ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ಗೆ ಮೀರಿದ ಬಾಂಧವ್ಯ ನಮ್ಮದು: ಟೀಮ್ ಇಂಡಿಯಾದ ಆಪ್ತ ಗೆಳೆಯನ ಬಗ್ಗೆ ಚಾಹಲ್ ಮಾತು

Yuzvendra Chahal reaction on his bond with Team India new t20 skipper Rohit Sharma

ಟೀಮ್ ಇಂಡಿಯಾದ ಅನುಭವಿ ಬೌಲರ್ ಯುಜುವೇಂದ್ರ ಚಾಹರ್ ಈ ಬಾರಿಯ ಟಿ20 ವಿಶ್ವಕಪ್‌ಗೆ ಆಯ್ಕೆಯಾಗದೆ ಬಹಳಷ್ಟು ಸುದ್ದಿಯಾಗಿದ್ದರು. ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನಿಡಿದ ಹೊರತಾಗಿಯೂ ಟೀಮ್ ಇಂಡಿಯಾದಲ್ಲಿ ಅವಕಾಶ ದೊರೆಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೀಗ ಟಿ20 ವಿಶ್ವಕಪ್ ಅಂತ್ಯವಾಗಿದ್ದು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಸರಣಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಯುಜಯವೇಂದ್ರ ಚಾಹಲ್ ತಂಡದ ನೂತನ ನಾಯಕನ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನೂತನ ನಾಯಕ ರೋಹಿತ್ ಶರ್ಮಾ ಜೊತೆಗಿನ ತಮ್ಮ ಬಾಂಧವ್ಯದ ಬಗ್ಗಯೂ ಚಾಹಲ್ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಟಿ20 ವುಶ್ವಕಪ್ ನಂತರ ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ ನಂತರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಬಳಿಕ ರೋಹಿತ್ ಶರ್ಮಾ ಚುಟುಕು ಮಾದರಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಂಡಿದ್ದಾರೆ. ಉಪನಾಯಕನ ಜವಾಬ್ಧಾರಿಯನ್ನು ಕೆಎಲ್ ರಾಹುಲ್‌ಗೆ ವಹಿಸಲಾಗಿದೆ.

ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್

ನಾವು ಕುಟುಂಬದಂತೆ ಇದ್ದೇವೆ: ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡಿರುವ ಯುಜುವೇಂದ್ರ ಚಾಹಲ್ ರೋಹಿತ್ ಶರ್ಮಾ ಜೊತೆಗಿನ ತಮ್ಮ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ. "ನಾನು ರೋಹಿತ್ ಶರ್ಮಾ ಅವರೊಂದಿಗೆ ಯಾವಾಗಲೂ ಅತ್ಯುತ್ತಮವಾದ ಬಾಂಧವ್ಯವನ್ನು ಹೊಂದಿದ್ದೇನೆ. ನಾವು ಕುಟುಂಬದ ರೀತಿ ಇದ್ದೇವೆ. ರೊಹಿತ್ ಶರ್ಮಾ ಅಥವಾ ರಿತಿಕಾ ಅತ್ತಿಗೆ ಇಬ್ಬರೂ ನನ್ನನ್ನು ಸೋದರನ ರೀತಿಯಲ್ಲಿ ಕಾಣುತ್ತಾರೆ. ನಾವು ಡಿನ್ನರ್‌ಗೆ ಜೊತೆಯಾಗಿಯೇ ಹೊರಗೆ ಹೋಗುತ್ತೇವೆ. ಇನ್ನು ನಾವು ಅಂಗಳದಲ್ಲಿದ್ದಾಗಲೂ ನನ್ನ ಅಭಿಪ್ರಾಯಗಳನ್ನು ಅವರಲ್ಲಿ ಹಂಚಿಕೊಳ್ಳುತ್ತಿರುತ್ತೇನೆ" ಎಂದು ಯುಜುವೇಂದ್ರ ಚಾಹಲ್ ಹೇಳಿಕೊಂಡಿದ್ದಾರೆ.

ಕ್ರಿಕೆಟ್‌ಗೆ ಮೀರಿದ ಬಾಂಧವ್ಯ ನಮ್ಮದು: "ನಮ್ಮ ನಡುವಿನ ಬಾಂಧವ್ಯ ಕ್ರಿಕೆಟ್‌ಗೂ ಮೀರಿದ್ದಾಗಿದೆ. ಇದು ಅಂಗಳದಲಲ್ಇ ಆಡುವಾಗಲೂ ಆಟಗಾರನ ಮೇಲೆ ನಂಬಿಕೆಯಿರಿಸಿಕೊಳ್ಳಲು ಸಹಾಯಕವಾಗುತ್ತದೆ. ನಾನು ಯಾವಾಗಲೂ ಏನೇ ವಿಚಾರವನ್ನು ಮೈದಾನದಲ್ಲಿ ಹಂಚಿಕೊಂಡಾಗಳು ಆತನಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬರುತ್ತದೆ" ಎಂದು ಯುಜುವೇಂದ್ರ ಚಾಹಲ್ ಪ್ರತಿಕ್ರಿಯಿಸಿದ್ದಾರೆ.

ನವೆಂಬರ್ 17ರಿಂದ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೂಲಕ ರೋಹಿತ್ ಶರ್ಮಾ ಅವರ ಪೂರ್ಣ ಪ್ರಮಾಣದ ನಾಯಕತ್ವದ ಮೊದಲ ಜವಾಬ್ಧಾರಿ ಆರಂಭವಾಗಲಿದೆ. ಈವರೆಗೆ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ 19 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 15 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು ಅದ್ಭುತವಾದ ಗೆಲುವಿನ ದಾಖಲೆ ಹೊಂದಿದ್ದಾರೆ.

ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದ ಚಾಹಲ್: ಇನ್ನು ಯುಜುವೇಂದ್ರ ಚಾಹಲ್ ಕಳೆದ ಕೆಲ ವರ್ಷಗಳಿಂದ ಸೀಮಿತ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಆಶ್ಚರ್ಯಕರ ರೀತಿಯಲ್ಲಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಚಾಹಲ್ ಬದಲಿಗೆ ರಾಹುಲ್ ಚಹರ್ ಅವಕಾಶ ಪಡೆದುಕೊಂಡಿದ್ದರು. ಆದರೆ ವಿಶ್ವಕಪ್‌ನಲ್ಲಿ ಈ ಬದಲಾವಣೆ ತಂಡಕ್ಕೆ ಹೆಚ್ಚಿನ ಯಶಸ್ಸು ನೀಡಲಿಲ್ಲ. ಈ ಬಗ್ಗೆಯೂ ಚಾಹಲ್ ಮಾತನಾಡಿದ್ದಾರೆ.

ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!

ವಿಶ್ವಕಪ್‌ನಿಂದ ಹೊರಬಿದ್ದಿದ್ದು ಆಘಾತವಾಗಿತ್ತು: ನಾನು ಕಳೆದ ನಾಲ್ಕು ವರ್ಷಗಳಲ್ಲಿ ತಂಡದಿಂದ ಹೊರಗುಳಿದಿರಲಿಲ್ಲ. ಆದರೆ ಪ್ರಮುಖವಾದ ಟೂರ್ನಿಯಿಂದಲೇ ನಾನು ಹೊರಬಿದ್ದಿದ್ದೆ. ಅದು ನನಗೆ ನಿಜಕ್ಕೂ ತುಂಬಾ ಬೇಸರ ಮೂಡಿಸಿತು. ನಾನು ಎರಡು ಮೂರು ದಿನಗಳ ಕಾಲ ಕುಸಿದು ಹೋಗಿದ್ದೆ. ಬಳಿಕ ಎರಡನೇ ಆವೃತ್ತಿಯ ಐಪಿಎಲ್ ಇನ್ನು ಕೂಡ ಬಾಕಿಯಿದ್ದು ಅಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡಬಹುದು ಎಂದು ಯೋಚಿಸಿದೆ. ನಂತರ ನಾನು ನನ್ನ ಕೋಚ್‌ಗಳ ಬಳಿಗೆ ಬಂದು ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದೆ. ನನ್ನ ಮಡದಿ ಹಾಗೂ ಕುಟುಂಬ ನನಗೆ ನಿರಂತರವಾಗಿ ಬೆಂಬಲವನ್ನು ನೀಡಿದ್ದಾರೆ. ಅಭಿಮಾನಿಗಳು ಯಾವಾಗಲೂ ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಬೆಂಬಲಿಸಿದ್ದರು. ಈ ಸಂದರ್ಭದಲ್ಲಿ ನಾನು ನನ್ನ ಸಾಮರ್ಥ್ಯವನ್ನು ಮರಳಿ ಪಡೆದು ಈ ಗೊಂದಲಕ್ಕೆ ಅಂತ್ಯ ಹಾಡಬೇಕೆಂದು ನಿರ್ಧರಿಸಿದೆ. ಹಾಗೇಯೆ ಮುಂದಿವರಿದಿದ್ದರೆ ಅದು ನನ್ನ ಐಪಿಎಲ್ ಫಾರ್ಮ್ ಮೇಲೆಯೂ ಪರಿಣಾಮ ಬೀರಬಹುದಾಗಿದ್ದ ಕಾರಣ ನಾನು ಶೀಘ್ರವಾಗಿ ಆ ಸ್ಥಿತಿಯಿಂದ ಹೊರಬರಬೇಕಿತ್ತು" ಎಂದಿದ್ದಾರೆ ಯುಜುವೇಂದ್ರ ಚಾಹಲ್.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್ , ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

ಟೀಂ ಇಂಡಿಯಾ ಟೆಸ್ಟ್ ತಂಡ: ಅಜಿಂಕ್ಯಾ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪನಾಯಕ), ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಶುಭ್‌ಮನ್ ಗಿಲ್, ಶ್ರೇಯಸ್‌ ಅಯ್ಯರ್, ವೃದ್ದಿಮಾನ್ ಸಹಾ (ಡಬ್ಲ್ಯುಕೆ), ಕೆ.ಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ , ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್‌ ಕೃಷ್ಣ

Story first published: Monday, November 15, 2021, 19:31 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X