ಐಎಎಸ್ಎಲ್: ಅಂಬಾನಿ ಒಡೆತನದ ಫುಟ್ಬಾಲ್ ಕ್ಲಬ್ CFG ಪಾಲು

City Football Group acquires majority stake in Indian Super League’s Mumbai City FC

ಮುಂಬೈ, ನವೆಂಬರ್ 28: ಜಾಗತಿಕವಾಗಿ ಹಲವು ಫುಟ್‌ಬಾಲ್‌ ಕ್ಲಬ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಸಿಟಿ ಫುಟ್‌ಬಾಲ್ ಗ್ರೂಪ್ (ಸಿಎಫ್‌ಜಿ), ಇಂಡಿಯನ್ ಸೂಪರ್ ಲೀಗ್‌ನ ಪ್ರಮುಖ ಕ್ಲಬ್ ಆಗಿರುವ ಮುಂಬೈ ಸಿಟಿ ಎಫ್‌ಸಿ ಯನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಸಿಟಿ ಫುಟ್‌ಬಾಲ್ ಗ್ರೂಪ್ (ಸಿಎಫ್‌ಜಿ) ಜಾಗತಿಕವಾಗಿ ಒಟ್ಟು ಎಂಟು ಕ್ಲಬ್ ಗಳಲ್ಲಿ ಪಾಲುದಾರಿಕೆಯನ್ನು ಹೊಂದಿದಂತೆ ಆಗಲಿದೆ.

ಸಿಎಫ್‌ಜಿ, ಮುಂಬೈ ಸಿಟಿ ಎಫ್‌ಸಿ ಕ್ಲಬ್‌ನ 65% ಷೇರು ಖರೀದಿಸುವ ಮೂಲಕ ಕ್ಲಬ್‌ ಮೇಲಿನ ಹಿಡಿತವನ್ನು ತನ್ನ ಒಡೆತನಕ್ಕೆ ಪಡೆಯಲಿದೆ. ಅಲ್ಲದೇ ನಟ ಮತ್ತು ಚಲನಚಿತ್ರ ನಿರ್ಮಾಪಕ, ರಣಬೀರ್ ಕಪೂರ್ ಮತ್ತು ಬಿಮಲ್ ಪರೇಖ್ ಉಳಿದ 35% ಷೇರುಗಳನ್ನು ಹೊಂದಿರುತ್ತಾರೆ.

ಮುಂಬೈಗೆ ಮನೆಯಲ್ಲೇ ಮತ್ತೊಂದು ಆಘಾತ ನೀಡಿದ ಗೋವಾ

ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ ಮತ್ತು ರಿಲಯನ್ಸ್ ಪ್ರತಿಷ್ಠಾನ ಅಧ್ಯಕ್ಷರಾದ ನೀತಾ ಅಂಬಾನಿ ಹಾಗೂ ಸಿಎಫ್‌ಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೆರಾನ್ ಸೊರಿಯಾನೊ ಈ ಒಪ್ಪಂದ ಕುರಿತು ಮಾಹಿತಿಯನ್ನು ನೀಡಿದ್ದು, ಈ ಒಪ್ಪಂದದಿಂದಾಗಿ ಮುಂಬೈ ಸಿಟಿ ಎಫ್‌ಸಿ ತಂಡಕ್ಕೆ ಲಾಭವಾಗಲಿದೆ. ಸಿಎಫ್‌ಜಿ ಜಾಗತಿಕ ವಾಣಿಜ್ಯ ವೇದಿಕೆಯಾಗಿದ್ದು, ಫುಟ್‌ಬಾಲ್ ನಲ್ಲಿ ಹೊಸ ಉತ್ತೇಜಕ ಅಂಶವನ್ನು ಸೇರಿಸಿ ಮುಂಬೈ ತಂಡದ ಬೆಳವಣಿಗೆಗೆ ಸಹಾಯವನ್ನು ಮಾಡಲಿದೆ ಎಂದಿದ್ದಾರೆ.

ಮುಂಬೈ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ 8,000 ಜನರ ಸಾಮರ್ಥ್ಯದ ಹೊಂದಿರುವ ಫುಟ್‌ಬಾಲ್ ಅರೆನಾವನ್ನು ಹೋಮ್ ಗ್ರೌಂಡ್ ಮಾಡಿಕೊಂಡಿರುವ ಮುಂಬೈ ಸಿಟಿ ಎಫ್‌ಸಿ ತಂಡವು, ಪ್ರಸ್ತುತ ಆರನೇ ಐಎಸ್ಎಲ್ ಋತುವಿನಲ್ಲಿ ಐದು ಪಂದ್ಯಗಳನ್ನು ಆಡಲಿದೆ.

ಸಿಎಫ್‌ಜಿ ವಿಶ್ವದ ಪ್ರಮುಖ ಖಾಸಗಿ ಮಾಲೀಕ ಮತ್ತು ಫುಟ್‌ಬಾಲ್ ಕ್ಲಬ್‌ಗಳ ಆಯೋಜಕರಲ್ಲಿ ಪ್ರಮುಖರಾಗಿದ್ದು, ಇಂಗ್ಲಿಷ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ನಲ್ಲಿ ಮ್ಯಾಂಚೆಸ್ಟರ್ ಸಿಟಿ ಎಫ್‌ಸಿ, ಯುಎಸ್‌ನಲ್ಲಿ ನ್ಯೂಯಾರ್ಕ್ ಸಿಟಿ ಕ್ಲಬ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಿಟಿ ಎಫ್‌ಸಿ, ಜಪಾನಿನ ಯೊಕೊಹಾಮಾ ಎಫ್. ಮರಿನೋಸ್ ಕ್ಲಬ್, ಉರುಗ್ವೆಯ ಕ್ಲಬ್ ಅಟ್ಲೆಟಿಕೊ ಟಾರ್ಕ್, ಸ್ಪೇನ್‌ನ ಗಿರೊನಾ ಎಫ್‌ಸಿ ಮತ್ತು ಚೀನಾದಲ್ಲಿ ಸಿಚುವಾನ್ ಜಿಯುನಿಯು ಎಫ್‌ಸಿಯಲ್ಲಿ ಪಾಲುದಾರಿಕೆಯನ್ನು ಹೊಂದಿದೆ.

ಸಿಎಫ್‌ಜಿ ಈಗ ವಿಶ್ವದಲ್ಲಿ 13 ಕಚೇರಿಗಳನ್ನು ಹೊಂದಿದ್ದು, ಇದರಲ್ಲಿ 8 ಫುಟ್‌ಬಾಲ್ ಕ್ಲಬ್‌ಗಳು ಮತ್ತು ಫುಟ್‌ಬಾಲ್ ಸಂಬಂಧಿತ ವ್ಯವಹಾರಗಳು ನಡೆಯಲಿದ್ದು, ಮಾರ್ಚ್ 2013 ರಲ್ಲಿ ಪ್ರಾರಂಭವಾದಾಗಿನಿಂದ ಗ್ರೂಪ್ ದಿನ ಕಳೆದಂತೆ ಗಮನಾರ್ಹವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ಈಗ 2,000 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದು, ಪ್ರತಿವರ್ಷ 2,500 ಕ್ಕೂ ಹೆಚ್ಚು ಆಟಗಳನ್ನು ಆಡುವ 1,500 ಕ್ಕೂ ಹೆಚ್ಚು ಫುಟ್‌ಬಾಲ್ ಆಟಗಾರರನ್ನು ಹೊಂದಿದೆ. ಸಿಟಿಜೆನ್ಸ್ ಗಿವಿಂಗ್ ಅಭಿಯಾನದ ಮೂಲಕ ಸಿಎಫ್‌ಜಿ ತನ್ನ 2019 ರ ಆವೃತ್ತಿಯಲ್ಲಿ ಮುಂಬೈ ಸೇರಿದಂತೆ ಆರು ಖಂಡಗಳಲ್ಲಿ ಸಮುದಾಯ ಕಾರ್ಯಕ್ರಮಗಳಿಗೆ ಬೆಂಬಲವನ್ನು ನೀಡಿದೆ.

ಸಿಎಫ್‌ಜಿ ಮುಂಬೈ ಸಿಟಿ ಎಫ್‌ಸಿಯನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದವನ್ನು ಮಾಡಿಕೊಳ್ಳುವ ಮುನ್ನವೇ, ತಂತ್ರಜ್ಞಾನದ ಜಾಗತಿಕ ನಾಯಕರಾದ ಸಿಲ್ವರ್ ಲೇಕ್‌ ಗ್ರೂಪ್‌ನಿಂದ ಹೊಸ ಷೇರು ಹೂಡಿಕೆಯನ್ನು ಪಡೆದುಕೊಂಡಿದೆ. ಸುಮಾರು 4.8 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಯನ್ನು ಕಳೆದ ವಾರ ಪಡೆದುಕೊಂಡಿದೆ. ಮಾನ್ಚೆಸ್ಟರ್ ಸಿಟಿ ಎಫ್‌ಸಿ ತನ್ನ ವಾರ್ಷಿಕ ವರದಿಯನ್ನು ದಾಖಲೆಯ ಆದಾಯ ಮತ್ತು ಐದನೇ ಮುಂದುವರಿದ ವರ್ಷದ ಲಾಭದ ವಿವರವನ್ನು ಬಿಡುಗಡೆ ಮಾಡಿತು, ಅದೇ ಸಮಯದಲ್ಲಿ ಕ್ಲಬ್‌ನ ಟ್ರೋಫಿ ಪ್ರವಾಸದ ಭಾಗವಾಗಿ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದರು.

ಸಿಟಿ ಫುಟ್‌ಬಾಲ್ ಗ್ರೂಪ್‌ ಕುರಿತು:

ಮೇ 2013 ರಲ್ಲಿ ಸ್ಥಾಪನೆಯಾದ ಸಿಟಿ ಫುಟ್‌ಬಾಲ್ ಗ್ರೂಪ್, ವಿಶ್ವದ ಪ್ರಮುಖ ಖಾಸಗಿ ಮಾಲೀಕರು ಮತ್ತು ಫುಟ್‌ಬಾಲ್ ಕ್ಲಬ್‌ಗಳ ನಿರ್ವಾಹಕರಾಗಿದ್ದು, ವಿಶ್ವದ ಪ್ರಮುಖ ನಗರಗಳಲ್ಲಿ ಏಳು ಕ್ಲಬ್‌ಗಳ ಒಟ್ಟು ಅಥವಾ ಭಾಗಶಃ ಮಾಲೀಕತ್ವವನ್ನು ಹೊಂದಿದೆ. ಯುಕೆ ಯ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಮ್ಯಾಂಚೆಸ್ಟರ್ ಸಿಟಿ, ನ್ಯೂಯಾರ್ಕ್ ಸಿಟಿ ಎಫ್‌ಸಿ ಯುಎಸ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ಎಫ್‌ಸಿ, ಜಪಾನ್‌ನ ಯೊಕೊಹಾಮಾ ಎಫ್. ಮರಿನೋಸ್, ಉರುಗ್ವೆಯ ಕ್ಲಬ್ ಅಟ್ಲೆಟಿಕೊ ಟಾರ್ಕ್, ಸ್ಪೇನ್‌ನ ಗಿರೊನಾ ಫುಟ್‌ಬಾಲ್ ಕ್ಲಬ್ ಮತ್ತು ಚೀನಾದಲ್ಲಿ ಸಿಚುವಾನ್ ಜಿಯುನಿಯು ಎಫ್‌ಸಿ ಇವರ ಪಾಲುದಾರಿಕೆಯನ್ನು ಹೊಂದಿವೆ.

For Quick Alerts
ALLOW NOTIFICATIONS
For Daily Alerts

Story first published: Thursday, November 28, 2019, 19:03 [IST]
Other articles published on Nov 28, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more