ನಿಮಗಾಗಿ ಈ ಸಲ ಕಪ್ ನಮ್ದೆ ಎಂದ ಬೆಂಗಳೂರು ತಂಡ

Posted By:
Bengaluru FC lift Super Cup, script yet another comeback win to thrash East Bengal 4-1

ಭುವನೇಶ್ವರ, ಏಪ್ರಿಲ್ 21: ಬೆಂಗಳೂರು ಫುಟ್ಬಾಲ್ ತಂಡವು ಮತ್ತೊಂದು ಇತಿಹಾಸ ನಿರ್ಮಿಸಿದೆ. ಕಳಿಂಗ ಸ್ಟೇಡಿಯಂನಲ್ಲಿ ಈಸ್ಟ್ ಬೆಂಗಾಲ್ ತಂಡವನ್ನು 4-1 ಅಂತರದಿಂದ ಸೋಲಿಸಿ, ಸೂಪರ್ ಕಪ್ ಎತ್ತಿ ಸಂಭ್ರಮಿಸಿದ್ದಾರೆ.

ಇಂಡಿಯನ್‌ ಸೂಪರ್ ಲೀಗ್‌ನ ಫೈನಲ್‌ನಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ, ಈಗ ಸೂಪರ್ ಕಪ್ ಫುಟ್‌ಬಾಲ್‌ ಟೂರ್ನಿಯ ಪ್ರಶಸ್ತಿ ಗೆದ್ದು, ಅಭಿಮಾನಿಗಳಿಗೆ ಉಡುಗೊರೆ ನೀಡಿದೆ. ನಿಮಗಾಗಿ 'ಈ ಸಲ ಕಪ್ ನಮ್ದೆ' ಎಂದು ಟ್ವಿಟ್ಟರ್ ನಲ್ಲಿ ಬೆಂಗಳೂರು ಎಫ್ ಸಿ ಘೋಷಿಸಿದೆ. ಈ ಮೂಲಕ ಬಿಎಫ್‌ಸಿ ಮಹತ್ವದ ಟೂರ್ನಿಗಳಲ್ಲಿ ಐದನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್‍ನಲ್ಲಿ ಬಿಎಫ್‍ಸಿ ತಂಡದ ದಾಳಿಗೆ ಈಸ್ಟ್‌ ಬೆಂಗಾಲ್‌ ನಲುಗಿತು. ಆರಂಭದ 28ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ಆಟಗಾರ ಅನ್ಶು ಮಾನ್ ಕ್ರೊಮಾ ಅವರು ಬೆಂಗಾಲಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ಬೆಂಗಳೂರು ತಂಡದ ರಾಹುಲ್ ಭೇಕೆ 39ನೇ ನಿಮಿಷದಲ್ಲಿ ಸಮಬಲ ಸಾಧಿಸಿದರು.

ಇದಾದ ಬಳಿಕ ಬಿಎಫ್ ಸಿ ಪಂದ್ಯದ ಮೇಲೆ ಹಿಡಿದ ಸಾಧಿಸಿ ಬಿಟ್ಟಿತು. ಸ್ಟಾರ್ ಆಟಗಾರ ಸುನೀಲ್ ಛೆತ್ರಿ 69ನೇ ನಿಮಿಷ, 90ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಿದರೆ, ಮಿಕು 71ನೇ ನಿಮಿಷದಲ್ಲಿ ಗೋಲು ಗಳಿಸಿ ಬ್ಲೂ ತಂಡಕ್ಕೆ ಭರ್ಜರಿ ಜಯ ತಂದಿತ್ತರು.

4-3-3 ಮಾದರಿಯ ರಚನೆಯಲ್ಲಿ ಕಣಕ್ಕಿಳಿದ ಬಿಎಫ್ ಸಿ ತಂಡದಲ್ಲಿ ಮಿಕು, ಉದಾಂತ, ಛೆಟ್ರಿ ಮುಂಪಡೆಯಲ್ಲಿ ಹೋರಾಟ ಕಾಯ್ದುಕೊಂಡರು.

ಈಸ್ಟ್ ಬೆಂಗಾಲ್ ತಂಡದ ಸಮದ್ ಮಲಿಕ್ ಅವರು ಸುಭಾಶಿಸ್ ಬೋಸ್ ಮೇಲೆ ಹಲ್ಲೆಗೆ ಮುಂದಾಗಿ ಫೌಲ್ ಮಾಡಿದ್ದರಿಂದ ರೆಫ್ರಿ ರಾಮಸ್ವಾಮಿ ಶ್ರೀಕೃಷ್ಣ ಅವರು ಕೂಡಲೇ ಸಮದ್ ಅವರನ್ನು ಮೈದಾನದಿಂದ ಹೊರಕ್ಕೆ ಕಳಿಸಿದರು. ಹೀಗಾಗಿ, ಎರಡನೇ ಅವಧಿಯಲ್ಲಿ ಈಸ್ಟ್ ಬೆಂಗಾಲ್ ಮತ್ತಷ್ಟು ಹಿನ್ನಡೆಯೊಂದಿಗೆ ಪಂದ್ಯವನ್ನು ಕಳೆದುಕೊಂಡಿತು.

Story first published: Saturday, April 21, 2018, 12:20 [IST]
Other articles published on Apr 21, 2018
Read in English: Bengaluru FC lift Super Cup
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ