ಐಎಸ್‌ಎಲ್ 2019: ಬಸವಳಿದ ಬ್ಲಾಸ್ಟರ್ಸ್‌ಗೆ ಬಲಿಷ್ಠ ಗೋವಾ ಸವಾಲು

By Isl Media

ಕೊಚ್ಚಿ, ಡಿಸೆಂಬರ್ 1: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 1) ಎಫ್‌ಸಿ ಗೋವಾ ವಿರುದ್ಧ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಕೋಚ್ ಎಲ್ಕೋ ಶೆಟ್ಟೋರಿ ಮೂರು ಅಂಕ ಗಳಿಸುವ ಗುರಿ ಹೊಂದಿದ್ದಾರೆ.

ಬ್ರಾಡ್ಮನ್ ಹೆಸರಿನಲ್ಲಿದ್ದ 88 ವರ್ಷಗಳ ದಾಖಲೆ ಮುರಿದ ಡೇವಿಡ್ ವಾರ್ನರ್!

ಅಂಗಣದಲ್ಲಿ ತಮ್ಮ ತಂಡದ ನಿರಂತರ ವೈಫಲ್ಯಕ್ಕೆ ಕೊನೆ ಹಾಡಬೇಕು ಎಂಬುದು ಡಚ್ ಕೋಚ್ ಗುರಿಯಾಗಿದೆ. ಹಳದಿ ಸೇನೆಯು ಕಳೆದ ನಾಲ್ಕು ಪಂದ್ಯಗಳಲ್ಲಿ ಜಯ ಕಾಣಲು ವಿಫಲವಾಗಿದೆ. ಎಟಿಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಕೇರಳ ಜಯದ ಹಾದಿ ಕಂಡಿರಲಿಲ್ಲ. ಡಿಫೆನ್ಸ್ ವಿಭಾಗದಲ್ಲಿ ಅನೇಕ ಆಟಗಾರರು ಗಾಯಗೊಂಡಿದ್ದು ಶೆಟೋರಿ ಪಡೆಯ ಶಕ್ತಿ ಕುಂದಲು ಪ್ರಮುಖ ಕಾರಣವಾಗಿತ್ತು.

ಭಾರತಕ್ಕೆ ಬಂದಾಗಿನಿಂದ ಮಿಡ್ ಫೀಲ್ಡರ್ ಮಾರಿಯೋ ಆರ್ಕ್ಯೂಸ್ ಇನ್ನೂ ಒಂದು ಪಂದ್ಯವನ್ನೂ ಆಡಿರಲಿಲ್ಲ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತದ್ದು, ತರಬೇತಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಸಂದೇಶ್ ಜಿಂಗಾನ್ ಹಾಗೂ ಜೈರೋ ರೊಡ್ರಿಗಸ್ ಗಾಯಗೊಂಡಿದ್ದು, ಅವರ ಸ್ಥಾನದಲ್ಲೂ ಬದಲಾವಣೆ ಆಗಿದೆ. ಈಗ ತಂಡದಲ್ಲಿ ಬದಲಾವಣೆಗೆ ಸಿಕ್ಕಿರುವುದು ಮೆಸಿಡೋನಿಯನ್ ಆಟಗಾರ ವಿಲಟ್ಕೋ ಡ್ರಾಬರೊಯ್ ಮಾತ್ರ.

ಹಿಂದಿನ ಐಎಸ್ ಎಲ್ ನಲ್ಲಿ ಮಿಂಚಿದ್ದ ಬಾರ್ತಲೋಮಿಯೋ ಓಗ್ಬ್ಯಾಚೆ ಇದುವರೆಗೂ ಗಳಿಸಿದ್ದು ಕೇವಲ ಒಂದು ಗೋಲು, ಮೊದಲ ಪಂದ್ಯದಲ್ಲಿ ಈ ಗೋಲ್ ದಾಖಲಾದ ನಂತರ ಅವರು ಮತ್ತೆ ತಂಡಕ್ಕೆ ಕೊಡುಗೆ ನೀಡಿರಿರಲಿಲ್ಲ. ಇದು ಕೇರಳ ಬ್ಲಾಸ್ಟರ್ಸ್ ನ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಮತ್ತೊಬ್ಬ ಆಟಗಾರ ಸರ್ಗಿಯೊ ಸಿದೊಂಚಾ ಅವರ ಮೇಲೆ ತಂಡ ಹೆಚ್ಚು ಆಧರಿಸಿದ್ದು ಅಟ್ಯಾಕ್ ವಿಭಾಗದಲ್ಲಿ ಕೇರಳಕ್ಕೆ ಇವರ ನೈಜ ಆಟದ ಅಗತ್ಯ ಇದೆ.

''ಗಾಯದ ಕಾರಣ ಸಾಕಷ್ಟು ಬದಲಾವಣೆ ಆಗಲಿಲ್ಲ. ಗೋವಾ ಕೋಚ್ ಅವರ ಸಂದರ್ಶನವನ್ನು ನೋಡಿದೆ, ನಮ್ಮ ತಂಡ ಪ್ರಶಸ್ತಿ ಗೆಲ್ಲುವ ತಂಡಗಳಲ್ಲಿ ಒಂದು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ನನಗೆ ನಂಬಿಕೆ ಇಲ್ಲ. ನಾವು ಈ ಹಂತದಲ್ಲಿ ಈಗಲೂ ಎಲ್ಲಿ ತಲುಪಬೇಕಾಗಿದೆಯೋ ಅಲ್ಲಿಗೆ ಹೋಗಲು ಪ್ರಯತ್ನ ನಡೆಸುತ್ತಿದ್ದೇವೆ. ನಾವು ಅಳಿವಿನಿಂದ ಪಾರಾಗುವ ಹಂತದಲ್ಲಿದ್ದೇವೆ,'' ಎಂದು ಶೆಟ್ಟೊರಿ ಹೇಳಿದ್ದಾರೆ.

ಡೇವಿಸ್ ಕಪ್: ತನ್ನದೇ ದಾಖಲೆ ಉತ್ತಮಪಡಿಸಿದ ಲಿಯಾಂಡರ್ ಪೇಸ್

ಸೆರ್ಗಿಯೋ ಲೊಬೆರಾ ಅವರ ಪಡೆ, ಇದುವರೆಗೂ ಕೇವಲ ಒಂದು ಕ್ಲೀನ್ ಶೀಟ್ ಸಾಧನೆ ಹೊರತುಪಡಿಸಿದರೆ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುತ್ತಿಲ್ಲ. ಋತುವಿನ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಗೆದ್ದ ನಂತರ ಗೋವಾ ಮತ್ತೆಲ್ಲೂ ಕ್ಲೀನ್ ಶೀಟ್ ಸಾಧನೆ ಮಾಡಿಲ್ಲ. ಗಾಯದ ಸಮಸ್ಯೆ ಹಾಗೂ ಅಮಾನತುಗಳ ನಡುವೆ ಫರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ತಂಡ ಆಡುತ್ತಿದೆ.

ಈಗಿನ ತಂಡದ ಸ್ಥಿತಿ ಹಾಗೂ ಹಿಂದಿನ ಹೋರಾಟದ ಫಲಿತಾಂಶ ಇವುಗಳು ಲೊಬೆರಾ ಅವರಲ್ಲಿ ತೃಪ್ತಿಯನ್ನು ತಂದಿದೆ. ಆಡಿರುವ ಹತ್ತು ಪಂದ್ಯಗಳಲ್ಲಿ ಗೋವಾ ಏಳು ಪಂದ್ಯಗಳನ್ನು ಗೆದ್ದು ಪ್ರಭುತ್ವ ಸಾಧಿಸಿತ್ತು. ಎರಡು ತಂಡಗಳ ನಡುವೆ ಒಟ್ಟು 25 ಗೋಲುಗಳು ದಾಖಲಾಗಿತ್ತು. ಕಳೆದ ಋತುವಿನಲ್ಲಿ ಗೋವಾ ತಂಡ ಕೇರಳವನ್ನು ಮನೆಯಂಗಣದಲ್ಲಿ 3-0 ಮತ್ತು 3-1 ಅಂತರದಲ್ಲಿ ಗೆದ್ದು ಕೊಚ್ಚಿಯಲ್ಲಿ ಪ್ರಭುತ್ವ ಸಾಧಿಸಿತ್ತು.

ಕೊಚ್ಚಿ ಅಂಗಣದಲ್ಲಿ ಪ್ರೇಕ್ಷಕರ ಬಗ್ಗೆ ಲೊಬೆರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯಂಗಣದಲ್ಲಿ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೋ ಅದೇ ರೀತಿ ಕೇರಳದಲ್ಲಿ ಸಿಕ್ಕಿದೆ ಎನ್ನುತ್ತಾರೆ '' ಕೇರಳದಲ್ಲಿ ಆಡುವುದೆಂದರೆ ಅದ್ಭುತ, ಅಂತ ವಾತಾವರದಲ್ಲಿ ಎಲ್ಲ ಅಂತಾರಾಷ್ಟ್ರೀಯ ಆಟಗಾರರು ಇಲ್ಲಿ ಆಡಲು ಇಷ್ಟಪಡುತ್ತಾರೆ. ಇಂತಾ ವಾತಾವರದಲ್ಲಿ ನಾನು ಪ್ರತಿಯೊಂದು ಪಂದ್ಯಗಳನ್ನು ಆಡಬಯಸುತ್ತೇನೆ,'' ಎಂದು ಲೊಬೆರಾ ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Sunday, December 1, 2019, 7:27 [IST]
Other articles published on Dec 1, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X