ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಭಿಮಾನಿಯ ಮೊಬೈಲ್ ಒಡೆದು ಹಾಕುವ ಯತ್ನ: ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊಗೆ ಬ್ರಿಟಿಶ್ ಪೊಲೀಸರ ಎಚ್ಚರಿಕೆ

Cristiano Ronaldo

ಪೋರ್ಚುಗಲ್‌ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊಗೆ ಬ್ರಿಟಿಶ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮ್ಯಾಂಚೆಸ್ಟರ್ ಫುಟ್ಬಾಲ್ ಕ್ಲಬ್ ಪರ ಆಡುವ ಫಾರ್ವಡ್‌ ಆಟಗಾರ ರೊನಾಲ್ಡೊ ಫ್ಯಾನ್ ಒಬ್ಬರ ಮೊಬೈಲ್ ಒಡೆದು ಹಾಕಲು ಯತ್ನಿಸಿದ ವೀಡಿಯೋ ಹರಿದಾಡಿದ ಬೆನ್ನಲ್ಲೆ ರೊನಾಲ್ಡೊಗೆ ಬ್ರಿಟನ್ ಪೊಲೀಸರು ಎಚ್ಚರಿಸಿದ್ದಾರೆ.

ಏಪ್ರಿಲ್ 9 ರಂದು ಗೂಡಿಸನ್ ಪಾರ್ಕ್‌ನಲ್ಲಿ ನಡೆದ ಘಟನೆಯ ನಂತರ ದಾಳಿ ಮತ್ತು ಕ್ರಿಮಿನಲ್ ಹಾನಿಯ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು 37 ವರ್ಷ ವಯಸ್ಸಿನ ರೊನಾಲ್ಡೊರನ್ನ ತನಿಖೆಗೆ ಒಳಪಡಿಸಿದರು. ರೊನಾಲ್ಡೊ ಅಭಿಮಾನಿಯೊಬ್ಬನ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಒಡೆದು ಹಾಕುವ ಪ್ರಯತ್ನ ನಡೆಸಿದ ವೀಡಿಯೋ ಕ್ಲಿಪ್ ಅನ್ನು ಕಂಡಂತಹ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ಭಾರತಕ್ಕಿಂತ ಮೊದಲು ಫಿಫಾದಿಂದ ಬ್ಯಾನ್‌ಗೆ ಒಳಗಾದ ರಾಷ್ಟ್ರಗಳುಭಾರತಕ್ಕಿಂತ ಮೊದಲು ಫಿಫಾದಿಂದ ಬ್ಯಾನ್‌ಗೆ ಒಳಗಾದ ರಾಷ್ಟ್ರಗಳು

ಮ್ಯಾಂಚೆಸ್ಟರ್ ಯುನೈಟೆಡ್‌ನ 1-0 ಸೋಲಿನ ನಂತರ ರೊನಾಲ್ಡೊ ಅವರು ಪೆವಿಲಿಯನ್ ಕಡೆಗೆ ಹೋಗುತ್ತಿರುವಾಗ ಫ್ಯಾನ್ ಒಬ್ಬರ ಫೋನ್ ಅನ್ನು ಕಸಿದು ನೆಲಕ್ಕೆ ಬಡಿದ ವೀಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಮರ್ಸಿಸೈಡ್ ಪೊಲೀಸರು ತನಿಖೆಯನ್ನು ನಡೆಸಿದರು. ಈ ಕುರಿತಾಗಿ ಫೋರ್ಸ್ ವರದಿ ಮಾಡಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಸ್ವಯಂಪ್ರೇರಣೆಯಿಂದ ಹಾಜರಾಗಿ ಆರೋಪಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಈ ವೇಳೆಯಲ್ಲಿ ಅವರಿಗೆ ಎಚ್ಚರಿಕೆಯನ್ನ ನೀಡಲಾಗಿದೆ.

ಏಪ್ರಿಲ್ 9ರಂದು ಮ್ಯಾಂಚೆಸ್ಟರ್ ಯುನೈಟೆಡ್ ವರ್ಸಸ್ ಎವರ್ಟನ್‌ ನಡುವೆ ನಡೆದ ಪಂದ್ಯದ ಬಳಿಕ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಈ ವಿಚಾರವೂ ಸಾಕಷ್ಟು ಟೀಕೆಗೆ ಒಳಗಾದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡ್‌ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಿಟ್ಟಿನ ವರ್ತನೆಗೆ ಕ್ಷಮೆ ಕೇಳಿದ್ದರು.

ಪಂದ್ಯದ ನಂತರ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಿದ ಪೋರ್ಚುಗೀಸ್ ಫಾರ್ವರ್ಡ್ ಆಟಗಾರ "ನಾವು ಎದುರಿಸುತ್ತಿರುವಂತಹ ಕಷ್ಟಕರ ಕ್ಷಣಗಳಲ್ಲಿ ಭಾವನೆಗಳನ್ನು ನಿಭಾಯಿಸುವುದು ಎಂದಿಗೂ ಸುಲಭವಲ್ಲ. "ಆದಾಗ್ಯೂ, ನಾವು ಯಾವಾಗಲೂ ಗೌರವಯುತವಾಗಿರಬೇಕು, ತಾಳ್ಮೆಯಿಂದಿರಬೇಕು ಮತ್ತು ಎಲ್ಲರಿಗೂ ಮಾದರಿಯಾಗಬೇಕು''

"ನನ್ನ ಪ್ರಕೋಪಕ್ಕೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಮತ್ತು ಸಾಧ್ಯವಾದರೆ, ಓಲ್ಡ್ ಟ್ರಾಫರ್ಡ್‌ನಲ್ಲಿ ನ್ಯಾಯೋಚಿತ ಮತ್ತು ಕ್ರೀಡಾಸ್ಫೂರ್ತಿಯ ಸಂಕೇತವಾಗಿ ಪಂದ್ಯವನ್ನು ವೀಕ್ಷಿಸಲು ನಾನು ಈ ಅಭಿಮಾನಿಗೆ ಆಹ್ವಾನಿಸಲು ಬಯಸುತ್ತೇನೆ." ಎಂದು ರೊನಾಲ್ಡೊ ತಿಳಿಸಿದ್ದಾರೆ.

ತನ್ನ ವಿಭಿನ್ನ ವ್ಯಕ್ತಿತ್ವದಿಂದ ಸಾಕಷ್ಟು ಸುದ್ದಿಯಾಗುವ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಮೈದಾನದಲ್ಲಿ ಅಷ್ಟೇ ಅಲ್ಲದೆ, ಆಫ್ ದಿ ಫೀಲ್ಡ್‌ನಲ್ಲೂ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕಿರುವ ಉದಾಹರಣೆಯನ್ನು ಕಾಣಬಹುದು.

Story first published: Wednesday, August 17, 2022, 22:24 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X