇಂಡೀಸ್) vs ಆಸ್ಟ್ರೇಲಿಯಾ, ಲಾರ್ಡ್ಸ್, 1975

* ಫ್ರಾಂಕ್ಲಿನ್ ಡೆನಿಸ್ (ಕೆನಡಾ) 21 ರನ್ ಗಳಿಸಿದ್ದಾಗ vs ಇಂಗ್ಲೆಂಡ್, ಓಲ್ಡ್ ಟ್ರಾಫಾರ್ಡ್, 1979.

* ಮಾರೀಸ್ ಒಡುಂಬೆ (ಕೀನ್ಯಾ) 6 ರನ್ ಗಳಿಸಿದ್ದಾಗ vs ವೆಸ್ಟ್ ಇಂಡೀಸ್, ಪುಣೆ, 1996.

* ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ) 3 ರನ್ ಗಳಿಸಿದ್ದಾಗ vs ವೆಸ್ಟ್ ಇಂಡೀಸ್, ಕರಾಚಿ, 1996.

* ಜೋ ಹ್ಯಾರೀಸ್ (ಕೆನಡಾ) 9ರನ್ ಗಳಿಸಿದ್ದಾಗ vs ಶ್ರೀಲಂಕಾ, ಪಾರ್ಲ್, 2003.

* ಮಾರೀಸ್ ಒಡುಂಬೆ (ಕೀನ್ಯಾ) 0 ರನ್ ಗಳಿಸಿದ್ದಾಗ vs ವೆಸ್ಟ್ ಇಂಡೀಸ್, ಕಿಂಬರ್ಲಿ, 2003.

* ವುಸಿ ಸಿಬಾಂಡಾ (ಜಿಂಬಾಬ್ವೆ) 67 ರನ್ ಗಳಿಸಿದ್ದಾಗ vs ಐರ್ಲೆಂಡ್, ಕಿಂಗ್ಸ್ ಸ್ಟನ್, 2007.

* ರೇಗಿಸ್ ಛಕಬ್ವಾ (ಜಿಂಬಾಬ್ವೆ) 35 ರನ್ ಗಳಿಸಿದ್ದಾಗ vs ಯುಎಇ, ನೆಲ್ಸನ್, 2015

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X