ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್: ಎಟಿಕೆ ವಿರುದ್ಧ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಹೋರಾಟ

By Isl Media
ISL 2019: Mumbai hope to turn it around against desperate ATK

ಕೋಲ್ಕತ್ತಾ, ಫೆಬ್ರವರಿ 21: ಇಲ್ಲಿನ ವಿವೇಕಾನಂದ ಯುವ ಭಾರತ ಕ್ರೀಡಾಂಗಣದಲ್ಲಿ ಶುಕ್ರವಾರ (ಫೆಬ್ರವರಿ 22) ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಿಥೇಯ ಎಟಿಕೆ ಹಾಗೂ ಮುಂಬೈ ಸಿಟಿ ತಂಡಗಳು ನಾಲ್ಕನೇ ಸ್ಥಾನದ ಗುರಿಯನ್ನಿಟ್ಟುಕೊಂಡು ಅಂಗಣಕ್ಕಿಳಿಯಲಿವೆ.

ಭಾರತ ಪರ ಟಿ20 ಅತ್ಯಧಿಕ ರನ್ ದಾಖಲೆ ಬರೆದ ಶ್ರೇಯಸ್ ಐಯ್ಯರ್!ಭಾರತ ಪರ ಟಿ20 ಅತ್ಯಧಿಕ ರನ್ ದಾಖಲೆ ಬರೆದ ಶ್ರೇಯಸ್ ಐಯ್ಯರ್!

16 ಪಂದ್ಯಗಳಲ್ಲಿ 27 ಅಂಕಗಳನ್ನು ಗಳಿಸಿರರುವ ಮುಂಬೈ ತಂಡ ಉತ್ತಮ ಸ್ಥಿತಿಯಲ್ಲಿದ್ದು, ಇನ್ನೊಂದು ಜಯ ಗಳಿಸಿದರೆ ಪ್ಲೇ ಆಫ್ ಹಂತ ತಲುಪಲಿದೆ. ಆದರೆ ಎಟಿಕೆ ಹಾದಿ ಅಷ್ಟು ಸುಲಭವಲ್ಲ, ಪ್ರತಿಯೊಂದು ಲಿತಾಂಶವೂ ಎಟಿಕೆ ಪರ ಆದರೆ ಮಾತ್ರ ಪ್ಲೇ ಆಫ್ ಗೆ ಅವಕಾಶವಿರುತ್ತದೆ. ಮುಂಬೈ ಸಿಟಿ ವಿರುದ್ಧ ಮೊದಲು ಜಯ ಕಾಣಬೇಕಾಗಿದೆ.

1
1042969

'ನಮಗೆ ಅರ್ಹತೆ ಪಡೆಯಲು ಬಹಳ ಕಷ್ಟವಿದೆ, ಆದರೆ ಸಾಧ್ಯವಿದೆ. ನಾವು ನಿಜವಾಗಿಯೂ ಅಂಥ ಆಸೆಯ ಬೆಂಬತ್ತಿ ಆಡುತ್ತಿದ್ದೇವೆ, ನಾವು ಮುಂಬೈ ವಿರುದ್ಧ ಮೊದಲು ಜಯ ಗಳಿಸಬೇಕು. ಜಯ ಗಳಿಸಿದರೆ ಮಾತ್ರ ಸಾಲದು ಮುಂಬೈ ವಿರುದ್ಧ ನಾವು ಆಡಿರುವ ಪಂದ್ಯಗಳಲ್ಲೂ ಉತ್ತಮ ಸರಾಸರಿ ಹೊಂದಿರಬೇಕು. ಫುಟ್ಬಾಲ್‌ನಲ್ಲಿ ಏನೆಲ್ಲ ಸಂಭವಿಸಬಹುದು ಎಂಬುದನ್ನು ಹೇಳಲಾಗದು,' ಎಂದು ಎಟಿಕೆ ಕ್‌‌ಕೆೀ ಸ್ಟೀವ್ ಕೊಪ್ಪೆಲ್ ಹೇಳಿದ್ದಾರೆ.

ಪುಲ್ವಾಮಾ ದಾಳಿ: ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ಮನದ ಮಾತು ಕೇಳಿ!ಪುಲ್ವಾಮಾ ದಾಳಿ: ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ಮನದ ಮಾತು ಕೇಳಿ!

ಪುಣೆ ವಿರುದ್ಧ ಗಳಿಸಿದ 2-2 ಗೋಲುಗಳ ಡ್ರಾ ಹಾಗೂ ಗೋವಾ ವಿರುದ್ಧ ಅನು'ವಿಸಿದ 3-0 ಗೋಲುಗಳ ಅಂತರದ ಸೋಲು ಎಟಿಕೆ ತಂಡದ ಪ್ಲೇ ಆಫ್ ಆಸೆಯನ್ನು ಕಮರುವಂತೆ ಮಾಡಿತು. ಈಗ ಕೊಪ್ಪೆಲ್ ಪಡೆಗೆ ಉಳಿದಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಜಯ ಗಳಿಸಿದರೂ ಪ್ಲೇ ಆಫ್ ಹಾದಿ ಕಷ್ಟವೆನಿಸಿದೆ. ಇತರರ ಲಿತಾಂಶ ಕೂಡ ಎಟಿಕೆ ಪರವಾಗಿ ಘಟಿಸಬೇಕಾಗಿದೆ. ಮನೆಯಂಗಣದಲ್ಲಿ ಎಟಿಕೆ ತಂಡ ಒಂದು ಡ್ರಾ, ಮೂರು ಜಯ ಹಾಗೂ ಮೂರು ಸೋಲನುಭವಿಸಿದೆ. ಉಳಿದಿರುವ ಎರಡು ಪಂದ್ಯ ಕೂಡ ಮನೆಯಂಗಣದಲ್ಲೇ ನಡೆಯಲಿದೆ. ಆತಿಥೇಯ ತಂಡ ಮನೆಯಂಗಣದಲ್ಲಿ ಪ್ರೇಕ್ಷಕ ಪ್ರೋತ್ಸಾಹದ ಲಾಭವನ್ನು ಪಡೆಯಬೇಕಾಗಿದೆ. ಇದುವರೆಗೂ ಎಟಿಕೆ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರಿರಲಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್

ಮುಂಬೈ ತಂಡದ ಲೆಕ್ಕಾಚಾರ ಸುಲಭವಾಗಿದೆ. ಒಂದು ಪಂದ್ಯದಲ್ಲಿ ಜಯ ಗಳಿಸಿದರೆ ಮುಂಬೈ ತಂಡ ಪ್ಲೇ ಆ್ ಹಂತವನ್ನು ತಲುಪಲಿದೆ. ಆದರೆ ತಂಡದ ಪ್ರಸಕ್ತ ಪ್ರದರ್ಶನದ ಹಾದಿಯನ್ನು ಗಮನಿಸಿದಾಗ ಜಯದ ಹಾದಿ ಅಷ್ಟು ಸುಲಭವಾಗಿಲ್ಲ ಅನಿಸುತ್ತಿದೆ. ಜಾರ್ಜ್ ಕೋಸ್ಟಾ ಪಡೆ ಸತತ ಒಂಬತ್ತು ಪಂದ್ಯಗಳಲ್ಲಿ ಸೋಲನುಭವಿಸದೇ ಬಂದಿತ್ತು, ಅಂದರಲ್ಲಿ ಬೆಂಗಳೂರು ವಿರುದ್ಧದ ಜಯವೂ ಸೇರಿತ್ತು. ಆದರೆ ನಂತರ ಸತತ ಮೂರು ಪಂದ್ಯಗಳಲ್ಲಿ ಸೋತು ಆತಂಕದ ಕ್ಷಣಕಂಡಿತ್ತು.

ವೃತ್ತಿ ಜೀವನದ ಚೊಚ್ಚಲ ಟಿ20 ಶತಕ ಚಚ್ಚಿದ ಟೆಸ್ಟ್ ಸ್ಟಾರ್ ಪೂಜಾರ!ವೃತ್ತಿ ಜೀವನದ ಚೊಚ್ಚಲ ಟಿ20 ಶತಕ ಚಚ್ಚಿದ ಟೆಸ್ಟ್ ಸ್ಟಾರ್ ಪೂಜಾರ!

'ಕಳೆದ ಮೂರು ಪಂದ್ಯಗಳಲ್ಲಿ ನಾವು ನಮ್ಮ ಸಾಮರ್ಥಕ್ಕೆ ತಕ್ಕಂತೆ ಆಡಿರಲಿಲ್ಲ. ಗಾಯದ ಸಮಸ್ಯೆ, ಅಮಾನತು ಹಾಗೂ ನಮ್ಮ ತಂಡದ ಆಟಗಾರರು ಮಾಡಿರುವ ಪ್ರಮಾದಗಳು ತಂಡದ ಹಿನ್ನಡೆಗೆ ಕಾರಣವಾಯಿತು, ನಾವೀಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ನಾವು ಮಾಡಿರುವ ತಪ್ಪುಗಳ ಕಡೆಗೆ. ಆದರೂ ನಮ್ಮ ಆಟಗಾರರ ಬಗ್ಗೆ ನಂಬಿಕೆ ಇದೆ. ಈ ಮೂರು ಪಂದ್ಯಗಳ ಹಿಂದೆ ನಮ್ಮ ತಂಡ ತೋರಿರುವ ಸಾಮರ್ಥ್ಯವನ್ನು ಮತ್ತೆ ತೋರಿಸಲಿದೆ ಎಂಬ ನಂಬಿಕೆ ಇದೆ,' ಎಂದು ಕೋಸ್ಟಾ ಹೇಳಿದ್ದಾರೆ. ಎಟಿಕೆ ರೀತಿಯಲ್ಲಿ ಮುಂಬೈ ತಂಡದ ಪ್ಲೇ ಆಫ್ ಅವಕಾಶ ತಂಡದ ಮೇಲೆ ಆಧರಿಸಿದೆ, ಉಳಿದಿರುವ ಎರಡು ಪಂದ್ಯಗಳಲ್ಲಿ ಜಯ ಗಳಿಸಿದರೆ ಹಾದಿ ಸುಗಮ.

Story first published: Thursday, February 21, 2019, 20:10 [IST]
Other articles published on Feb 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X