ಕ್ರಿಕೆಟರ್ ಯುವರಾಜ್ ಸಿಂಗ್ ಮುಡಿಗೆ ಮತ್ತೊಂದು ಕಿರೀಟ

Posted By:

ನವದೆಹಲಿ: ಭಾರತದ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ಮುಡಿಗೆ ಮತ್ತೊಂದು ಕಿರೀಟ ದೊರೆತಿದೆ. ಗ್ವಾಲಿಯರ್ ನ ಐಟಿಎಂ ವಿಶ್ವವಿದ್ಯಾಲಯ ಯುವರಾಜ್ ಸಿಂಗ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಯುವರಾಜ್ ಕಡೆಗಣಿಸಿದ ಬಿಸಿಸಿಐಗೆ ಛೀಮಾರಿ, ಟ್ವೀಟ್ಸ್

ಭಾರತೀಯ ಕ್ರಿಕೆಟ್ ಹಾಗೂ ಸಮಾಜ ಸೇವೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡುತ್ತಿರುವುದಾಗಿ ಐಟಿಎಂ ವಿಶ್ವವಿದ್ಯಾಲಯ ತಿಳಿಸಿದೆ. ಗೌರವ ಡಾಕ್ಟರೇಟ್‌ ಸ್ವೀಕರಿಸಿದ ನಂತರ ಮಾತನಾಡಿದ ಯುವಿ, "ಈ ಗೌರವದಿಂದ ನನ್ನ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

Yuvraj Singh awarded doctorate by Gwalior-based university

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಭಾರತಕ್ಕೆ ತಂಡ ಸಾಕಷ್ಟು ಕೊಡುಗೆ ನೀಡಿರುವ ಯುವಿ, YouWeCan ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗೂ 2014ರಲ್ಲಿ ಯುವರಾಜ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2000ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಯುವರಾಜ್ ಸಿಂಗ್ ಇದೇ ಜೂನ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತದ ತಂಡದಲ್ಲಿ ಯುವರಾಜ್ ಸಿಂಗ್ ಅವರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದ ಮತ್ತೆ ಪುನಃ ತಂಡಕ್ಕೆ ಮರಳಲು ಪ್ರಯತ್ನ ನಡೆಸಿದ್ದಾರೆ.

Story first published: Friday, December 1, 2017, 17:22 [IST]
Other articles published on Dec 1, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ