ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಆಡಲು ವೃದ್ದಿಮಾನ್ ಸಾಹಾ ಹಿಂದೇಟು: ಭಾರತ ತಂಡದಿಂದ ಸ್ಥಾನ ಕಳೆದುಕೊಂಡಿದ್ದಕ್ಕೆ ಬೇಸರವೇ?

Wriddhiman Saha

ಟೀಂ ಇಂಡಿಯಾದ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಫೆಬ್ರವರಿ 17 ರಿಂದ ಪ್ರಾರಂಭವಾಗುವ ಪ್ರತಿಷ್ಠಿತ ರಾಷ್ಟ್ರೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯಿಂದೆ ಹಿಂದೆ ಸರಿದಿದ್ದಾರೆ.

ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿರುವ ಅವರು ಈ ಋತುವಿನಲ್ಲಿ ದೂರ ಉಳಿಯಲು ಬಯಸಿದ್ದಾರೆ. ಟೀಂ ಇಂಡಿಯಾಗೆ ಸಹಾ ಅವರ ಸೇವೆ ಅಗತ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾವಿಸಿರುವ ಹಿನ್ನೆಲೆಯಲ್ಲಿ ಸಾಹಾ ಈ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ತಿಂಗಳು ಮೊಹಾಲಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ಭಾರತ ತಂಡದಿಂದ ಹೊರಗುಳಿಯಲಿದ್ದಾರೆ ಎಂದು ಸಹಾ ಅವರಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡ ಸಾಹಾ

ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡ ಸಾಹಾ

ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪರ ಆಡದೇ ಇದ್ದಾಗ ರಣಜಿ ಕ್ರಿಕೆಟ್ ಆಡಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದ್ರೆ ಟೀಮ್ ಇಂಡಿಯಾದಲ್ಲಿ ಟೀಮ್ ಕೀಪಿಂಗ್ ಜವಾಬ್ದಾರಿಯನ್ನು ರಿಷಬ್ ಪಂತ್ ಸಂಪೂರ್ಣವಾಗಿ ನಿರ್ವಹಿಸುತ್ತಿದ್ದಾರೆ ಎಂಬುದು ಈಗಾಗಲೇ ತಿಳಿದಿರುವ ವಿಷಯವಾಗಿದೆ. ಮತ್ತೊಂದೆಡೆ, ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ, ಕೆಎಸ್ ಭರತ್ ಯುವ ವಿಕೆಟ್ ಕೀಪರ್ ಆಗಿಯೂ ಪ್ರಭಾವ ಬೀರಿದರು. ಇದು ಅವರನ್ನು ತಂಡಕ್ಕೆ ಬ್ಯಾಕ್‌ಅಪ್ ಕೀಪರ್ ಆಗಿ ಮಾಡುತ್ತದೆ ಎಂದು ತಂಡದ ಮ್ಯಾನೇಜ್‌ಮೆಂಟ್ ಭಾವಿಸುತ್ತದೆ. ಹೀಗಾಗಿ ಸಹಾ ಅವರನ್ನು ಪಕ್ಕಕ್ಕೆ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪರೂಪದ ಸಾಧನೆ ಮಾಡಿದ ಸೂರ್ಯಕುಮಾರ್ ಯಾದವ್: ಪ್ರತಿ ಪಂದ್ಯದಲ್ಲೂ 30+ ರನ್

ಲಂಕಾ ವಿರುದ್ಧ ನಿಮ್ಮ ಆಯ್ಕೆಯಿಲ್ಲ ಎಂದು ನೇರವಾಗಿ ಸಾಹಾಗೆ ತಿಳಿಸಿದ್ದ ಆಡಳಿತ ಮಂಡಳಿ

ಲಂಕಾ ವಿರುದ್ಧ ನಿಮ್ಮ ಆಯ್ಕೆಯಿಲ್ಲ ಎಂದು ನೇರವಾಗಿ ಸಾಹಾಗೆ ತಿಳಿಸಿದ್ದ ಆಡಳಿತ ಮಂಡಳಿ

ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ಅವರನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದು ತಂಡದ ಆಡಳಿತ ಮಂಡಳಿ ಸಾಹಾಗೆ ನೇರವಾಗಿ ಹೇಳಿದರು. ಪಂತ್ ಗೆ ಪರ್ಯಾಯವಾಗಿ ಕೆಎಸ್ ಭರತ್ ಗೆ ಅವಕಾಶ ನೀಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಮುಂದುವರಿದರೆ ಪರಿಸ್ಥಿತಿಗೆ ಒಗ್ಗಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿಯೇ ಸಹಾ ಅವರನ್ನು ಪಕ್ಕಕ್ಕೆ ಇಡಲಾಗಿತ್ತು. ಈ ಪರಿಸ್ಥಿತಿಯಲ್ಲಿ, ಅವರು ಈ ಋತುವಿನ ರಣಜಿ ಟ್ರೋಫಿಯಲ್ಲಿ ಆಡುವುದಿಲ್ಲ ಎಂದು ಅವರು ಬಂಗಾಳ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದಾರೆ. ಹಾಗಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ ಕೂಡ ಅವರನ್ನು ರಣಜಿ ಟ್ರೋಫಿಗೆ ಆಯ್ಕೆ ಮಾಡಿಲ್ಲ.

ಐಪಿಎಲ್ ಮೆಗಾ ಹರಾಜು: ಈ 5 ಬಲಿಷ್ಠ ಆರಂಭಿಕ ಆಟಗಾರರ ಮೇಲೆ ಕಣ್ಣಿಟ್ಟಿದೆ ಚೆನ್ನೈ ಸೂಪರ್ ಕಿಂಗ್ಸ್

Surya Kumar Yadaw , ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಮಾಡಿದ್ದಾರೆ | Oneindia Kannada
ಈಗಾಗಲೇ ಸಾಹಾಗೆ 37 ವರ್ಷ ವಯಸ್ಸಾಗಿದೆ

ಈಗಾಗಲೇ ಸಾಹಾಗೆ 37 ವರ್ಷ ವಯಸ್ಸಾಗಿದೆ

ಆದರೆ, ಸಹಾ ಅವರಿಗೆ ಈಗಾಗಲೇ 37 ವರ್ಷ ವಯಸ್ಸಾಗಿರುವುದರಿಂದ ಆಯ್ಕೆ ಸಮಿತಿಯೂ ಯುವಕರತ್ತ ವಾಲುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಷಯದಿಂದ ನೋವಾಗಿದ್ದರೆ, ಇನ್ನು ಟೀಮ್ ಇಂಡಿಯಾ ಪರ ಆಡದಿದ್ದರೆ ರಣಜಿ ಟ್ರೋಫಿ ಯಾಕೆ ಆಡಬೇಕು ಎಂದು ಯೋಚಿಸಿದ್ದಾರೆ. ಸಾಹಾ ಟೀಂ ಇಂಡಿಯಾ ಪರ ಇದುವರೆಗೆ ಒಟ್ಟು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಮೂರು ಶತಕಗಳೊಂದಿಗೆ ಒಟ್ಟು 1,353 ರನ್ ಗಳಿಸಿದ್ದಾರೆ. 104 ಮಂದಿಯನ್ನು ವಿಕೆಟ್ ಹಿಂಬದಿ ಬಲಿ ತೆಗೆದುಕೊಂಡಿದ್ದಾರೆ. ಅದರಲ್ಲಿ 92 ಕ್ಯಾಚ್‌ಗಳು ಮತ್ತು 12 ಸ್ಟಂಪಿಂಗ್‌ಗಳು ಸೇರಿವೆ.

Story first published: Thursday, February 10, 2022, 9:59 [IST]
Other articles published on Feb 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X