ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಹೊಸ ರೂಪ ಪಡೆದ ಚೆನ್ನೈಯಿನ್‌ಗೆ ಒಡಿಶಾ ಸವಾಲು

By Isl Media
ISL 2019: Rejuvenated Chennaiyin eye Odisha scalp

ಚೆನ್ನೈ, ನವೆಂಬರ್ 28: ಜಯದ ಹಾದಿ ಕಂಡುಕೊಂಡು ಹೊಸ ರೂಪು ಪಡೆದ ಚೆನ್ನೈಯಿನ್ ಎಫ್‌ಸಿ ಗುರುವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಒಡಿಶಾ ಎಫ್‌ಸಿ ವಿರುದ್ಧ ಸೆಣಸಲಿದೆ.

ಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತಬಂಗಾರ ವಿಜೇತ ಬಾಡಿಬಿಲ್ಡರ್ ಸೈನಿಕನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

ಗೋಲಿಲಲ್ಲದೆ, ಜಯ ಕಾಣದೆ ಕಂಗಾಲಾಗಿದ್ದ ಚೆನ್ನೈ ತಂಡ ಕೊನೆಗೂ ಹೈದರಾಬಾದ್ ವಿರುದ್ಧ ಅಂತಿಮ ಕ್ಷಣದಲ್ಲಿ ಆಂಡ್ರೆ ಷೇಮ್ಬ್ರಿ ಹಾಗೂ ನೆರಿಜುಸ್ ವಾಲ್ಸ್ಕಿಸ್ ಗಳಿಸಿದ ಗೋಲಿನಿಂದ 2-1 ಅಂತರದಲ್ಲಿ ಜಯ ಗಳಿಸಿತ್ತು. ತಮ್ಮ ಅಸ್ತ್ರದಲ್ಲಿ ಕೊನೆ ಕ್ಷಣದಲ್ಲಿ ಗೋಲು ಗಳಿಸುವ ನಾಟಕೀಯ ಗುಣ ಇರುವುದು ತಂಡದ ಪಾಲಿನ ಅಸ್ತ್ರ ಎಂದು ಪ್ರಧಾನ್ ಕೋಚ್ ಜಾನ್ ಗ್ರೆಗೊರಿ ಹೇಳಿದ್ದು, ಈಗ ತಂಡದ ಅದೃಷ್ಟ ಹೊಸ ರೂಪ ಪಡೆದಿದೆ ಎನ್ನುತ್ತಾರೆ. ಗೋಲ್ ಬಾಕ್ಸ್ ನ ಮುಂಭಾಗದಲ್ಲಿ ಸಂಕಷ್ಟ ಪಡುವುದು ಈಗ ಇತಿಹಾಸ ಎಂದಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಪ್ರತಿಯೊಂದು ಹಂತದಲ್ಲೂ ಹೈದರಾಬಾದ್ ವಿರುದ್ಧ ಪ್ರಭುತ್ವ ಸಾಧಿಸಿತ್ತು. ಆದರೆ ಗೋಲು ದಾಖಲಾಗಿರುವುದು ಕೊನೆಯ ಕ್ಷಣದಲ್ಲಿ. ನಿರಂತರ ಹೋರಾಟಕ್ಕೆ ತಂಡ ಕೊನೆಗೂ ಬೆಲೆ ಗಳಿಸಿತು. ಈ ನಡುವೆ ಹಲವು ಅವಕಾಶಗಳು ಸಿಕ್ಕಿದರೂ ತಂಡ ಗೋಲು ಗಳಿಸುವಲ್ಲಿ .ವಿಫಲವಾಗಿತ್ತು,

''ನಮ್ಮ ಸ್ಟ್ರೈಕರ್ ಗಳ ಬಗ್ಗೆ ನನಗೆ ಯಾವುದೇ ರೀತಿಯ ಸಂಶಯ ಇಲ್ಲ. ತರಬೇತಿಯಲ್ಲಿ ಅವರು ನಿತ್ಯವೂ ಗೋಲು ಗಳಿಸುತ್ತಾರೆ.ಅವರಿಬ್ಬರೂ ಇಲ್ಲಿಗೆ ಬರುವುದಕ್ಕೆ ಮುನ್ನ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಅವರು ಅಭ್ಯಾಸ ಪಂದ್ಯದಲ್ಲಿ ತೋರಿಸಿದ್ದಾರೆ. ಆದರೆ ಐಎಸ್ ಎಲ್ ನಲ್ಲಿ ಸಾಧ್ಯವಾಗಲಿಲ್ಲ. ಅದೊಂದು ಚಿಂತೆ ಕಾಡುತ್ತಿತ್ತು.ಆದರೆ ಹೈದರಾಬಾದ್ ವಿರುದ್ಧ ಅವರು ತಮ್ಮ ನೈಜ ಸಾಮರ್ಥ್ಯವನ್ನು ತೋರಿದರು. ಅವರ ಮೇಲಿಟ್ಟ ನಂಬಿಕೆಯನ್ನು ನಾನೆಂದು ಕಳೆದುಕೊಂಡಿಲ್ಲ. ಇನ್ನೂ ಅವರು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಾರೆಂಬ ನಂಬಿಕೆ ಇದೆ,'' ಎಂದು ಗ್ರೆಗೊರಿ ಹೇಳಿದ್ದಾರೆ.

ISL 2019: Rejuvenated Chennaiyin eye Odisha scalp

ಜೋಸೆಫ್ ಗೊಂಬಾವ್ ಅವರಲ್ಲಿ ಪಳಗಿ ಈಗ ಚೆನ್ನೈ ತಂಡವನ್ನು ಸೇರಿಕೊಂಡಿರುವ ಲಲಿಯಂಜುವಲ ಚಾಂಗ್ತೆ ಅವರ ಮೇಲೆ ಹೆಚ್ಚಿನ ಗಮನ ಹರಿಸುವಂತಾಗಿದೆ. ಒಡಿಶಾ ತಂಡ ಚಾಂಗ್ತೆ ಸ್ಥಾನದಲ್ಲಿ ಜೆರ್ರಿ ಮೌಹಿಮಿಂಗ್ಥಂಗ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಅವರು ಈಗಾಗಲೇ ಮೂರು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ.

ಭಾರತ vs ವಿಂಡೀಸ್: ಭಾರತ ತಂಡದಲ್ಲಿ ಶಿಖರ್ ಧವನ್ ಬದಲು ಸಂಜುಗೆ ಸ್ಥಾನ!ಭಾರತ vs ವಿಂಡೀಸ್: ಭಾರತ ತಂಡದಲ್ಲಿ ಶಿಖರ್ ಧವನ್ ಬದಲು ಸಂಜುಗೆ ಸ್ಥಾನ!

ಒಡಿಶಾ ಎಫ್ ಸಿ ಆಡಿರುವ ಐದು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಮಾತ್ರ. ಆಡಿರುವ ಪ್ರತಿಯೊಂದು ಪಂದ್ಯದಲ್ಲೂ ಚೆಂಡಿನ ನಿಯಂತ್ರಣವನ್ನು ಸಾಧಿಸಿದೆ,. ಉತ್ತಮ ಗುಣಮಟ್ಟದ ಫುಟ್ಬಾಲ್ ಆಟವನ್ನು ಒಡಿಶಾ ಪ್ರದರ್ಶಿಸಿದೆ. ಆದರೆ ಫಲಿತಾಂಶ ಮಾತ್ರ ಉತ್ತಮವಾಗಿಲ್ಲ.

ಕಳೆದ ಬಾರಿಗಿಂತ ಈ ಬಾರಿ ತಂಡದ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ. ಎರಡು ಪಂದ್ಯಗಳಲ್ಲಿ ಗೋಳಿಲ್ಲದೆ ಡ್ರಾ ಕಂಡಿಂದೆ, ಆದರೆ ಗೊಂಬಾವ್ ಆಬಗ್ಗೆ ಹೆಚ್ಚು ಚಿಂತಿಸಿಲ್ಲ.

''ಅವಕಾಶಗಳನ್ನು ಸೃಷ್ಟಿ ಮಾಡುವುದು ಅರ=ಅತ್ಯಂತ ಪ್ರಮುಖವಾದ ಅಂಶ, ನೀವು ಅವಕಾಶ ಸೃಷ್ಠಿಸಿದರೆ ಮಾತ್ರ ಗೋಲು ಗಳಿಸಲು ಸಾಧ್ಯ. ಚೆಂಡನ್ನು ಕ್ರಾಸ್ ಮಾಡುವುದು ಹಾಗೂ ಅದಕ್ಕೆ ಅಂತಿಮವಾಗಿ ಗೋಲಿನ ರೂಪು ನೀಡುವ ಬಗ್ಗೆ ತರಬೇತಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ್ದೇವೆ. ನಾವು ಐದು ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿದ್ದೇವೆ, ಅದು ಕಳಪೆ ಅಲ್ಲ. ಕಳೆದ ಎರಡು ಪಂದ್ಯಗಳಲ್ಲಿ ನಾವು ಗೋಲು ಗಳಿಸಿರಲಿಲ್ಲ, ಮುಂದಿನ ಪಂದ್ಯಗಳಲ್ಲಿ ಆರಂಭದಲ್ಲೇ ಗೋಲು ಗಳಿಸುತ್ತೇವೆ ಎಂಬ ನಂಬಿಕೆ ಇದೆ,'' ಎಂದು ಹೇಳಿದರು. ಕ್ಸಿಸ್ಕೋ ಹೆರ್ನಾಂಡಿಸ್ ಅವರ ಸ್ಟಾರ್ ಆಟಗಾರನಾಗಿದ್ದು, ಚೆನ್ನೈಯಲ್ಲೂ ಮಿಂಚುತ್ತಾರೆಂಬ ನಂಬಿಕೆ ಕೋಚ್ ಗೆ ಇದೆ.

ಗೊಂಬಾವ್, ಎಟಿಕೆ ವಿರುದ್ಧ ಆಡಿಸಿದ್ದ ಆಟಗಾರರನ್ನೇ ಚೆನ್ನೈ ವಿರುದ್ಧ ಅಂಗಣಕ್ಕಿಳಿಸಲಿದ್ದಾರೆ, ವಿದೇಶಿ ಆಟಗಾರರಿಗೆ ಔಟ್ ಫೀಲ್ಡ್ ನಲ್ಲೆ ಇರಿಸಲಿದ್ದಾರೆ. ಫ್ರಾನ್ಸಿಸ್ಕೋ ದೋರ್ರೋನ್ಸೋರ್ರೋ ಅವರು ಅಂಗಣಕ್ಕಿಳಿಯಲಿದ್ದಾರೆ.ಅರ್ಶದೀಪ್ ಸಿಂಗ್ ಉತ್ತಮ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ ಗೊಂಬಾವ್ ವಿದೇಶಿ ಆಟಗಾರರ ಬಗ್ಗೆ ಯಾವ ತೀರ್ಮಾನ ಕೈಗೊಳ್ಳುತ್ತರಾಂಬುದು ಕುತೂಹಲದ ಸಂಗತಿ.

Story first published: Wednesday, November 27, 2019, 19:57 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X