ಐಪಿಎಲ್‌ನ ಯಾವುದೇ ಟೀಮಿನಲ್ಲೂ ನಾನು ನೆಲೆಯೂರಲಿಲ್ಲ: ಯುವಿ ಬೇಸರ

ನವದೆಹಲಿ, ಜುಲೈ 9: ಟೀಮ್ ಇಂಡಿಯಾ 2 ಬಾರಿ ವಿಶ್ವಕಪ್ ಗೆಲ್ಲುವಲ್ಲಿ (1 ಏಕದಿನ, 1 ಟಿ20) ಪ್ರಮುಖ ಪಾತ್ರ ವಹಿಸಿದ್ದ ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಯಾವುದೇ ತಂಡದಲ್ಲಿ ತಾನು ನೆಲೆಯೂರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಕಳೆದ ತಿಂಗಳಿನಲ್ಲಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಲ್ ರೌಂಡರ್ ಯುವಿ, ಐಪಿಎಲ್ ನಲ್ಲಿ ಬೇರೆ ಬೇರೆ 6 ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದರು. ಇದರಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದ ತಂಡಗಳಾದ ಸನ್ ರೈಸರ್ಸ್ ಹೈದರಾಬಾದ್ (2016) ಮತ್ತು ಮುಂಬೈ ಇಂಡಿಯನ್ಸ್ (2019) ಪರವೂ ಆಡಿದ್ದರು.

ವಿಶ್ವಕಪ್‌ ಸೆಮಿಫೈನಲ್‌ಗೆ ಶಮಿ, ಕುಲ್ದೀಪ್‌ ಅವರನ್ನು ಹೊರಗಿಟ್ಟಿದ್ದೇಕೆ?ವಿಶ್ವಕಪ್‌ ಸೆಮಿಫೈನಲ್‌ಗೆ ಶಮಿ, ಕುಲ್ದೀಪ್‌ ಅವರನ್ನು ಹೊರಗಿಟ್ಟಿದ್ದೇಕೆ?

2014ರ ಐಪಿಎಲ್ ಹರಾಜಿನಲ್ಲಿ ಯುವರಾಜ್ ಸಿಂಗ್ ಐಪಿಎಲ್ ಇತಿಹಾಸದಲ್ಲೇ ಅತೀ ದುಬಾರಿ ಆಟಗಾರ ಎನಿಸಿಕೊಂಡಿದ್ದವರು. ಆ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ಕೋಟಿ ರೂ.ಗಾಗಿ ಯುವಿಯನ್ನು ಖರೀದಿಸಿತ್ತು.

ವಿಶ್ವಕಪ್ 2019: ಸದ್ದಿಲ್ಲದೆ ವಿಶ್ವದಾಖಲೆ ಬರೆದ ಕೂಲ್ ಕ್ಯಾಪ್ಟನ್ ಧೋನಿವಿಶ್ವಕಪ್ 2019: ಸದ್ದಿಲ್ಲದೆ ವಿಶ್ವದಾಖಲೆ ಬರೆದ ಕೂಲ್ ಕ್ಯಾಪ್ಟನ್ ಧೋನಿ

'ಇದನ್ನು ವಿವರಿಸಿ ಹೇಳಲಾರೆ. ಆದರೆ ನಾನು ಐಪಿಎಲ್ ಯಾವುದೇ ಫ್ರಾಂಚೈಸಿಯಲ್ಲೂ ಸೆಟಲ್ ಆಗಲಿಲ್ಲ. ಒಂದು ಅಥವಾ ಎರಡು ಫ್ರಾಂಚೈಸಿಗಳಲ್ಲೇ ನಾನ್ಯಾವತ್ತೂ ನೆಲೆಯೂರಲಿಲ್ಲ' ಎಂದು ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ನ 91ನೇ ವಾರ್ಷಿಕ ಸಭೆಯಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ಸ್ವೀಕರಿಸುತ್ತ ಯುವಿ ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ರಾಹುಲ್ ದ್ರಾವಿಡ್ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ರಾಹುಲ್ ದ್ರಾವಿಡ್

ಟೂರ್ನಿಗಾಗಿ ನಡೆದ ಹರಾಜಿನ ಕ್ಷಣವನ್ನು ಸ್ಮಿರಿಸಿದ ಯುವರಾಜ್, 'ಬಹುಶಃ ಆರ್‌ಸಿಬಿಯಲ್ಲಿ ನಾನು ಐಪಿಎಲ್‌ನ ಅತ್ಯುತ್ತಮ ಸೀಸನ್ ಅನ್ನು ಅನುಭವಿಸಿದ್ದೇನೆ' ಎಂದರು. 37ರ ಹರೆಯದ ಯುವಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಧೋನಿಯಂತೆ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿಯಂತೆ ಯಾವತ್ತಿಗೂ ಒಂದೇ ತಂಡದಲ್ಲಿ ಮಿನುಗಿದವರಲ್ಲ. ಇದೇ ಬೇಸರವನ್ನು ಯುವಿ ಕಾರ್ಯಕ್ರಮದ ವೇಳೆ ತೋರಿಕೊಂಡರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 9, 2019, 18:35 [IST]
Other articles published on Jul 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X