ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಏಕದಿನ Ranking: ಜಿಗಿದ ಚಾಹಲ್, ಕುಸಿದ ಧವನ್, ಮಿಂಚಿದ ಕೊಹ್ಲಿ

Yuzvendra Chahal enters top ten in ODI rankings

ನವದೆಹಲಿ, ನವೆಂಬರ್ 2: ಪ್ರಕಟಿತ ನೂತನ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅಗ್ರ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಶಿಖರ್ ಧವನ್ 4 ಸ್ಥಾನ ಕುಸಿದಿದ್ದಾರೆ.

ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಜೀವನ ಚರಿತ್ರೆ ಮುಖಪುಟ ಅನಾವರಣವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಜೀವನ ಚರಿತ್ರೆ ಮುಖಪುಟ ಅನಾವರಣ

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಮುಕ್ತಾಯಗೊಂಡ ಬಳಿಕ ಏಕದಿನ ಹೊಸ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸರಣಿಯಲ್ಲಿ ಒಟ್ಟು 453 ರನ್ ಕಲೆ ಹಾಕುವ ಮೂಲಕ ಏಕದಿನದಲ್ಲಿ 10,000 ರನ್ ಪೂರೈಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಟೆಸ್ಟ್ ರ್ಯಾಂಕ್ ನಲ್ಲೂ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.

'ಮಂಕಿ' ಎಂದು ಹರ್ಭಜನ್ ಹೀಯಾಳಿಸಿದ್ದಕ್ಕೆ ಮಹಾ ಕುಡುಕರಾದರಂತೆ ಸೈಮಂಡ್ಸ್'ಮಂಕಿ' ಎಂದು ಹರ್ಭಜನ್ ಹೀಯಾಳಿಸಿದ್ದಕ್ಕೆ ಮಹಾ ಕುಡುಕರಾದರಂತೆ ಸೈಮಂಡ್ಸ್

ಹೊಸ ರ್ಯಾಂಕ್ ಪಟ್ಟಿಯಲ್ಲಿ ಬ್ಯಾಟಿಂಗ್, ಬೌಲಿಂಗ್, ತಂಡ, ಆಲ್ ರೌಂಡರ್ ಎಲ್ಲಾ ವಿಭಾಗದಲ್ಲೂ ಸಣ್ಣಪುಟ್ಟ ಬದಲಾವಣೆಗಳಾಗಿದೆ. ಟೆಸ್ಟ್ ನಲ್ಲಿ ಮೊದಲ ಅಗ್ರ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಏಕದಿನ ಮತ್ತು ಟಿ20ಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಟಿ20ಯಲ್ಲಿ ಪಾಕಿಸ್ತಾನ, ಏಕದಿನದಲ್ಲಿ ಇಂಗ್ಲೆಂಡ್ ಮೇಲ್ತುದಿಯಲ್ಲಿದೆ.

ಧವನ್-ಡೌನ್-ರೀಸನ್!

ಧವನ್-ಡೌನ್-ರೀಸನ್!

ಸದ್ಯದ ರ್ಯಾಂಕಿಂಗ್ ನ ಬೌಲಿಂಗ್ ವಿಭಾಗದಲ್ಲಿ ಚಾಹಲ್ 8ನೇ ಸ್ಥಾನದಲ್ಲಿದ್ದರೆ, ಬ್ಯಾಟಿಂಗ್ ವಿಭಾಗದಲ್ಲಿ ಶಿಖರ್ ಧವನ್ 9ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್ ಏಕದಿನ ಸರಣಿಯಲ್ಲಿ ಐದು ಇನ್ನಿಂಗ್ಸ್ ಗಳಲ್ಲಿ ಅರ್ಧ ಶತಕ ರನ್ ಕೂಡ ಗಳಿಸಲು ಸಾಧ್ಯವಾಗದಿದ್ದುದು ಆರಂಭಿಕ ಬ್ಯಾಟ್ಸ್ಮನ್ ಧವನ್ ರ್ಯಾಂಕಿಂಗ್ ನಲ್ಲಿ ಕುಸಿತ ಕಾಣಲು ಕಾರಣ.

ರೋಹಿತ್ 2ನೇ, ವಾರ್ನರ್ 4ನೇ ಸ್ಥಾನ!

ರೋಹಿತ್ 2ನೇ, ವಾರ್ನರ್ 4ನೇ ಸ್ಥಾನ!

ಏಕದಿನ ಸರಣಿಯಲ್ಲಿ ಒಟ್ಟು 389 ರನ್ ಗಳಿಸಿದ್ದ ಭಾರತದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೂಡ ದ್ವಿತೀಯ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಏಕದಿನ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ (899 ಪಾಯಿಂಟ್ಸ್), ರೋಹಿತ್ ಶರ್ಮಾ (871), ಇಂಗ್ಲೆಂಡ್ ನ ಜೋ ರೂಟ್ (807), ಆಸ್ಟ್ರೇಲಿಯಾದ ನಿಷೇಧಿತ ಕ್ರಿಕೆಟಿಗ ಡೇವಿಡ್ ವಾರ್ನರ್ (803), ಪಾಕಿಸ್ತಾನದ ಬಾಬರ್ ಅಝಾಮ್ (798) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಟೆಸ್ಟ್ ರ್ಯಾಂಕಿಂಗ್ ನಲ್ಲಿ ಆಸೀಸ್ ನಿಷೇಧಿತ ಆಟಗಾರ ಸ್ಟೀವ್ ಸ್ಮಿತ್ ಕೂಡ ಈಗಲೂ ದ್ವಿತೀಯ ಸ್ಥಾನದಲ್ಲಿದ್ದಾರೆ!

ಬೂಮ್ರಾ ಮೊದಲಿಗ

ಬೂಮ್ರಾ ಮೊದಲಿಗ

ಏಕದಿನ ಬೌಲಿಂಗ್ ನಲ್ಲಿ ಜಸ್‌ಪ್ರೀತ್ ಬೂಮ್ರಾ (841) ಮೊದಲ ಸ್ಥಾನದಲ್ಲಿ, ಅಫ್ಘಾನ್ ಆಟಗಾರ ರಶೀದ್ ಖಾನ್ (788), ಕುಲದೀಪ್ ಯಾದವ್ (723), ನ್ಯೂಜಿಲ್ಯಾಂಡ್ ನ ಟ್ರೆಂಟ್ ಬೌಲ್ಟ್ (699), ಆಸ್ಟ್ರೇಲಿಯಾದ ಜೋಶ್ ಹ್ಯಾಝೆಲ್ವುಡ್ (696) ಕ್ರಮವಾಗಿ ಮೊದಲ 5ರೊಳಗೆ ಸ್ಥಾನಗಳಿಸಿದ್ದಾರೆ. (ನಾವೊಂದು ತಂಡವಾಗಿದ್ದರೆ ಅಲ್ಲಿ ಗೆಲುವು ತಾನಾಗೇ ಒಲಿಯುತ್ತದೆ ಎಂದು ಬರೆದುಕೊಂಡು ಬೂಮ್ರಾ ಟ್ವಿಟರ್ ನಲ್ಲಿ ಹಾಕಿಕೊಂಡಿರುವ ಚಿತ್ರ)

ರಶೀದ್ ಆಲೌ ರೌಂಡರ್

ರಶೀದ್ ಆಲೌ ರೌಂಡರ್

ಏಕದಿನ ಆಲ್ ರೌಂಡರ್ಸ್ ರ್ಯಾಂಕಿಂಗ್ ನಲ್ಲಿ ಭಾರತ 10ರೊಳಗೂ ಸ್ಥಾನ ಪಡೆದಿಲ್ಲ. ಈ ಯಾದಿಯಲ್ಲಿ ಭಾರತ ಪರ ಕುಲದೀಪ್ ಯಾದವ್ 14ನೇ ಸ್ಥಾನದಲ್ಲಿದ್ದಾರೆ. ಅಫ್ಘಾನ್ ಆಟಗಾರ ರಶೀದ್ ಖಾನ್, ಮೊಹಮ್ಮದ್ ನಬಿ, ಬಾಂಗ್ಲಾದ ಶಕೀಬ್ ಅಲ್ ಹಸನ್, ನ್ಯೂಜಿಲ್ಯಾಂಡ್ ನ ಮಿಚೆಲ್ ಸ್ಯಾಂಟ್ನರ್, ಪಾಕ್ ಆಟಗಾರ ಮೊಹಮ್ಮದ್ ಹಫೀಝ್ ಮೊದಲ 5 ಸ್ಥಾನಗಳಲ್ಲಿದ್ದಾರೆ. (ನವೆಂಬರ್ 2ರಂದು ನಟ ಶಾರೂಖ್ ಖಾನ್ ಹುಟ್ಟು ಹಬ್ಬಕ್ಕೆ ಶುಭಕೋರಿ ರಶೀದ್ ಟ್ವೀಟ್ ಮಾಡಿರುವ ಫೋಟೋ)

Story first published: Friday, November 2, 2018, 19:21 [IST]
Other articles published on Nov 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X