ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿಗೆ ಯುವರಾಜ್ ಸಿಂಗ್-ಅಫ್ರಿದಿ ಬ್ಯಾಟಿಂಗ್

ರಾಜಕೀಯದಲ್ಲಿ ಸಿಕ್ಕಿ ಬಳಲುತ್ತಿದೆ ಭಾರತೀಯ ಕ್ರಿಕೆಟ್ | India | Cricket | Oneindia Kannada
Yuvraj Singh, Shahid Afridi bat for India-Pakistan bilateral cricket series

ನವದೆಹಲಿ, ಫೆಬ್ರವರಿ 12: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಪುನರಾರಂಭಗೊಳ್ಳೋದು ದೂರದ ಮಾತು. ಆದರೆ ಭಾರತದ ಕ್ರಿಕೆಟ್‌ ಪ್ರೇಮಿಗಳ ಆರಾದ್ಯ, ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಮತ್ತು ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ಇತ್ತಂಡಗಳು ಪರಸ್ಪರ ಕ್ರಿಕೆಟ್‌ ಆಡಿದರೆ ಒಳ್ಳೇದು ಎಂದು ಅಭಿಪ್ರಾಯಿಸಿದ್ದಾರೆ.

31 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮತ್ತೆ ನೆನಪಿಸಿದ ಟೀಮ್ ಇಂಡಿಯಾ!31 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮತ್ತೆ ನೆನಪಿಸಿದ ಟೀಮ್ ಇಂಡಿಯಾ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಯುವರಾಜ್ ಸಿಂಗ್ ಮತ್ತು ಶಾಹಿದ್ ಅಫ್ರಿದಿ ಇಬ್ಬರೂ ಸದ್ಯ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದಾರೆ. ಎಕ್ಸ್‌ಪೋ 2020 ದುಬೈ ಟೂರ್ನಿಯ ಫೈನಲ್‌ನಲ್ಲಿ ಇಬ್ಬರೂ ಆಡಲಿದ್ದಾರೆ.

ಈ ಭಾರತೀಯ ಕ್ರಿಕೆಟರ್ ಕಮ್ರನ್ ಅಕ್ಮಲ್ ಪಾಲಿನ ನೆಚ್ಚಿನ ಸಿಕ್ಸ್ ಹಿಟ್ಟರ್!ಈ ಭಾರತೀಯ ಕ್ರಿಕೆಟರ್ ಕಮ್ರನ್ ಅಕ್ಮಲ್ ಪಾಲಿನ ನೆಚ್ಚಿನ ಸಿಕ್ಸ್ ಹಿಟ್ಟರ್!

ಎಕ್ಸ್‌ಪೋ 2020 ದುಬೈ ಟೂರ್ನಿ ದುಬೈನಲ್ಲಿ 20 ಅಕ್ಟೋಬರ್‌ನಿಂದ 10 ಏಪ್ರಿಲ್ 2021ರ ವರೆಗೆ ನಡೆಯಲಿದೆ. ಅಂದ್ಹಾಗೆ, ಭಾರತ-ಪಾಕಿಸ್ತಾನ ಕದನ ಯಾಕೆ ಬೇಕೆಂದು ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಆ್ಯಷಸ್‌ಗಿಂತಲೂ ದೊಡ್ಡ ಸರಣಿ

ಆ್ಯಷಸ್‌ಗಿಂತಲೂ ದೊಡ್ಡ ಸರಣಿ

ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯ ಬಗ್ಗೆ ಮಾತನಾಡಿರುವ ಶಾಹಿದ್ ಅಫ್ರಿದಿ, ಇತ್ತಂಡಗಳ ಕ್ರಿಕೆಟ್‌ ಕದನ ಮತ್ತೆ ಶುರುವಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ; ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷನ್ ಸರಣಿಗಿಂತಲೂ ದೊಡ್ಡ ಮಟ್ಟದ ಕುತೂಹಲಕಾರಿ ಸರಣಿ ಎನಿಸಲಿದೆ ಎಂದೂ ಅಫ್ರಿದಿ ಹೇಳಿದ್ದಾರೆ.

ಕ್ರೀಡೆಯಲ್ಲಿ ರಾಜಕೀಯದ ಅಡ್ಡಗಾಲು ಬೇಡ

ಕ್ರೀಡೆಯಲ್ಲಿ ರಾಜಕೀಯದ ಅಡ್ಡಗಾಲು ಬೇಡ

'ನನ್ನ ಪ್ರಕಾರ, ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ಸರಣಿಯಲ್ಲಿ ಪಾಲ್ಗೊಂಡರೆ ಆ ಸರಣಿ ಆ್ಯಷಸ್ ಸರಣಿಗಿಂತಲೂ ದೊಡ್ಡದೆನಿಸಲಿದೆ. ಆದರೆ ಇದು ಸಾಧ್ಯವಾಗದಿರುವುದು ವಿಷಾದಕರ. ಕ್ರಿಕೆಟ್‌ ಪ್ರೇಮಿಗಳು ಪ್ರೀತಿಸುವ ಕ್ರೀಡೆಯ ಮಧ್ಯೆ ನಾವು ರಾಜಕೀಯವನ್ನು ಅಡ್ಡ ತರುತ್ತಿದ್ದೇವೆ. ಅದಾಗಬಾರದು. ರಾಜಕೀಯದ ಅಡ್ಡಗಾಲಿಲ್ಲದೆ ಕ್ರಿಕೆಟ್ ಮುಂದುವರೆಯುವಂತಾಗಬೇಕು,' ಎಂದು ಅಫ್ರಿದಿ ಕೋರಿಕೊಂಡಿದ್ದಾರೆ.

ಭಾರತ-ಪಾಕ್ ಕದನ ಚಂದವೆಂದ ಯುವಿ

ಭಾರತ-ಪಾಕ್ ಕದನ ಚಂದವೆಂದ ಯುವಿ

ಅಫ್ರಿದಿ ಮಾತಿಗೆ ಸಿಕ್ಸರ್ ಕಿಂಗ್ ಯುವರಾಜ್‌ ಕೂಡ ತಲೆದೂಗಿದ್ದಾರೆ. ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸರಣಿ ಪುನರಾರಂಭಿಸುವುದು ತಮ್ಮ ಕೈಲಿಲ್ಲ. ಆದರೆ ಕ್ರೀಡೆಯ ವಿಚಾರದಲ್ಲಿ ಪಾಕಿಸ್ತಾನ-ಭಾರತ ಉತ್ತಮ ಪ್ರತಿಸ್ಪರ್ಧಿಗಳು. ಎರಡೂ ದೇಶಗಳಲ್ಲೂ ಕ್ರೀಡಾ ಪ್ರೇಮಿಗಳಿದ್ದಾರೆ. ಹೀಗಾಗಿ ಭಾರತ-ಪಾಕ್ ಪಂದ್ಯಗಳು ಶುರುವಾದರೆ ನೋಡಲು ಚಂದ ಎಂದು ಯುವಿ ಹೇಳಿದ್ದಾರೆ.

ಆ ದಿನಗಳನ್ನು ನೆನಪಿಸಿಕೊಳ್ಳಬಲ್ಲೆ

ಆ ದಿನಗಳನ್ನು ನೆನಪಿಸಿಕೊಳ್ಳಬಲ್ಲೆ

'ಪಾಕಿಸ್ತಾನ ವಿರುದ್ಧ 2004, 2006 ಮತ್ತು 2008ರ ದ್ವಿಪಕ್ಷೀಯ ಸರಣಿಯಲ್ಲಿ ಆಡಿದ್ದನ್ನು ನಾನು ನೆನಪಿಸಿಕೊಳ್ಳಬಲ್ಲೆ. ಕ್ರೀಡೆಯ ಬಗೆಗಿನ ಪ್ರೀತಿಗಾಗಿ ನಾವು ಆ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ಯಾವ ದೇಶದ ವಿರುದ್ಧ ಆಡಬೇಕನ್ನೋದನ್ನು ನಾವು ಆರಿಸಲಾಗದು. ಆದರೆ ಭಾರತ vs ಪಾಕಿಸ್ತಾನ ಕ್ರಿಕೆಟ್‌, ಕ್ರೀಡಾ ವಿಚಾರದಲ್ಲಿ ತುಂಬಾ ಒಳ್ಳೇದು,' ಎಂದು ಯುವಿ ತನ್ನ ಮನದ ಮಾತನಾಡಿದ್ದಾರೆ.

Story first published: Wednesday, February 12, 2020, 10:31 [IST]
Other articles published on Feb 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X