ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಸೌದಿ ವಿರುದ್ಧದ ಸೋಲಿನಿಂದ ಟ್ರೋಫಿವರೆಗೆ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಹಾದಿ

FIFA World Cup 2022: Lionel Messi-led Argentinas Road From Defeat Against Saudi Arabia To Winning Trophy

ಡಿಸೆಂಬರ್ 18ರ ಭಾನುವಾರದಂದು ನಡೆದ 2022ರ ಫಿಫಾ ಫುಟ್ಬಾಲ್ ವಿಶ್ವಕಪ್‌ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪೆನಾಲ್ಟಿಯಲ್ಲಿ ಸೋಲಿಸಿ ಹೊಸ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಇನ್ನು ಸ್ಟಾರ್ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ತನ್ನ ವೃತ್ತಿಜೀವನದ ಮೊದಲ ಫಿಫಾ ಟ್ರೋಫಿಗೆ ಮುತ್ತಿಟ್ಟರು. ಇದಕ್ಕೂ ಮುನ್ನ ಹೆಚ್ಚುವರಿ ಸಮಯದ ನಂತರ ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪಂದ್ಯವು ಸಮಬಲ ಸಾಧಿಸಿತ್ತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಅರ್ಜೆಂಟೀನಾ ಜಯಗಳಿಸಿತು.

FIFA World Cup 2022: ವಿಶ್ವಕಪ್ ಇತಿಹಾಸದ ರೋಚಕ ಪಂದ್ಯದಲ್ಲಿ ಗೆದ್ದ ಅರ್ಜೆಂಟೀನಾ, ವಿಶ್ವಕಪ್‌ ಎತ್ತಿಹಿಡಿದ ಲಿಯೋನೆಲ್ ಮೆಸ್ಸಿFIFA World Cup 2022: ವಿಶ್ವಕಪ್ ಇತಿಹಾಸದ ರೋಚಕ ಪಂದ್ಯದಲ್ಲಿ ಗೆದ್ದ ಅರ್ಜೆಂಟೀನಾ, ವಿಶ್ವಕಪ್‌ ಎತ್ತಿಹಿಡಿದ ಲಿಯೋನೆಲ್ ಮೆಸ್ಸಿ

2022ರ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡದ ಪಯಣ ಹಲವು ಏರಿಳಿತಗಳಿಂದ ಕೂಡಿತ್ತು. ಅರ್ಜೆಂಟೀನಾ ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲುವ ಮೂಲಕ ಪಂದ್ಯಾವಳಿ ಆರಂಭಿಸಿದ ನಂತರ ಕತಾರ್‌ನಲ್ಲಿ ವಿಶ್ವಕಪ್ ಟ್ರೋಫಿ ಗೆಲ್ಲುವವರೆಗೆ ಹೋದರು.

ಸೋಲಿನೊಂದಿಗೆ ಗುಂಪು ಹಂತ ಆರಂಭಿಸಿದ ಅರ್ಜೆಂಟೀನಾ

ಸೋಲಿನೊಂದಿಗೆ ಗುಂಪು ಹಂತ ಆರಂಭಿಸಿದ ಅರ್ಜೆಂಟೀನಾ

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ಫಿಪಾ ವಿಶ್ವಕಪ್ ಪಯಣ ಉತ್ತಮವಾಗಿ ಆರಂಭವಾಗಲಿಲ್ಲ. ತಮ್ಮ ಆರಂಭಿಕ ಸಿ ಗುಂಪಿನಲ್ಲಿ ಸೌದಿ ಅರೇಬಿಯಾ ವಿರುದ್ಧ 2-1 ಅಂತರದ ಸೋಲಿಗೆ ಶರಣಾದರು. ಮೆಸ್ಸಿ 10ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರ್ ತೆರೆದರು. ಆದರೆ ಸೌದಿ ಅರೇಬಿಯನ್ನರ ಅದ್ಭುತ ಪುನರಾಗಮನದಿಂದ ಸೋತರು.

ಗೆಲ್ಲುವ ಅರ್ಹತೆಯ ಭರವಸೆಯೊಂದಿಗೆ ಲಿಯೋನೆಲ್ ಮೆಸ್ಸಿ ನಾಯಾಕತ್ವದ ಅರ್ಜೆಂಟೀನಾ ಮೆಕ್ಸಿಕೊ ವಿರುದ್ಧ 2-0 ಅಂತರದ ಗೆಲುವಿನಿಂದ ಟ್ರ್ಯಾಕ್‌ಗೆ ಮರಳಿದರು.

ಪೋಲೆಂಡ್ ವಿರುದ್ಧದ ಅಂತಿಮ ಗುಂಪಿನ ಸಿ ಪಂದ್ಯದಲ್ಲಿನ ಗೆಲುವು ಕತಾರ್ ವಿಶ್ವಕಪ್‌ನ ನಾಕೌಟ್ ಹಂತಗಳಲ್ಲಿ ಸ್ಥಾನವನ್ನು ಖಾತರಿಪಡಿಸಿತು. ಮೆಸ್ಸಿ ಪೆನಾಲ್ಟಿಯನ್ನು ತಪ್ಪಿಸುವುದರೊಂದಿಗೆ ಆಟವು ರೋಚಕ ಶೈಲಿಯಲ್ಲಿ ಪ್ರಾರಂಭವಾಯಿತು. ಆದರೆ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಮತ್ತು ಜೂಲಿಯನ್ ಅಲ್ವಾರೆಜ್ ಅವರ ಗೋಲುಗಳ ಸಹಾಯದಿಂದ ಪೋಲೆಂಡ್ ವಿರುದ್ಧ 2-0 ಗೆಲುವಿಗೆ ಕಾರಣವಾಯಿತು.

ನಾಕ್ಔಟ್ ಹಂತದಲ್ಲಿ ಅರ್ಜೆಂಟೀನಾ ಆರ್ಭಟ

ನಾಕ್ಔಟ್ ಹಂತದಲ್ಲಿ ಅರ್ಜೆಂಟೀನಾ ಆರ್ಭಟ

ಅರ್ಜೆಂಟೀನಾ 16ನೇ ಹಂತದ ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಅರ್ಜೆಂಟೀನಾಗೆ ಆರಂಭಿಕ ಮುನ್ನಡೆ ನೀಡಲು ಮ್ಯಾಟ್ ರಿಯಾನ್‌ರನ್ನು ಮೀರಿ ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ ಆ ಕ್ಷಣದ ಆಟಗಾರನಾಗಿದ್ದರು. ಅಲ್ವಾರೆಜ್ ಅರ್ಜೆಂಟೀನಾ ಪರವಾಗಿ ಎರಡನೇ ಗೋಲು ಗಳಿಸಿದರು. ಅಂತಿಮವಾಗಿ 2-1 ಅಂತರದಲ್ಲಿ ಗೆದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-3 ಗೋಲುಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಮೇಲುಗೈ ಸಾಧಿಸಿತು.

ಕ್ರೊಯೇಷಿಯಾವನ್ನು 3-0 ಅಂತರದಿಂದ ಸೋಲಿಸಿ ಅರ್ಜೆಂಟೀನಾ

ಕ್ರೊಯೇಷಿಯಾವನ್ನು 3-0 ಅಂತರದಿಂದ ಸೋಲಿಸಿ ಅರ್ಜೆಂಟೀನಾ

ಫಿಫಾ ಟ್ರೋಫಿಗಾಗಿ ಕಾಯುತ್ತಿದ್ದ ಲಿಯೋನೆಲ್ ಮೆಸ್ಸಿ ಮತ್ತು ತಂಡದ ಮುಂದಿನ ಸವಾಲು 2018ರ ರನ್ನರ್-ಅಪ್ ಕ್ರೊಯೇಷಿಯಾ ಆಗಿತ್ತು. ಇಲ್ಲಿ ಮೆಸ್ಸಿ ಮತ್ತು ಅಲ್ವಾರೆಜ್ ಅವರ ಪ್ರದರ್ಶನವಾಗಿದ್ದು, ಅರ್ಜೆಂಟೀನಾ ಸೆಮಿಫೈನಲ್‌ನಲ್ಲಿ ಲೂಕಾ ಮೊಡ್ರಿಕ್ ನಾಯಕತ್ವದ ಕ್ರೊಯೇಷಿಯಾವನ್ನು 3-0 ಅಂತರದಿಂದ ಸೋಲಿಸಿತು. ಪೆನಾಲ್ಟಿ ಹೊರತುಪಡಿಸಿ ಮೆಸ್ಸಿ ಮೊದಲ ಗೋಲು ಗಳಿಸಿದರು.

ರೋಚಕ ಫೈನಲ್‌ನಲ್ಲಿ ಮೆಸ್ಸಿ-ಎಂಬಾಪ್ಪೆ ಗೋಲಿನ ಸುರಿಮಳೆ

ರೋಚಕ ಫೈನಲ್‌ನಲ್ಲಿ ಮೆಸ್ಸಿ-ಎಂಬಾಪ್ಪೆ ಗೋಲಿನ ಸುರಿಮಳೆ

ಲಿಯೋನೆಲ್ ಮೆಸ್ಸಿಯ ಮೇಲೆ ವಿಶ್ವದ ಫುಟ್ಬಾಲ್ ಪ್ರಿಯರ ಕಣ್ಣುಗಳಿದ್ದವು. ಲುಸೈಲ್ ಕ್ರೀಡಾಂಗಣ ಮೆಸ್ಸಿಯ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಅತ್ಯುತ್ತಮ ಶೈಲಿಯಲ್ಲಿ ಫೈನಲ್ ಪಂದ್ಯವನ್ನು ಪ್ರಾರಂಭಿಸಿತು. ಮೊದಲಾರ್ಧದಲ್ಲಿ ಏಂಜೆಲ್ ಡಿ ಮಾರಿಯಾ ಅತ್ಯುತ್ತಮವಾಗಿ ಗೋಲು ಗಳಿಸುವ ಮುನ್ನ, ಮೆಸ್ಸಿ ಪೆನಾಲ್ಟಿ ಮೂಲಕ ಆರಂಭಿಕ ಗೋಲು ಬಾರಿಸಿದರು. ಆದರೆ, ಕೈಲಿಯನ್ ಎಂಬಪ್ಪೆ ಅವರ ಒಂದು ನಿಮಿಷದ ಅಂತರದಲ್ಲಿ ಬಿರುಸಿನ ಎರಡು ಗೋಲುಗಳು ಫ್ರಾನ್ಸ್ ತಂಡವನ್ನು ಆಟಕ್ಕೆ ಮರಳಿ ತಂದರು.

ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನಾ ನಾಯಕ ಮೆಸ್ಸಿ ಮತ್ತೊಮ್ಮೆ ಗೋಲು ಗಳಿಸಿದರು. ಈ ವೇಳೆ ಅರ್ಜೆಂಟೀನಾ ವಿಶ್ವಕಪ್ ಟ್ರೋಫಿ ಗೆದ್ದೇ ಬಿಟ್ಟಿತು ಎಂದು ಅಂದುಕೊಳ್ಳುತ್ತಿರುವಾಗ, ಫ್ರಾನ್ಸ್‌ನ ಯುವ ಆಟಗಾರ ಎಂಬಪ್ಪೆ ಪೆನಾಲ್ಟಿ ಮೂಲಕ ಸ್ಕೋರ್‌ ಕಾರ್ಡ್ ಅನ್ನು ಸಮಗೊಳಿಸಿದರು.

ಅಂತಿಮವಾಗಿ ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು ಮತ್ತು 2022ರ ಫಿಫಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಲು ಫ್ರಾನ್ಸ್ ವಿರುದ್ಧ 4-2 ಅಂತರದಿಂದ ವಿಜಯಶಾಲಿಯಾಯಿತು.

Story first published: Monday, December 19, 2022, 11:43 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X