ಬೆಂಗಳೂರು, ಆಗಸ್ಟ್ 05: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು(ಆಗಸ್ಟ್ 05) ಸ್ನೇಹಿತರ ದಿನಾಚರಣೆ ಆಚರಿಸಲಾಗುತ್ತಿದೆ. ಕ್ರೀಡಾಲೋಕದಲ್ಲಿ ಕೂಡಾ ವಿಶೇಷ ಟ್ವೀಟ್ ಗಳು ಹರಿದು ಬಂದಿವೆ.
ಕ್ರಿಕೆಟ್ ಲೋಕದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರು ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ, ಧೋನಿ ಹಾಗೂ ರೈನಾ, ಯುವರಾಜ್ ಹಾಗೂ ಹರ್ಭಜನ್ ಸಿಂಗ್ ಹೀಗೆ ಗೆಳೆಯರ ಜೋಡಿ ಬೆಳೆಯುತ್ತದೆ.
ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ಸಚಿನ್ ಅವರನ್ನು ಶೋಲೆ ಚಿತ್ರದ 'ಜೈ' ಹಾಗೂ ತಮ್ಮನ್ನು 'ವೀರು' ಪಾತ್ರಕ್ಕೆ ಹೋಲಿಸಿ ಟ್ವೀಟ್ ಮಾಡಿ, ಗಮನ ಸೆಳೆದಿದ್ದಾರೆ. ಕಾಂಬ್ಳಿ ಅಲ್ಲದೆ, ರೋಹಿತ್ ಶರ್ಮ, ಸಚಿವ ರಾಜ್ಯವರ್ಧನ್ ರಾಥೋರ್ ಮುಂತಾದವರು ಟ್ವೀಟ್ ಮಾಡಿದ್ದಾರೆ.
ಸಚಿನ್ ಗಾಗಿ ಕಾಂಬ್ಳಿಯಿಂದ ವಿಶೇಷ ಟ್ವೀಟ್
ಸಚಿನ್ ಹಾಗೂ ನಾನು ಎಂದಿಗೂ ಗೆಳೆತನ ಮುರಿಯುವುದಿಲ್ಲ ಎಂದು ಶೋಲೆ ಚಿತ್ರದ ಹಾಡನ್ನು ಹಾಕಿದ್ದಾರೆ.
ಸೆಹ್ವಾಗ್ ಅವರ ಟ್ವೀಟ್
ಸ್ನೇಹಿತರು ನಮ್ಮ ಬದುಕಿನ ಕನ್ನಡಿಯಂತೆ, ಎಲ್ಲಾ ಸಮಯಕ್ಕೆ ನಮ್ಮ ಜೊತೆಗಿರುತ್ತಾರೆ ಎಂದು ಮಾಜಿ ಕ್ರಿಕೆಟರ್ ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ.
ಹರ್ಮನ್ ಪ್ರೀತ್ ಕೌರ್ ಟ್ವೀಟ್
ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಟ್ವೀಟ್ ಮಾಡಿದ್ದಾರೆ.
ರಾಜ್ಯವರ್ಧನ್ ರಾಥೋರ್ ರಿಂದ ಟ್ವೀಟ್
ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋರ್ ರಿಂದ ಟ್ವೀಟ್
ಮುಂಬೈ ಇಂಡಿಯನ್ ಟ್ವೀಟ್
ಹಳೆ ನೆನಪುಗಳನ್ನು ಕೆದುಕುತ್ತದೆ ಈ ದಿನ ಎಂದು ಟ್ವೀಟ್ ಮಾಡಿದ ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮರಿಂದ ಟ್ವೀಟ್
ಹೆಚ್ಚುದಿನಗಳ ನಿಮ್ಮ ಜತೆ ಇದ್ದು ಮರೆಯಾಗುವವರಲ್ಲ ನಿಜವಾದ ಗೆಳೆಯರುನಿಮ್ಮ ಜತೆಯಿದ್ದು, ನಿಮ್ಮ ಜತೆ ಬಿಡದಿರುವವರು ನಿಜವಾದ ಗೆಳೆಯರು ಎಂದು ಟ್ವೀಟ್ ಮಾಡಿದ ರೋಹಿತ್ ಶರ್ಮ
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed