ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗುವಾಹಟಿಯಲ್ಲಿ ನಾರ್ತ್ ಈಸ್ಟ್-ಮುಂಬೈ ಸಮಬಲದ ಹೋರಾಟ

By Isl Media
ISL 2019: First-half goal-feast as Mumbai hold NorthEast

ಗುವಾಹಟಿ, ನವೆಂಬರ್ 28: ಪ್ರಥಮಾರ್ಧದಲ್ಲಿ ಕಂಡು ಬಂದ ಹೋರಾಟ ದ್ವಿತೀಯಾರ್ಧದಲ್ಲಿ ಕಾಣಲಿಲ್ಲ, ಪರಿಣಾಮ ಅತ್ಯಂತ ಕುತೂಹಲದಿಂದ ಕೂಡಿದ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಮುಂಬೈ ಸಿಟಿ ನಡುವಿನ ಇಂಡಿಯನ್ ಸೂಪರ್ ಲೀಗ್ ನ 25ನೇ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿತು.

ಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ಸಮನ್ಸ್‌ ನೀಡಲು ಮುಂದಾದ ಸಿಸಿಬಿಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ಸಮನ್ಸ್‌ ನೀಡಲು ಮುಂದಾದ ಸಿಸಿಬಿ

ನಾರ್ತ್ ಈಸ್ಟ್ ಪರ ಪಣಜಿಯೊಟಿಸ್ ಟ್ರಿಡಿಸ್ (9ನೇ ನಿಮಿಷ) ಹಾಗೂ ಅಸಮಾಹ್ ಗ್ಯಾನ್ ( 42ನೇ ನಿಮಿಷ) ಗೋಲು ಗಳಿಸಿದರೆ ಮುಂಬೈ ಸಿಟಿ ಎಫ್ ಸಿ ಪರ ಅಮೈನ್ ಚೇರ್ಮಿಟಿ ( 23 ಮತ್ತು 32ನೇ ನಿಮಿಷ) ಎರಡು ಗೋಲು ಗಳಿಸಿದರು. ಈ ಫಲಿತಾಂಶ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿಸಿತು.

ಸಮಬಲದ ಹೋರಾಟ
ಮುಂಬೈಗೆ ಗೆಲ್ಲಲೇಬೇಕೆಂಬ ಛಲ, ನಾರ್ತ್ ಈಸ್ಟ್ ಗೆ ಸೋಲಲೇ ಬಾರದೆಂಬ ಹಠ, ಪರಿಣಾಮ ಪ್ರಥಮಾರ್ಧ 2-2 ಗೋಲಿನಿಂದ ಸಮಬಲಗೊಂಡಿದೆ. ನಾರ್ತ್ ಈಸ್ಟ್ ಯುನೈಟೆಡ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮನಮಾಡಿತು. ಅದೇ ರೀತಿ ಯಶಸ್ಸಿನ ಹೆಜ್ಜೆ ಹಾಕಿತು. ಸುಭಾಶಿಶ್ ಬೋಸ್ ಗಳಿಸಿದ ಗೋಲು ಆಫ್ ಸೈಡ್ ಆಗಿತ್ತು, ಆದರೆ ಮಿಂಚಿನ ಆಟಕ್ಕೆ ಅದೇ ವೇದಿಕೆಯಾಯಿತು. ಮುಂಬೈಯ ಆರಂಭಿಕ ಯತ್ನ ವಿಫಲವಾಗಿರುದಕ್ಕೆ ನಾರ್ತ್ ಈಸ್ಟ್ ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ, ಇನ್ನೊಂದು ದಿಕ್ಕಿನಲ್ಲಿ ಪಣಜಿಯೊಟಿಸ್ ಟ್ರಿಡಿಸ್ 9ನೇ ನಿಮಿಷದಲ್ಲಿ ಗಳಿಸಿದ ಗೋಲು ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಈ ಗೋಲಿನಿಂದ ಮುಂಬೈ ಯಾವುದೇ ರೀತಿಯಲ್ಲಿ ದೃತಿಗೆಡಲಿಲ್ಲ. ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು.

ISL 2019: First-half goal-feast as Mumbai hold NorthEast

ಅಮೈನ್ ಚೇರ್ಮಿಟಿ 23ನೇ ನಿಮಿಷದಲ್ಲಿ ಮೊಹಮ್ಮದ್ ಲಾರ್ಬಿ ಮಿಡ್ ಫೀಲ್ಡ್ ವಿಭಾಗದಿಂದ ಚೆಂಡನ್ನು ಮೊದೌ ಸೌಗೌ ಅವರಿಗೆ ಪಾಸ್ ಮಾಡಿದರು. ಸೌಗೌ ಅವರು ಅಮೈನ್ ಚೇರ್ಮಿಟಿಗೆ ಪಾಸ್ ನೀಡಿದರು. ಆರು ಅಡಿಗಳಷ್ಟು ಅಂತರದಲ್ಲಿದ್ದ ಅಮೈನ್ ಚೇರ್ಮಿಟಿ ನೇರವಾಗಿ ಗೋಲ್ ಬಾಕ್ಸ್ ಗೆ ಗುರಿಯಿಟ್ಟು ಚೆಂಡನ್ನು ತುಳಿದರು. ಸುಭಾಶಿಶ್ ರಾಯ್ ಗೆ ಯಾವುದೇ ರೀತಿಯಲ್ಲಿ ತಡೆಯಲಾಗಲಿಲ್ಲ. ಪಂದ್ಯ 1-1ರ ಸಮಬಲದಲ್ಲಿ ಸಾಗಿತು. 32ನೇ ನಿಮಿಷದಲ್ಲಿ ೪೦ ಅಡಿಗಳ ದೂರದಿಂದ ತುಳಿದ ಫ್ರೀ ಕಿಕ್ ನಾರ್ತ್ ಈಸ್ಟ್ ನ ಡಿಫೆಂಡರ್ ನಿಮ್ ದೋರ್ಜಿ ಅವರತ್ತ ಸಾಗಿತ್ತು, ಆದರೆ ಅವರು ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದ ಕಾರಣ ಚೆಂಡು ಅಮೈನ್ ಚೇರ್ಮಿಟಿಅವರ ನಿಯಂತ್ರಣಕ್ಕೆ ಸಿಲುಕಿತು. ಅವರು ಯಾವುದೇ ಪ್ರಮಾದ ಎಸಗದೆ ಎರಡನೇ ಗೋಲು ಗಳಿಸಿ ತಂಡಕ್ಕೆ 2-1 ಮುನ್ನಡೆ ಕಲ್ಪಿಸಿದರು. ಈ ಮುನ್ನಡೆಯಿಂದ ನಾರ್ತ್ ಈಸ್ಟ್ ಯುನೈಟೆಡ್ ಆತ್ಮಸ್ಥೈರ್ಯ ಕಳೆದುಕೊಳ್ಳದೆ ತನ್ನ ನೈಜ ಆಟ ಮುಂದುವರಿಸಿತು. ಹತ್ತು ನಿಮಿಷಗಳು ಕಳೆಯುತ್ತಿದ್ದಂತೆ 42ನೇ ನಿಮಿಷದಲ್ಲಿ ಅಸಮಾಹ್ ಗ್ಯಾನ್ ಗಳಿಸಿದ ಗೋಲಿನಿಂದ ಪಂದ್ಯ 2-2 ರಲ್ಲಿ ಸಮಬಲಗೊಂಡಿತು. ಇದರಿಂದ ದ್ವಿತೀಯಾರ್ಧದ ಮೇಲೆ ಹೆಚ್ಚಿನ ಕುತೂಹಲ ನಿರೀಕ್ಷಿಸುವಂತಾಯಿತು.

ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !

ಜಯದ ಹುಡುಕಾಟ
ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿ ಇಂದು ಒಂದು ನೈಜ ರೂಪವನ್ನು ಪಡೆಯಲಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ಎಫ್ ಸಿ ತಂಡಕ್ಕೆ ಆತಿಥ್ಯ ನೀಡಲಿದೆ. ಇದುವರೆಗೂ ಇತ್ತಂಡಗಳು ಹತ್ತು ಬಾರಿ ಮುಖಾಮುಖಿಯಾಗಿವೆ. ಆರು ಬಾರಿ ಗೆದ್ದಿರುವ ಮುಂಬೈ ಮೇಲುಗೈ ಸಾಧಿಸಿದೆ. ಆದರೆ ಏಏಏ ಋತುವಿನಲ್ಲಿ ಇತ್ತಂಡಗಳ ಕತೆ ಭಿನ್ನವಾಗಿದೆ. ಪರ್ವತ ಪ್ರದೇಶದ ತಂಡ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಸೋತಿಲ್ಲ. ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ರೆಡೀಮ್ ತ್ಲ್ಯಾಂಗ್, ಮಾರ್ಟಿನ್ ಚಾವೇಸ್ ಹಾಗೂ ಅಸಮಾಹ್ ಗ್ಯಾನ್ ಅಟ್ಯಾಕ್ ವಿಭಾಗದಲ್ಲಿ ತಂಡದ ಪ್ರಮುಖ ಅಸ್ತ್ರ ಎನಿಸಿದ್ದಾರೆ. ಡಿಫೆನ್ಸ್ ವಿಭಾಗವೂ ಉತ್ತಮವಾಗಿದ್ದು ಇದುವರೆಗೂ ಎದುರಾಳಿಗೆ ನೀಡಿದ್ದು ಮೂರೇ ಗೋಲು. ಇದು ಈ ಬಾರಿಯ ಲೀಗ್ ನಲ್ಲಿ ಉತ್ತಮ ಡಿಫೆನ್ಸ್ ಗಳಲ್ಲಿ ಎರಡನೇಯದು.

ಮುಂಬೈ ಸಿಟಿ ಎಫ್ ಸಿ ಈ ಬಾರಿಯ ಋತುವನ್ನು ಉತ್ತಮವಾಗಿಯೇ ಆರಂಭಿಸಿತ್ತು. ಆದರೆ ಎರಡು ಜಯದ ನಂತರ ಎರಡು ಸೋಲು ಅನುಭವಿಸಿತು. ಅಮರಿಂದರ್ ಸಿಂಗ್, ಸಾರ್ಥಕ್ ಗಾವ್ಲಿ ಹಾಗೂ ರೌಲಿನ್ ಬೋರ್ಗೆಸ್ ಅವರಂತೆ ಉತ್ತಮ ರೀತಿಯ ಡಿಫೆನ್ಸ್ ವಿಭಾಗ ತಂಡಕ್ಕೆ ಅಗತ್ಯ ಇದೆ. ಸೆರ್ಗೆ ಕೆವಿನ್, ಮೊಹಮ್ಮದ್ ಲಾರ್ಬಿ ಮತ್ತು ಅಮೈನ್ ಚೇರ್ಮಿತಿ ಅವರು ಉತ್ತಮವಾಗಿ ಆಡಿದರೆ ನಾರ್ತ್ ಈಸ್ಟ್ ಸಂಕಷ್ಟ ಎದುರಿಸುವುದು ಸ್ಪಷ್ಟ.

Story first published: Thursday, November 28, 2019, 17:16 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X