ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಬಾಂಗ್ಲಾ ಸೆದೆಬಡಿದು ಸೆಮಿಫೈನಲ್‌ ತಲುಪಿದ ಟೀಮ್‌ ಇಂಡಿಯಾ

World Cup 2019 Live: India vs Bangladesh, Match-40

ಬರ್ಮಿಂಗ್‌ಹ್ಯಾಮ್‌, ಜುಲೈ 02: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಟೀಮ್‌ ಇಂಡಿಯಾ, ಅಪಾಯಕಾರಿ ಬಾಂಗ್ಲಾದೇಶ ತಂಡವನ್ನು 28 ರನ್‌ಗಳ ಜಯ ದಾಖಲಿಸಿ ಟೂರ್ನಿಯಲ್ಲಿ ಇನ್ನೊಂದು ಲೀಗ್‌ ಪಂದ್ಯ ಬಾಕಿ ಇರುವಾಗಲೇ ಸೆಮಿಫೈನಲ್ಸ್‌ ತಲುಪಿದ ಎರಡನೇ ತಂಡ ಎನಿಸಿಕೊಂಡಿದೆ.

ವಿಶ್ವಕಪ್‌: ಭಾರತ vs ಬಾಂಗ್ಲಾದೇಶ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43683

ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತನ್ನ ಪಾಲಿನ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 314 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ 48 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಬಾಂಗ್ಲಾ ಪರ ಶಾಕಿಬ್‌ ಅಲ್‌ ಹಸನ್‌ (66) ಮತ್ತು ಮೊಹಮ್ಮದ್‌ ಸೈಫೂದ್ದೀನ್‌ (51*) ಅರ್ಧಶತಕ ದಾಖಲಿಸಿ ಹೋರಾಟ ಪ್ರದಶರ್ಶಿಸಿದರೆ, ಭಾರತದ ಪರ ಅಬ್ಬರಿಸಿದ ಜಸ್‌ಪ್ರೀತ್‌ ಬುಮ್ರಾ 55ಕ್ಕೆ 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಹಾದರ್ದಿಕ್‌ ಪಾಂಡ್ಯ 60ಕ್ಕೆ 3 ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು.

ಇದಕ್ಕೂ ಮುನ್ನ ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌ ರಾಹುಲ್‌ ಮತ್ತು ರೋಹಿತ್‌ ಶರ್ಮಾ ತಲಾ ಅರ್ಧಶತಕಗಳೊಂದಿಗೆ ಶತಕದ ಜೊತೆಯಾಟವಾಡಿ ಭಾರತದ ಬೃಹತ್‌ ಮೊತ್ತಕ್ಕೆ ಬೇಕಿರುವ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದಾರೆ.

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರೋಹಿತ್‌ ಶಮರ್ಮಾ, ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ನಾಲ್ಕನೇ ಶತಕ ಬಾರಿಸಿದರು. 92 ಎಸೆತಗಳಲ್ಲಿ 7 ಫೋರ್‌ ಮತ್ತು 5 ಸಿಕ್ಸರ್‌ಗಳೊಂದಿಗೆ 104 ರನ್‌ಗಳನ್ನು ಚೆಚ್ಚಿ ವೃತ್ತಿ ಬದುಕಿನ 26ನೇ ಶತಕ ಬಾರಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಕೆ.ಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ದಾಖಲೆಯ 180 ರನ್‌ಗಳ ಜೊತೆಯಾಟವಾಡಿ, 92 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸಿ ಔಟಾದರು.

ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಗಳು ಆಗಿದ್ದು , ಕುಲ್ದೀಪ್‌ ಯಾದವ್‌ ಮತ್ತು ಕೇದಾರ್‌ ಜಾಧವ್‌ ಅವರ ಬದಲಾಗಿ ದಿನೇಶ್ ಕಾರ್ತಿಕ್‌ ಮತ್ತು ಭುವನೇಶ್ವರ್‌ ಕುಮಾರ್‌ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 314/9 (ರೋಹಿತ್‌ ಶರ್ಮಾ 104, ಕೆ.ಎಲ್‌ ರಾಹುಲ್‌ 77, ವಿರಾಟ್‌ ಕೊಹ್ಲಿ 26, ರಿಷಭ್‌ ಪಂತ್‌ 48, ಎಂ.ಎಸ್‌ ಧೋನಿ 35; ಮುಸ್ತಾಫಿಝುರ್‌ ರೆಹಮಾನ್‌ 59ಕ್ಕೆ 5).

ಬಾಂಗ್ಲಾದೇಶ: 48 ಓವರ್‌ಗಳಲ್ಲಿ 286/10 (ತಮೀಮ್‌ ಇಕ್ಬಾಲ್‌ 22, ಸೌಮ್ಯ ಸರ್ಕಾರ್‌ 33, ಶಾಕಿಬ್‌ ಅಲ್‌ ಹಸನ್‌ 66, ಮೊಹಮ್ಮದ್‌ ಸೈಫುದ್ದೀನ್‌ 51*; ಜಸ್‌ಪ್ರೀತ್‌ ಬುಮ್ರಾ 55ಕ್ಕೆ 4, ಹಾರ್ದಿಕ್‌ ಪಾಂಡ್ಯ 60ಕ್ಕೆ 3).

ತಂಡಗಳ ವಿವರ

ಭಾರತ (ಪ್ಲೇಯಿಂಗ್‌ 11): ಕೆ.ಎಲ್‌ ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಎಂ.ಎಸ್‌ ಧೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಯುಜ್ವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ಬಾಂಗ್ಲಾದೇಶ (ಪ್ಲೇಯಿಂಗ್‌ 11): ತಮೀಮ್‌ ಇಕ್ಬಾಲ್‌, ಲಿಟನ್‌ ದಾಸ್‌, ಶಾಕಿಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌ (ವಿಕೆಟ್‌ಕೀಪರ್‌), ಸೌಮ್ಯ ಸರ್ಕಾರ್‌, ಸಬ್ಬೀರ್‌ ರೆಹಮಾನ್‌, ಮೊಸಾದೆಕ್‌ ಹೊಸೇನ್‌, ಮೊಹಮ್ಮದ್‌ ಸೈಫುದ್ದೀನ್‌, ರುಬೆಲ್‌ ಹೊಸೇನ್‌, ಮಶ್ರಫೆ ಮೊರ್ತಾಝ(ನಾಯಕ), ಮುಸ್ತಾಫಿಝುರ್‌ ರೆಹಮಾನ್‌.

{headtohead_cricket_3_10}

Story first published: Tuesday, July 2, 2019, 23:25 [IST]
Other articles published on Jul 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X