ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್

ISL 2020-21: Keralas Rahul snatches dramatic late win over Bengaluru

ಗೋವಾ: ಅತ್ಯಂತ ರೋಚಕವಾಗಿ ನಡೆದ ಹೀರೋ ಇಂಡಿಯನ್ ಸೂಪರ್ ಲೀಗ್ ನ 65ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಬೆಂಗಳೂರು ಎಫ್ ಸಿ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ದ್ವಿತಿಯಾರ್ಧಲ್ಲಿ ಲಾಲ್ಥಾಥಾಂಗಾ ಕ್ವಾಲ್ರಿಂಗ್ (73ನೇ ನಿಮಿಷ) ಮತ್ತು ರಾಹುಲ್ ಪ್ರವೀಣ್ (90ನೇ ನಿಮಿಷ) ಗಳಿಸಿದ ಗೋಲು ಬೆಂಗಳೂರಿಗೆ ಚೇತರಿಸಿಕೊಳ್ಳಲು ಕಷ್ಟವಾದ ಆಘಾತವನ್ನುಂಟುಮಾಡಿತು. ಬೆಂಗಳೂರು ಪರ ಕ್ಲೈಟನ್ ಸಿಲ್ವಾ (24ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆಮಾಡಿತು.

ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ

ಕೇರಳದ ಮಿಂಚಿನ ಆಟದ ಮುಂದೆ ಬೆಂಗಳೂರಿನ ಡಿಫೆನ್ಸ್ ಕೆಲಸ ಮಾಡಲಿಲ್ಲ. ಈ ಜಯದೊಂದಿಗೆ ಕೇರಳ 9ನೇ ಸ್ಥಾನ ತಲುಪಿತು. ಬೆಂಗಳೂರು 7ನೇ ಸ್ಥಾನದಲ್ಲೇ ಉಳಿದುಕೊಂಡಿತು. ಈ ಸೋಲು ಬೆಂಗಳೂರಿನ ಪ್ಲೇ ಆಫ್ ಆಸೆಗೆ ಅಡ್ಡಿ ಮಾಡಿರುವದು ಸಹಜ.

ಬೆಂಗಳೂರಿಗೆ ಮುನ್ನಡೆ

ಬೆಂಗಳೂರಿಗೆ ಮುನ್ನಡೆ

ಕ್ಲೈಟನ್ ಸಿಲ್ವಾ (24ನೇ ನಿಮಿಷ) ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಪ್ರಥಮಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾರ್ನರ್ ಎಸೆತವು ಆಟಗಾರರನ್ನು ವಂಚಿಸಿ ನೇರವಾಗಿ ಕ್ಲೈಟನ್ ಗೆ ಸಿಕ್ಕಾಆಗ ಡೈವ್ ಮೂಲಕ ಗೋಲು ಗಳಿಸಿ ಬೆಂಗಳೂರಿಗೆ ಮುನ್ನಡೆ ಕಲ್ಪಿಸಿದರು. ಅಂತಿಮ ಕ್ಷಣದಲ್ಲಿ ನಾಯಕ ಸುನಿಲ್ ಛೆಟ್ರಿ ದೊರೆತ ಫ್ರೀಕಿಕ್ ಮೂಲಕ ಗೋಲು ಗಳಿಸುವಲ್ಲಿ ವಿಫಲವಾದರು, ಕೇರಳದ ಗೋಲ್ ಕೀಪರ್ ಅಲ್ಬಿನೋ ಗೋಮ್ಸ್ ಚಂಗನೆ ಜಿಗಿದು ಚೆಂಡನ್ನು ಹೊರದಬ್ಬಿದರು. ಬೆಂಗಳೂರು ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಎರಡು ಬಾರಿ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು. ಆರಂಭದಲ್ಲಿ ಕೇರಳ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೆ ಸಮಯ ಕಳೆದಂತೆ ಆ ಸ್ಥಿರತೆ ಕಂಡು ಬಂದಿಲ್ಲ. ಕೇರಳ ಪರ ಸಹಲ್ ಅಬ್ದುಲ್ ಸಮದ್ ಬೆಂಗಳೂರಿನ ಡಿಫೆನ್ಸ್ ವಿಭಾಗವನ್ನು ಹಲವು ಬಾರಿ ಬ್ರೇಕ್ ಮಾಡಿದರೂ ಉತ್ತಮ ಅವಕಾಶ ತಂಡಕ್ಕೆ ಸಿಗಲಿಲ್ಲ.

ದಕ್ಷಿಣದ ಬಲಿಷ್ಠರ ಕದನ

ದಕ್ಷಿಣದ ಬಲಿಷ್ಠರ ಕದನ

ಹೀರೋ ಇಂಡಿಯನ್ ಸೂಪರ್ ಲೀಗ್ ನ 65ನೇ ಪಂದ್ಯದಲ್ಲಿ ದಕ್ಷಿಣದ ಬಲಿಷ್ಠ ತಂಡಗಳಾದ ಕೇರಳ ಬ್ಲಾಸ್ಟರ್ಸ್ ಹಾಗೂ ಬೆಂಗಳೂರು ಎಫ್ ಸಿ ತಂಡಗಳು ಮುಖಾಮುಖಿಯಾದವು. ಎರಡೂ ತಂಡಗಳ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ದಿಟ್ಟ ಹೋರಾಟದ ಜತೆಯಲ್ಲಿ ಜಯ ಗಳಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಡ್ರಾಗಿಂತ ಇತ್ತಂಡಗಳು ಮೂರು ಅಂಕಗಳ ಮೇಲೆ ಗುರಿ ಇಟ್ಟಿರುವುದು ಸ್ಪಷ್ಟ, ಲೀಗ್ ನಲ್ಲಿ 7ನೇ ಸ್ಥಾನದಲ್ಲಿರುವ ಬೆಂಗಳೂರು ಮೈಕೊಡವಿ ಏಳಬೇಕಕಾದ ಅನಿವಾರ್ಯತೆ ಇದೆ.

ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ

ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ

ಬಿಎಫ್ ಸಿ ತಂಡ ಕಳೆದ ಎಂಟು ಪಂದ್ಯಗಳಿಂದ ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ. ಆರಂಭದಲ್ಲೇ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗುತ್ತಿರುವ ಬೆಂಗಳೂರು ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಿರುವುದು ಸಾಮಾನ್ಯವಾಗಿತ್ತು. ಈ ಪ್ರಮಾದವನ್ನು ಸರಿಪಡಿಸಿಕೊಂಡರೆ ಬೆಂಗಳೂರಿನ ಹಾದಿ ಸುಗಮವಾಗಬಹುದು. ಈ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಬೆಂಗಳೂರು ಜಯ ಕಂಡಿತ್ತು. ಕೇರಳ ಈ ಬಾರಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸರದಿಯಲ್ಲಿರುವ ಕೇರಳ, ಬೆಂಗಳೂರು ವಿರುದ್ಧ ಆಡಿರುವ 7 ಪಂದ್ಯಗಳಲ್ಲಿ ಕೇರಳ 5ರಲ್ಲಿ ಸೋಲನುಭವಿಸಿದೆ.

Story first published: Thursday, January 21, 2021, 9:34 [IST]
Other articles published on Jan 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X