ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮೊದಲ ಜಯದ ಮೆಟ್ಟಿಲಲ್ಲಿ ಸಾಗಲಿದೆ ಹೈದರಾಬಾದ್

By Isl Media
ISL 2019: Hyderabad look to build on first win

ಹೈದರಾಬಾದ್, ನವೆಂಬರ್ 6: ಬುಧವಾರ (ನವೆಂಬರ್ 6) ಸಿಎಂಜಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಪಂದ್ಯವನ್ನಾಡುವ ಮೂಲಕ ಹೈದರಾಬಾದ್ ತಂಡ ಇಂಡಿಯನ್ ಲೀಗ್ ನಲ್ಲಿ ಮತ್ತೊಮ್ಮೆ ತನ್ನ ಅದೃಷ್ಟವನ್ನು ಪರೀಕ್ಷಿಸಲಿದೆ.

ಕೇರಳ ಬ್ಲಾಸ್ಟರ್ಸ್ ವಿರುದ್ಧ ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಗೆಲ್ಲುವ ಮೂಲಕ ತನ್ನ ಕೆಟ್ಟ ಆರಂಭದಿಂದ ಹುಟ್ಟಿದ ಟೀಕೆಗೆ ಉತ್ತರ ನೀಡಿತ್ತ. ಫಿಲ್ ಬ್ರೌನ್ ಪಡೆ ಆರಂಭದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲೂ ಸೋಲನುಭವಿಸಿತ್ತು. ಆದರೆ ಮನೆಯಂಗಣದಲ್ಲಿ ಗೆದ್ದು ಸಮಾಧಾನಪಟ್ಟಿತ್ತು.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2020 ವೇಳಾಪಟ್ಟಿಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2020 ವೇಳಾಪಟ್ಟಿ

ಈಗ ತಂಡದ ಕೋಚ್ ಆಗಿರುವವರಿಗೆ ಆ ಜಯವನ್ನೇ ಮುಂದಿಟ್ಟುಕೊಂಡು ತಂಡದ ಮನೋಬಲವನ್ನು ಹೆಚ್ಚಿಸುವುದಾಗಿದೆ. ಆದರೆ ಅವರ ಗುರಿ ಅಷ್ಟಕ್ಕೇ ಮುಗಿದಿಲ್ಲ, ಕೆಲವು ಪ್ರಮುಖ ಆಟಗಾರರು ಗಾಯಗೊಂಡಿದ್ದು, ಕೆಲವು ಆಟಗಾರರು ಅಮಾನತುಗೊಂಡಿರುತ್ತಾರೆ. ಬೊಬೊ, ರಫಾಯೆಲ್ ಗೊಮೆಜ್, ಗಿಲ್ಸ್ ಬರ್ನ್ಸ್ ಗಾಯದ ಸಮಸ್ಯೆ ಎದುರಿಸುತ್ತಿದ್ದರೆ, ನೆಸ್ಟರ್ ಗೋರ್ಡಿಲ್ಲೋ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ.

''ನಾವು ಎಲ್ಲ ಗಾಯಗಳಿಂದ ಮುಕ್ತಿ ಹೊಂದಿಲ್ಲ ಅನಿಸುತ್ತೆ, ಇನ್ನೂ ನಾಲ್ವರು ಅನುಭವಿ ಆಟಗಾರರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮಲ್ಲಿ ಯಾವ ಶಕ್ತಿ ಇದೆಯೋ ಆ ಬಗ್ಗೆ ನಾವು ಗಮನ ಹರಿಸಬೇಕು. ನಮಗೆ ಈಗ ಲಭ್ಯ ಇರುವ ಆಟಗಾರರ ಕಡೆಗೆ ಗಮನ ಹರಿಸಬೇಕಾಗಿದೆ. ಅದು ಈಗ ಪ್ರಮುಖವಾದುದು,'' ಎಂದು ಬ್ರೌನ್ ಹೇಳ್ದಿದ್ದಾರೆ.

ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!

ಹೈದರಾಬಾದ್ ತಂಡದ ಸದ್ಯದ ಬೆಳಕೆಂದರೆ, ಮಾರ್ಸೆಲಿನೊ, ಕೇರಳ ವಿರುದ್ಧದ ಪಂದ್ಯದಲ್ಲಿ ಫ್ರೀ ಕಿಕ್ ಮೂಲಕ ಗೋಲು ಗಳಿಸಿದ್ದ ಮಾರ್ಸೆಲಿನೊ, ಜೇಮ್ಶೆಡ್ಪುರ ವಿರುದ್ಧ 3-1 ಅಂತರದಲ್ಲಿ ಸೋತಾಗ ಒಂದು ಗೋಲು ಗಳಿಸಿದ್ದರು. ಬಲಿಷ್ಠ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಈಗ ಮಾರ್ಸೆಲಿನೊ ಯಾವ ರೀತಿಯಲ್ಲಿ ಪ್ರದರ್ಶನ ತೋರುತ್ತಾರೆಂಬುದು ಹೈದರಾಬಾದ್ ಅಭಿಮಾನಿಗಳ ಕುತೂಹಲ.

ISL 2019: Hyderabad look to build on first win

ಅಸಮಾಹ್ ಗ್ಯಾನ್ ಮತ್ತು ಮಾರ್ಟಿನ್ ಚಾವೇಸ್ ಅವರಿಂದ ಮುನ್ನಡೆಯುತ್ತಿರುವ ಪರ್ವತ ಪ್ರದೇಶದ ತಂಡ ಇನ್ನೂ ಹೊಂದಿಕೊಳ್ಳದ ಹೈದರಾಬಾದ್ ಡಿಫೆನ್ಸ್ ವಿರುದ್ಧ ಮೇಲುಗೈ ಸಾಧಿಸುವ ಗುರಿ ಹೊಂದಿದೆ. ಗ್ಯಾನ್ ತಂಡಕ್ಕೆ ಜಯ ತಂದುಕೊಡಬಲ್ಲ ಆಟಗಾರ. ಯುವ ಆಟಗಾರ ರೆಡೀಮ್ ತ್ಲ್ಯಾಂಗ್ ನಾರ್ತ್ ಈಸ್ಟ್ ನ ದಾಳಿಯಲ್ಲಿ ಯಶಸ್ಸು ಕಂಡವರು.

ಐಪಿಎಲ್ 2020ರ ಆವೃತ್ತಿಗೆ ಆಟಗಾರರ ಹರಾಜಿನ ದಿನಾಂಕ, ಸ್ಥಳ ನಿಗದಿಐಪಿಎಲ್ 2020ರ ಆವೃತ್ತಿಗೆ ಆಟಗಾರರ ಹರಾಜಿನ ದಿನಾಂಕ, ಸ್ಥಳ ನಿಗದಿ

''ನಮಗೆ ಗೊತ್ತು, ನಾವು ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ಅದು ಅತ್ಯಂತ ಶಿಸ್ತಿನ ತಂಡವಾಗಿದೆ. ಡಿಫೆನ್ಸ್ ವಿಬಾಗದಲ್ಲಿ ತಂಡ ಉತ್ತಮರೀತಿಯಲ್ಲಿ ಸಂಘಟಿತವಾಗಿದೆ. ಅವರಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ಗ್ಯಾನ್ ಇದ್ದಾರೆ, ನಮ್ಮದು ಕೂಡ ಉತ್ತಮ ತಂಡವಾಗಿದ್ದು, ಹೋರಾಟ ನೀಡಲಿದ್ದೇವೆ, '' ಎಂದು ಬ್ರೌನ್.

ಇದುವರಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿಲ್ಲ, ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿದ್ದರೂ, ಡ್ರಾ ಸಾಧಿಸಿರುವುದು ಬಲಿಷ್ಠ ಬೆಂಗಳೂರು ಹಾಗೂ ಮತ್ತು ಗೋವಾ ವಿರುದ್ಧ.

ರಾಬರ್ಟ್ ಜರ್ನಿ ಪಡೆಗೆ ಗೋವಾ ವಿರುದ್ಧ ಜಯ ಗಳಿಸುವ ಅವಕಾಶ ವಿದ್ದಿತ್ತು, ಆದರೆ, ಕೊನೆಯ ಕ್ಷಣದಲ್ಲಿ ಗೋವಾ ಗೋಲು ಗಳಿಸಿದ ಕಾರಣ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

''ಅವರು ಹೇಗೆ ಆಡುತ್ತಾರೆಂಬುದು ಗೊತ್ತಿಲ್ಲ, ಅವರು ಹಿಂದಿನ ಪಂದ್ಯದಲ್ಲಿ ಗೆದ್ದ ಕಾರಣ ಅತ್ಯಂತ ಆತ್ಮವಿಶ್ವಾಸದಲ್ಲಿ ಇದ್ದಾರೆ. ಇದಕ್ಕಾಗಿ ನಾವು ಉತ್ತಮ ರೀತಿಯಲ್ಲಿ ಸಜ್ಜಾಗುತ್ತಿದ್ದೇವೆ. ನಾವು ಇದುವರೆಗೂ ಸೋಲು ಅನುಭವಿಸದ ಕಾರಣ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಲೀಗ್ ನ ಬಲಿಷ್ಠ ತಂಡಗಳ ವಿರುದ್ಧ ಆಡಿದ್ದೇವೆ. ನಾಳೆಯ ಪಂದ್ಯ ಕಠಿಣವೆನಿಸಲಿದೆ,'' ಜರ್ನಿ ಹೇಳಿದರು.

Story first published: Wednesday, November 6, 2019, 13:16 [IST]
Other articles published on Nov 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X