ಐಎಸ್‌ಎಲ್: ಲೊಬೆರಾ ವಿದಾಯದ ಬಳಿಕ ಗೋವಾಕ್ಕೆ ಮತ್ತೆ ಅಗ್ರ ಸ್ಥಾನದ ಗುರಿ

By Isl Media

ಗೋವಾ, ಫೆಬ್ರವರಿ 5: ಉತ್ತಮ ಕೋಚ್ ಸರ್ಗಿಯೋ ಲೊಬೆರಾ ಅವರನ್ನು ಮನೆಗೆ ಕಳುಹಿಸಿದ ಗೋವಾ ತಂಡ ಬುಧವಾರ ಹೀರೋ ಇಂಡಿಯನ್ ಸೂಪರ್ ಲೀಗ್ ನ 74ನೇ ಪಂದ್ಯದಲ್ಲಿ ಜಯ ಕಾಣದೆ ಕಂಗಾಲಾಗಿರುವ ಹೈದರಾಬಾದ್ ಎಫ್ ಸಿ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ನೇರವಾಗಿ ಗ್ರೂಪ್ ಹಂತಕ್ಕೆ ತೇರ್ಗಡೆಯಾಗುವ ಉದ್ದೇಶದಿಂದ ಗೋವಾ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಹಂಬಲದಲ್ಲಿದೆ. ಗೋವಾ ತಂಡದ ಆಡಳಿತ ಮಂಡಳಿಯು ಸರ್ಗೊಯೊ ಲೊಬೆರಾ ಅವರೊಂದಿಗಿನ ಸಂಬಂಧವನ್ನು ಮುಂದುವರಿಸದಿರುವ ತೀರ್ಮಾನ ಕೈಗೊಂಡು ಕ್ಲಿಫೋರ್ಡ್ ಮಿರಾಂಡ ಅವರನ್ನು ಮಧ್ಯಂತರ ಕೋಚ್ ಹಾಗೂ ಡೆರಿಕ್ ಪೆರೆರಾ ಅವರನ್ನು ತಾಂತ್ರಿಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ.

1
2026500

''ತಂಡವನ್ನು ಒಂದಾಗಿ ಕೊಂಡೊಯ್ಯುವುದು ನನ್ನ ಗುರಿ, ತಂಡವಾಗಿ ಒಟ್ಟಿಗೆ ಆಡಬೇಕೆಂಬುದು ನನ್ನ ಉದ್ದೇಶ, ಪ್ರತಿಯೊಂದು ಪಂದ್ಯದ ಕಡೆಗೂ ಗಮನ ಹರಿಸಬೇಕು. ನಮ್ಮ ತಂಡ ಉತ್ತಮ ಗುಣಮಟ್ಟದಿಂದ ಕೂಡಿದೆ, ಅದೇ ರೀತಿ ನಮ್ಮ ಉದ್ದೇಶವೂ ಸ್ಪಷ್ಟವಾಗಿರಬೇಕು. ತಂಡ ತರಬೇತಿ ನಡೆಸುತ್ತಿರುವಲ್ಲಿಗೆ ತೆರಳಿದಾಗ ಆಟಗಾರರಲ್ಲಿ ಧನಾತ್ಮಕ ನಿಲುವು ಇರುವುದು ಕಂಡು ಬಂತು. ತರಬೇತಿಗೆ ಸ್ಪಂದಿಸುತ್ತಿರುವ ರೀತಿಯೂ ಉತ್ತಮವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಆಟಗಾರರ ಬಗ್ಗೆಯೂ ಹೆಮ್ಮೆ ಅನಿಸುತ್ತಿದೆ. ಪ್ರತಿಯೊಂದು ದಿನವೂ ಆಟಗಾರರು ಇದೇ ರೀತಿಯಲ್ಲಿ ಧನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬುದು ನನ್ನ ಹಂಬಲ. ಇದು ನಿಜವಾದ ತೃಪ್ತಿಯನ್ನು ನೀಡುವಂಥದ್ದು,'' ಎಂದು ಪೆರೆರಾ ಹೇಳಿದ್ದಾರೆ.

15 ಪಂದ್ಯಗಳನ್ನು ಆಡಿರುವ ಗೋವಾ ಒಟ್ಟು 32 ಗೋಲುಗಳನ್ನು ಗಳಿಸಿ ಈ ಋತುವಿನಲ್ಲಿ ಬಲಿಷ್ಠ ತಂಡವಾಗಿ ಮೂಡಿ ಬಂದಿದೆ. ಮನೆಯಂಗಣಲ್ಲಿ ಕೊನೆಯ ಪಂದ್ಯಕ್ಕಿಂತ ಮೊದಲಿನ ಪಂದ್ಯವನ್ನು ಆಡಲಿರುವ ಗೋವಾ ನಂತರ ಪ್ಲೇ ಆಫ್ ಗಾಗಿ ಹೋರಾಟ ನಡೆಸಲಿದೆ. ಮಿಡ್ ಫೀಲ್ಡರ್ ಎಡು ಬೇಡಿಯಾ ನಾಲ್ಕು ಬಾರಿ ಬುಕ್ ಆದ ಕಾರಣ ಅಮಾನತುಕೊಂಡಿದ್ದು, ಅವರ ಸ್ಥಾನದಲ್ಲಿ ಅಹಮದ್ ಜೊಹುವಾ ತಂಡಕ್ಕೆ ಮರಳಿದ್ದು, ಆ ವಿಭಾಗದ ಬಲವನ್ನು ಸಮತೋಲನಗೊಳಿಸಲಿದ್ದಾರೆ, ಸದ್ಯ ಅಗ್ರ ಸ್ಥಾನದಲ್ಲಿರುವ ಮೂರು ತಂಡಗಳಲ್ಲಿ ಗೋವಾ ಅತಿ ಹೆಚ್ಚು ಗೋಲುಗಳನ್ನು (20) ನೀಡಿದ ತಂಡವಾಗಿದ್ದು, ನಂತರ ಬೆಂಗಳೂರು (9) ಹಾಗೂ ಎಟಿಕೆ (10) ಸ್ಥಾನದಲ್ಲಿವೆ.

ಇದೇ ವೇಳೆ 15 ಪಂದ್ಯಗಳನ್ನಾಡಿ ಕೇವಲ 6 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡಕ್ಕೆ ಹೀನಾಯ ದಾಖಲೆಯಿಂದ ತಪ್ಪಿಸಿಕೊಳ್ಳಲು ಇನ್ನೂ ನಾಲ್ಕು ಅಂಕಗಳ ಅಗತ್ಯ ಇದೆ. ಇದುವರೆಗೂ ಎದುರಾಳಿ ತಂಡಗಳಿಗೆ 33 ಗೋಲುಗಳನ್ನು ನೀಡಲು ಅವಕಾಶ ಕಲ್ಪಿಸಿರುವ ಹೈದಾರಾಬಾದ್ ತಂಡ ಇದುವರೆಗೋ ಕ್ಲೀನ್ ಶೀಲಟ್ ಸಾಧನೆ ಮಾಡಿಲ್ಲ. ಜನವರಿಯಲ್ಲಿ ನಡೆದ ಆಟಗಾರರ ಸಾಲ ಅವಕಾಶದಲ್ಲಿ ಸೌವಿಕ್ ಚಕ್ರವರ್ತಿ ಹಾಗೂ ಹಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿವೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, February 5, 2020, 15:05 [IST]
Other articles published on Feb 5, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X