ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್‌ 2022: ಕುಡುಸ್ ಮಿಂಚಿನ ಗೋಲು; ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಬೀಗಿದ ಘಾನಾ

FIFA World Cup 2022: Mohamed Kudus Hits 2 Goals; Ghana Beat South Korea

2022ರ ಫಿಫಾ ವಿಶ್ವಕಪ್‌ ಪಂದ್ಯದಲ್ಲಿ ಮೊಹಮ್ಮದ್ ಕುಡುಸ್ ಗಳಿಸಿದ ಮಿಂಚಿನ ಎರಡು ಗೋಲುಗಳ ಸಹಾಯದಿಂದ ಘಾನಾ ತಂಡವು ದಕ್ಷಿಣ ಕೊರಿಯಾವನ್ನು 3-2 ಗೋಲುಗಳಿಂದ ಮಣಿಸಿತು. ಈ ಮೂಲಕ ವಿಶ್ವಕಪ್ ಟ್ರೋಫಿಯ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಕತಾರ್‌ನ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಫಿಫಾ ವಿಶ್ವಕಪ್‌ನ ಎಚ್ ಗುಂಪಿನ ಪಂದ್ಯದಲ್ಲಿ ಮೊಹಮ್ಮದ್ ಕುಡುಸ್ ಅವರ ಎರಡು ಗೋಲು ಮತ್ತು ಮೊಹಮ್ಮದ್ ಸಾಲಿಸು ಅವರ ಒಂದು ಗೋಲು ಘಾನಾ ತಂಡವು 3-2 ಮುನ್ನಡೆಯಿಂದ ದಕ್ಷಿಣ ಕೊರಿಯಾಗೆ ಸೋಲಿನ ರುಚಿ ತೋರಿಸಿತು.

FIFA World Cup 2022: ರಿಚಾರ್ಲಿಸನ್ ಮ್ಯಾಜಿಕ್; ಸರ್ಬಿಯಾ ವಿರುದ್ಧ ಬ್ರೆಜಿಲ್‌ಗೆ ಭರ್ಜರಿ ಗೆಲುವುFIFA World Cup 2022: ರಿಚಾರ್ಲಿಸನ್ ಮ್ಯಾಜಿಕ್; ಸರ್ಬಿಯಾ ವಿರುದ್ಧ ಬ್ರೆಜಿಲ್‌ಗೆ ಭರ್ಜರಿ ಗೆಲುವು

ಜೂನ್, 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೆರ್ಬಿಯಾವನ್ನು 1-0 ಗೋಲುಗಳಿಂದ ಸೋಲಿಸಿದ ನಂತರ ಬ್ಲ್ಯಾಕ್ ಸ್ಟಾರ್ಸ್ ಘಾನಾಗೆ ಇದು ಫಿಫಾ ವಿಶ್ವಕಪ್‌ನ ಮೊದಲ ಗೆಲುವಾಗಿದೆ.

FIFA World Cup 2022: Mohamed Kudus Hits 2 Goals; Ghana Beat South Korea

ಮೊಹಮ್ಮದ್ ಸಾಲಿಸು ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ಮೊದಲಾರ್ಧದ ಮಧ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಗೋಲು ಬಾರಿಸಿ ಸ್ಕೋರಿಂಗ್ ಬೋರ್ಡ್ ತೆರೆದರು. ನಂತರ ಮಿಡ್‌ಫೀಲ್ಡರ್ ಮೊಹಮ್ಮದ್ ಕುಡುಸ್ ಘಾನಾದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಮೊದಲಾರ್ಧದಲ್ಲಿ ನಿಧಾನಗತಿ ಆಟವಾಡುತ್ತಿದ್ದ ಏಷ್ಯಾದ ದಕ್ಷಿಣ ಕೊರಿಯಾ ವಿರಾಮದ ನಂತರ ಮತ್ತೆ ಘರ್ಜಿಸಿತು. ಚೋ ಗ್ಯು-ಸಂಗ್‌ ದಕ್ಷಿಣ ಕೊರಿಯಾದ ಪರವಾಗಿ ಎರಡು ತ್ವರಿತ ಗೋಲುಗಳನ್ನು ಗಳಿಸಿದ ನಂತರ ಘಾನಾಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿತ್ತು. ದ್ವಿತೀಯಾರ್ಧದಲ್ಲಿ 2-2 ಗೋಲುಗಳಿಂದ ಸಮಬಲದಿಂದ ಕೂಡಿತ್ತು.

ಮೊದಲಾರ್ಧದಲ್ಲಿ ಒಂದು ಗೋಲು ಗಳಿಸಿದ್ದ ಮೊಹಮ್ಮದ್ ಕುಡುಸ್ ಅಂತಿಮವಾಗಿ ನಿರ್ಣಾಯಕ ಗೋಲು ಗಳಿಸುವ ಮೂಲಕ ಘಾನಾ ತಂಡವನ್ನು ಗೆಲ್ಲಿಸಿದರು ಮತ್ತು ತನ್ನ ತಂಡವನ್ನು ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿಸಿದರು.

ಕ್ರಿಸ್ಟಿಯಾನೋ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ತನ್ನ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಘಾನಾ ತಂಡವನ್ನು 3-2 ಗೋಲುಗಳಿಂದ ಸೋಲಿಸಿತ್ತು.

ಇದೀಗ ಘಾನಾ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದ್ದು, ಈ ಗೆಲುವಿನೊಂದಿಗೆ 2010ರ ನಂತರ ಮೊದಲ ಬಾರಿಗೆ ಗುಂಪು ಹಂತವನ್ನು ಮೀರಿ ನಾಕೌಟ್ ಹಂತ ತಲುಪುವ ಭರವಸೆ ಮೂಡಿಸಿದೆ.

Story first published: Monday, November 28, 2022, 21:51 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X