ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಪರೂಪದ ಸಾಧನೆ ಮಾಡಿದ ಸೂರ್ಯಕುಮಾರ್ ಯಾದವ್: ಪ್ರತಿ ಪಂದ್ಯದಲ್ಲೂ 30+ ರನ್

Suryakumar yadav

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ವೃತ್ತಿಜೀವನದಲ್ಲಿ ಇದೇ ಕೇವಲ ಆರನೇ ಏಕದಿನ ಪಂದ್ಯವಾಗಿದೆ. ಈ ಪಂದ್ಯದಲ್ಲಿ 64 ರನ್ ಗಳಿಸಿದ ಸೂರ್ಯ ಆತಮ್ಮ ವೃತ್ತಿಜೀವನದ ಮೊದಲ ಆರು ಏಕದಿನ ಪಂದ್ಯಗಳಲ್ಲಿ ಪ್ರತಿ ಪಂದ್ಯದಲ್ಲೂ ಕನಿಷ್ಠ 30 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಅಪರೂಪದ ದಾಖಲೆಯನ್ನು ನಿರ್ಮಿಸಿದರು.

ಯಾದವ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 6 ಏಕದಿನ ಪಂದ್ಯಗಳಲ್ಲಿ 65 ರ ಬ್ಯಾಟಿಂಗ್ ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಸಾಧನೆಗೆ ಆಟಗಾರರು ಸೇರಿದಂತೆ ಅಭಿಮಾನಿಗಳು ಹೊಗಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ಆಧಾರವಾದ್ರು. ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬಂದ ವೇಳೆ ಭಾರತ 43 ರನ್ ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು.

ಬೊಂಬಾಟ್ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್

ಬೊಂಬಾಟ್ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್

ನಾಲ್ಕನೇ ವಿಕೆಟ್‌ಗೆ ರಾಹುಲ್ ಜೊತೆಗೂಡಿ ಸೂರ್ಯ ಉತ್ತಮ ಜೊತೆಯಾಟವಾಡಿದರು. ಇಬ್ಬರೂ ಸೇರಿ 91 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು. ಆದ್ರೆ ದುರದೃಷ್ಟವಶಾತ್ ರಾಹುಲ್ 49 ಗಳಿಸಿದ್ದಾಗ ರನೌಟ್ ಆದ್ರು. ವಿಕೆಟ್ ಉರುಳಿದರೂ ಸೂರ್ಯಕುಮಾರ್ ಯಾದವ್ ದೀಪಕ್ ಹೂಡಾ ಜೊತೆಗೂಡಿ ಇನ್ನಿಂಗ್ಸ್ ಮುನ್ನಡೆಸಿದರು. ಈ ಕ್ರಮದಲ್ಲಿ ಅವರು ತಮ್ಮ ವೃತ್ತಿಜೀವನದ ಎರಡನೇ ಅರ್ಧಶತಕವನ್ನೂ ಪೂರೈಸಿದರು. ಒಟ್ಟಾರೆ ಈ ಪಂದ್ಯದಲ್ಲಿ 83 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 5 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು.

ಸತತ 30ಕ್ಕೂ ಹೆಚ್ಚು ರನ್‌ಗಳಿಸಿದ ಮೊದಲ ಬ್ಯಾಟ್ಸ್‌ಮನ್

ಸತತ 30ಕ್ಕೂ ಹೆಚ್ಚು ರನ್‌ಗಳಿಸಿದ ಮೊದಲ ಬ್ಯಾಟ್ಸ್‌ಮನ್

ಈ ಇನ್ನಿಂಗ್ಸ್ ಮೂಲಕ ಸೂರ್ಯಕುಮಾರ್ ಯಾದವ್ ಕಳೆದ ಆರು ಪಂದ್ಯಗಳಿಂದ 30ಕ್ಕೂ ಹೆಚ್ಚು ರನ್‌ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದ್ರು. ಈ ಮೊದಲು ದಕ್ಷಿಣ ಆಫ್ರಿಕಾದ ರ್ಯಾನ್ ಟೆನ್ ಡೋಸ್ಚೇಟ್, ನೆದರ್ಲೆಂಡ್ಸ್‌ನ ಟಾಮ್ ಕೂಪರ್ ಮತ್ತು ಪಾಕಿಸ್ತಾನ ಓಪನರ್ ಫಖಾರ್ ಜಮಾನ್ ಮೊದಲ ಐದು ಏಕದಿನ ಇನ್ನಿಂಗ್ಸ್‌ಗಳಲ್ಲಿ 30+ ರನ್ ಕಲೆಹಾಕಿದ್ದರು. ಆದ್ರೆ ಸೂರ್ಯ ಆರನೇ ಇನ್ನಿಂಗ್ಸ್‌ನಲ್ಲೂ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ.

ವಿರಾಟ್ ದಾಖಲೆ: ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡಿದ ಭಾರತದ 5ನೇ ಕ್ರಿಕೆಟಿಗ ಕೊಹ್ಲಿ

ಸೂರ್ಯಕುಮಾರ್ ಯಾದವ್ ಕಳೆದ 6 ಒಡಿಐ ಇನ್ನಿಂಗ್ಸ್‌

ಸೂರ್ಯಕುಮಾರ್ ಯಾದವ್ ಕಳೆದ 6 ಒಡಿಐ ಇನ್ನಿಂಗ್ಸ್‌

31*
53
40
39
34*
64 (ಇಂದು)

31 ವರ್ಷದ ಸೂರ್ಯಕುಮಾರ್ ಯಾದವ್ 6 ಏಕದಿನ ಪಂದ್ಯವನ್ನಾಡಿದ್ದು ಇದರಲ್ಲಿ ಎರಡು ಬಾರಿ ನಾಟೌಟ್ ಸಹಿತ ಒಟ್ಟು 261 ರನ್ ಕಲೆಹಾಕಿದ್ದಾರೆ. 103.57ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಸೂರ್ಯ 65.25ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದಾರೆ. ವಿಂಡೀಸ್ ವಿರುದ್ಧ ಇಂದಿನ ಅರ್ಧಶತಕ ಸೇರಿ ಎರಡು ಅರ್ಧಶತಕ ಇವರ ಹೆಸರಲ್ಲಿದೆ.

ಇನ್ನು 11 ಟಿ20 ಪಂದ್ಯಗಳಲ್ಲಿ 34.86ರ ಬ್ಯಾಟಿಂಗ್ ಸರಾಸರಿಯಲ್ಲಿ 244 ರನ್ ಕಲೆಹಾಕಿದ್ದು, 155.41ರ ಸ್ಟ್ರೈಕ್‌ರೇಟ್‌ನಲ್ಲಿ ಮೂರು ಅರ್ಧಶತಕ ದಾಖಲಿಸಿದ್ದಾರೆ.

ಐಪಿಎಲ್ ಮೆಗಾ ಹರಾಜು: ಈ 5 ಬಲಿಷ್ಠ ಆರಂಭಿಕ ಆಟಗಾರರ ಮೇಲೆ ಕಣ್ಣಿಟ್ಟಿದೆ ಚೆನ್ನೈ ಸೂಪರ್ ಕಿಂಗ್ಸ್

West Indies ವಿರುದ್ಧ‌ದ ಪಂದ್ಯದಲ್ಲಿ ಮಿಂಚಿದ ಕನ್ನಡಿಗರು | IND vs WI 2nd ODI | Oneindia Kannada
ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ವಿಶೇಷ ಪ್ರತಿಭೆ

ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ವಿಶೇಷ ಪ್ರತಿಭೆ

ಸೂರ್ಯಕುಮಾರ್ ಯಾದವ್ ಕೆಲವೇ ಕೆಲವು ಟೀಂ ಇಂಡಿಯಾದ ವಿಶೇಷ ಬ್ಯಾಟ್ಸ್‌ಮನ್ ಗಳಲ್ಲಿ ಒಬ್ಬರಾಗಿದ್ದಾರೆ. ಈತ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ವೆಸ್ಟ್ ಇಂಡೀಸ್ ವಿರುದ್ಧ ಮೊದಲೆರಡು ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಆರಂಭಿಕರಾಗಿ ಕಣಕ್ಕಿಳಿಯಲು ಹಿಂಜರಿಯುವುದಿಲ್ಲ.

ಇತ್ತೀಚೆಗೆ ಅಗತ್ಯ ಬಿದ್ದರೆ ಬೌಲಿಂಗ್ ಕೂಡ ಮಾಡುತ್ತೇನೆ ಎಂದಿದ್ದಾರೆ. ಪ್ರತಿ ದಿನ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಅಭ್ಯಾಸ ಮಾಡುವುದಾಗಿ ಹೇಳಿದರು. ಅವರ ಅಗತ್ಯತೆ ಆಧರಿಸಿ ತಂಡ ಅವಕಾಶ ನೀಡಿದರೆ ಖಂಡಿತ ಬೌಲಿಂಗ್ ಮಾಡುತ್ತೇನೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

Story first published: Wednesday, February 9, 2022, 19:57 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X