ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಗೋವಾ ವಿರುದ್ಧ ಪುಣೆಗೆ ಗೆಲ್ಲೋ ಗುರಿ

By Isl Media
ISL 2018: Preview, FC Goa-FC Pune City face-off

ಪುಣೆ ಡಿಸೆಂಬರ್ 10: ಹೀರೋ ಇಂಡಿಯನ್ ಸೂಪರ್ ಲೀಗ್‌ನ ಈ ಹಿಂದಿನ ಪಂದ್ಯದಲ್ಲಿ ಪುಣೆ ತಂಡ ಮನೆಯಂಗಣದಲ್ಲಿ ಜಯದ ಯಶಸ್ಸು ಕಂಡಿತ್ತು. ಆದರೆ ಈ ಬಾರಿ ಎದುರಾಳಿ ಗೋವಾ. ಈ ತಂಡದ ವಿರುದ್ಧ ಆಡುವಾಗ ಪುಣೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ನಾಯಕ ಮನೀಶ್ ಪಾಂಡೆ ಸೊಗಸಾದ ಶತಕ: ಭಾರತ ಎ ತಂಡಕ್ಕೆ ಸರಣಿ ಜಯನಾಯಕ ಮನೀಶ್ ಪಾಂಡೆ ಸೊಗಸಾದ ಶತಕ: ಭಾರತ ಎ ತಂಡಕ್ಕೆ ಸರಣಿ ಜಯ

ಕಳೆದ ಋತುವಿನಲ್ಲಿ ಪ್ಲೇ ಆಫ್ ಹಂತ ತಲುಪಿದ್ದ ಪುಣೆ ತಂಡ ಬಾರಿ ಅಂತ್ಯತ ಕಳಪೆ ಪ್ರದರ್ಶನ ತೋರಿದೆ. ಕೇರಳ ಬ್ಲಾಸ್ಟರ್ಸ್‌ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಜಯ ಗಳಿಸಿರುವ ಪುಣೆ ತಂಡ ಈಗ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದೆ. ಎಂಟು ಪಂದ್ಯಗಳಿಂದ ಹನ್ನೊಂದು ಅಂಕ ಗಲಿಸಿರುವ ಪುಣೆ ತಂಡದ ಪ್ಲೇ ಆಫ್ ಆಸೆ ಅತಂತ್ರವಾಗಿದೆ. ಈಗ ಬಲಿಷ್ಠ ತಂಡವೆನಿಸಿರುವ ಗೋವಾ ವಿರುದ್ಧ ಮತ್ತೊಂದು ಪರೀಕ್ಷೆಗೆ ಮುಂದಾಗಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022353

'ಕಳೆದ ಋತುವಿನಲ್ಲಿ ಗೋವಾ ತಂಡ ಅತಿ ಹೆಚ್ಚು ಗೋಲು ಗಳಿಸಿದ ತಂಡವೆನಿಸಿದೆ. ಗೋವಾ ಈ ಬಾರಿಯೂ ಅದೇ ರೀತಿಯ ಆಟವನ್ನು ಮುಂದುವರಿಸಿದೆ. ಅವರು ಸಾಕಷ್ಟು ಗೋಲುಗಳನ್ನು ಗಳಿಸಿದ್ದರು. ಅದೊಂದು ಉತ್ತಮ ಆಕ್ರಣಕಾರಿ ತಂಡ. ಆ ತಂಡದ ಶಕ್ತಿಯನ್ನು ಅರಿತು ಆಡಬೇಕಾಗಿದೆ.ನಮಗೆ ಈಗ ಜಯದ ಹೊರತಾಗಿ ಬೇರೆ ಯಾವುದೇ ಲಿತಾಂಶದ ಅಗತ್ಯವಿಲ್ಲ, ಅದಕ್ಕಾಗಿ ಹೋರಾಟ ಮುಂದುವರಿಸುವೆವು' ಎಂದು ಪುಣೆ ತಂಡದ ಕೋಚ್ ಪ್ರದ್ಯುಮ್ನ ರೆಡ್ಡಿ ಹೇಳಿದ್ದಾರೆ.

ಅಪಾಯಕಾರಿ ಗೋವಾ

ಅಪಾಯಕಾರಿ ಗೋವಾ

ಗೋವಾ ತಂಡ ಎಷ್ಟು ಅಪಾಯಕಾರಿ ಎಂಬುದನ್ನು ರೆಡ್ಡಿ ತಿಳಿದಿರಬೇಕು. ಮಿಗ್ವೆಲ್ ಏಂಜಲ್ ಪೋರ್ಚುಗಲ್ ಅವರಿಂದ ಕೋಚ್ ಹುದ್ದೆಯನ್ನು ಸ್ವೀಕರಿಸಿದ ನಂತರ ರೆಡ್ಡಿ ತಂಡ ಎದುರಿಸಿದ್ದೇ ಗೋವಾ ತಂಡವನ್ನು, ಫಟೋರ್ಡಾದಲ್ಲಿ ನಡೆದ ಪಂದ್ಯದಲ್ಲಿ ಪುಣೆ 2-4 ಗೋಲುಗಳ ಅಂತರದಲ್ಲಿ ಸೋಲನುಭ ವಿಸಿತ್ತು. ಅದೊಂದು ನೋವಿನ ಸೋಲು.

ಪುಣೆ ಉತ್ತಮ ಆಟ

ಪುಣೆ ಉತ್ತಮ ಆಟ

ಆದರೆ ಪುಣೆ ತಂಡ ಆ ನಂತರ ಉತ್ತಮ ರೀತಿಯಲ್ಲಿ ಆಡುತ್ತ ಬಂದಿದೆ. ಗೋವಾ ತಂಡದ ಆಟದ ಬಗ್ಗೆಯೂ ರೆಡ್ಡಿಗೆ ಚೆನ್ನಾಗಿ ಗೊತ್ತಿದೆ. ಡಿಫೆನ್ಸ್ ವಿಭಾಗವೂ ಬಲಿಷ್ಠವಾಗಿದೆ. ಆದ್ದರಿಂದ ಪುಣೆ ತಂಡ ಮತ್ತೊಮ್ಮೆ ಸೋಲಿನ ಆಘಾತ ಅನುಭವಿಸುವ ಸಾಧ್ಯತೆ ಇದೆ. 197 ಬಾರಿ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟ ದಾಖಲೆಯನ್ನು ಗೋವಾ ಹೊಂದಿದೆ. ಅಲ್ಲದೆ ಒಂದೇ ಒಂದು ಬಾರಿ ಕ್ಲೀನ್ ಶೀಟ್ ಸಾಧನೆ ಮಾಡಿದೆ. ಸಹಿಲ್ ಪನ್ವಾರ್ ಹಾಗೂ ಲಾಲ್‌ಚುವಾನ್ಮವಾಯ್ ಅವರು ಅನಾರೋಗ್ಯದಲ್ಲಿದ್ದು ನಾಳೆಯ ಪಂದ್ಯಕ್ಕೆ ಗೈರಲಾಗಲಿದ್ದಾರೆ.

ನೈಜ ಆಟ ಪ್ರದರ್ಶನಗೊಂಡಿಲ್ಲ

ನೈಜ ಆಟ ಪ್ರದರ್ಶನಗೊಂಡಿಲ್ಲ

ತಂಡದ ಪ್ರಮುಖ ಆಟಗಾರ ಮಾರ್ಸೆಲಿನೊ ಅವರು ಉತ್ತಮ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಕೇರಳ ವಿರುದ್ದದ ಪಂದ್ಯದಲ್ಲಿ ಜಯದ ರೂವಾರಿ ಎನಿಸಿದರೆ ಅವರಿಂದ ನೈಜ ಆಟ ಇದುವರೆಗೂ ಪ್ರದರ್ಶನಗೊಂಡಿಲ್ಲ. ಇದುವರೆಗಿನ ಐಎಸ್‌ಎಲ್ ಋತುವಿನಲ್ಲಿ ಮಾರ್ಸೆಲೋ ತೋರಿದ ಅತ್ಯಂತ ಕಳಪೆ ಋತು ಇದಾಗಿದೆ. 12 ದಿನಗಳ ನಂತರ ಗೋವಾ ಆ ತಂಡ ಮತ್ತೆ ಅಂಗಣದಲ್ಲಿ ಕಾಣಿಸಿಕೊಂಡಿದೆ. ಸರ್ಗಿಯೊ ಲೊಬೆರಾ ಪಡೆ ಈ ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ವಿಫಲವಾಗಿದೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಸೋಲನುಭವಿಸಿದ ನಂತರ ಕೋಲ್ಕೊತಾ ವಿರುದ್ಧ ಗೋಲಿಲ್ಲದೆ ಡ್ರಾ ಸಾಧಿಸಿತ್ತು.

ಊಹಿಸಿದಷ್ಟು ಸುಲಭವಿಲ್ಲ

ಊಹಿಸಿದಷ್ಟು ಸುಲಭವಿಲ್ಲ

ಪುಣೆ ವಿರುದ್ಧದ ಪಂದ್ಯ ನಾವು ಊಹಿಸಿದಷ್ಟು ಸುಲಭವಾಗಿಲ್ಲ, ತಮ್ಮ ಹಿಂದಿನ ಪಂದ್ಯವನ್ನು ಗೆದ್ದಿರುವ ಪುಣೆ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ನಾವು ಕೆಲವು ದಿನಗಳಿದ್ದ ಆಡಿಲ್ಲ, ಆದ್ದರಿಂದ ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ. ಎಂದು ಸಹಾಯಕ ಕೋಚ್ ಜೇಸಸ್ ಟಾಟೋ ಹೇಳಿದ್ದಾರೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಗೋವಾ 17 ಅಂಕಗಳನ್ನು ಗಳಿಸಿ ಟಾಪ್ ನಾಲ್ಕರಲ್ಲಿದೆ.

Story first published: Tuesday, December 11, 2018, 20:14 [IST]
Other articles published on Dec 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X