ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಪೆನಾಲ್ಟಿ ಶೂಟೌಟ್, ಗೋವಾ ಔಟ್, ಫೈನಲ್ ತಲುಪಿದ ಮುಂಬೈ

By Isl Media
ISL 2020-21, Semifinals: Mumbai win battle of nerves to pip Goa to historic final

ಗೋವಾ: ಪೆನಾಲ್ಟಿ ಶೂಟೌಟ್ ನಲ್ಲಿ ಎಫ್ ಸಿ ಗೋವಾ ತಂಡವನ್ನು 6-5 ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಮೊದಲ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ತಲುಪಿತು. ಮೊದಲ ಪೆನಾಲ್ಟಿ ಶೂಟೌಟ್ ನಲ್ಲಿ ಇತ್ತಂಡಗಳು ಸಮಬಲ ಸಾಧಿಸಿದ್ದವು. ನಂತರ ಪೆನಾಲ್ಟಿ ಶೂಟೌಟನ್ನು ಮುಂದುವರಿಸಿದಾಗ ಮುಂಬೈ ಜಯ ಗಳಿಸಿತು. ನಿಗಧಿತ ಅವಧಿ ಹಾಗೂ ಹೆಚ್ಚುವರಿ ಅವಧಿಗಳಲ್ಲಿ (ಒಟ್ಟು 121 ನಿಮಿಷ) ಇತ್ತಂಡಗಳು ಗೋಲು ಗಳಿಸವಲ್ಲಿ ವಿಫಲವಾದ ಕಾರಣ ಪಂದ್ಯವನ್ನು ಪೆನಾಲ್ಟಿ ಶೂಟೌಟ್ ಗೆ ಅಳವಡಿಸಲಾಯಿತು.

ಹೆಚ್ಚುವರಿ ಸಮಯ
90 ನಿಮಿಷಗಳು ಮತ್ತು 4 ಹೆಚ್ಚವರಿ ನಿಮಿಷಗಳ ಅವಧಿಯಲ್ಲೂ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ಗೋವಾ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು. ಗೋವಾ 10 ಶಾಟ್ ಗಳನ್ನು ದಾಖಲಿಸಿತ್ತು. ಅಮ್ರಿಂದರ್ ಸಿಂಗ್ ಅವರು ಮುಂಬೈ ತಂಡದ ಪಾಲಿಗೆ ಹೀರೋ ಎನಿಸಿದರು. ಎರಡು ಬಾರಿ ಗೋವಾದ ಗೋಲು ಗಳಿಕೆಗೆ ಅಡ್ಡಿಯಾಗಿ ಉತ್ತಮ ರೀತಿಯಲ್ಲಿ ತಡೆದರು. ಮುಂಬೈಗೆ ದ್ವಿತಿಯಾರ್ಧದಲ್ಲಿ ಒಮ್ಮೆ ಮಾತ್ರ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು.

ಆದರೆ ಕಾರ್ನರ್ ಪಾಸನ್ನು ಗೋಲಾಗಿಸುವಲ್ಲಿ ಮುಂಬೈ ಆಟಗಾರರು ವಿಫಲವಾದರು. ಇದರೊಂದಿಗೆ ಪಂದ್ಯದ ಪೂರ್ಣ ಅವಧಿ ಗೋಲಿಲ್ಲದೆ ಅಂತ್ಯಗೊಂಡು ಪಂದ್ಯ ಹೆಚ್ಚುವರಿ 30 ನಿಮಿಷಗಳಿಗೆ ಅಳವಡಿಸಲಾಯಿತು.

ಗೋಲಿಲ್ಲದ ಪ್ರಥಮಾರ್ಧ

ಗೋಲಿಲ್ಲದ ಪ್ರಥಮಾರ್ಧ

ಜಯವೊಂದನ್ನೇ ಮಂತ್ರವಾಗಿಸಿಕೊಂಡು ಅಂಗಣಕ್ಕಿಳಿದ ಎಫ್ ಸಿ ಗೋವಾ ಮತ್ತು ಮುಂಬೈ ಸಿಟಿ ಎಫ್ ಸಿ ಮೊದಲ ಸೆಮಿಫೈನಲ್ ನ ಎರಡನೇ ಲೆಗ್ ನ ದ್ವಿತೀಯ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು. ಎರಡೂ ತಂಡಗಳಿಗೂ ಸಿಕ್ಕಿದ್ದು ತಲಾ ಒಂದು ಅವಕಾಶ ಮಾತ್ರ. ಆದರೆ ಯಾವುದೂ ಗೋಲಾಗಿ ಪರಿವರ್ತನೆಯಾಗಿಲ್ಲ. ಇತ್ತಂಡಗಳ ಆಟದಲ್ಲಿ ಆಕ್ರಮಣವಿತ್ತೇ ವಿನಃ ಅದು ಮಿಡ್ ಫೀಲ್ಡ್ ಗೆ ಮಾತ್ರ ಸೀಮಿತವಾಗಿತ್ತು. ಮುಂಬೈ ಗೋಲ್ ಕೀಪರ್ ಅಮ್ರಿಂದರ್ ಸಿಂಗ್ ಎರಡು ಬಾರಿ ಗೋಲಾಗುವುದನ್ನು ತಡೆದು ತಂಡಕ್ಕೆ ನೆರವಾದರು. ಪ್ರಥಮಾರ್ಧದ ಕೊನೆಯಲ್ಲಿ ಇತ್ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ದ್ವಿತಿಯಾರ್ಧದಲ್ಲಿ ಗೋವಾ ಇದುವರೆಗೂ 18 ಗೋಲುಗಳನ್ನು ಗಳಿಸಿತ್ತು, ಮುಂಬೈ ಸಿಟಿ ತಂಡ 16 ಗೋಲುಗಳನ್ನು ಗಳಿಸಿತ್ತು, ಇದರಿಂದಾಗಿ ದ್ವಿತಿಯಾರ್ಧ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಫೈನಲ್ ಗುರಿಯಲ್ಲಿ ಮುಂಬೈ

ಫೈನಲ್ ಗುರಿಯಲ್ಲಿ ಮುಂಬೈ

ಹೀರೋ ಇಂಡಿಯನ್ ಸೂಪರ್ ಲೀಗ್ ಗಳಲ್ಲಿ ಮುಂಬೈ ಸಿಟಿ ಎಫ್ ಸಿ ತಂಡ ಇದುವರೆಗೂ ಫೈನಲ್ ತಲುಪಿರಲಿಲ್ಲ. ಮೊದಲ ಬಾರಿಗೆ ಲೀಗ್ ವಿನ್ನರ್ಸ್ ಶೀಲ್ಡ್ ಗೆದ್ದ ನಂತರ ಎಫ್ ಸಿ ಗೋವಾ ವಿರುದ್ಧದ ಮೊದಲ ಸೆಮಿಫೈನಲ್ ಎರಡನೇ ಲೆಗ್ ನಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸುವ ಗುರಿಯೊಂದಿಗೆ ಅಗಣಕ್ಕಿಳಿಯಿತು. ಮೊದಲ ಲೆಗ್ 2-2ರಲ್ಲಿ ಸಮಬಲಗೊಂಡಿದ್ದರಿಂದ ಅಲ್ಲಿಯ ಫಲಿತಾಂಶ ಈ ಪಂದ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು.

ಅವಕಾಶ ತಪ್ಪಿದಂತಾಗಿದೆ

ಅವಕಾಶ ತಪ್ಪಿದಂತಾಗಿದೆ

ಮೊದಲ ಲೆಗ್ ನಲ್ಲಿ ಗೋವಾ ತಂಡ ಗಾಯದ ಕಾರಣ ಕೆಲವು ಪ್ರಮುಖ ಆಟಗಾರರಿಂದ ವಂಚಿತವಾಗಿತ್ತು. ಮೊದಲ ಲೆಗ್ ನಲ್ಲಿ ಪಂದ್ಯ ಡ್ರಾಗೊಂಡಿರುವುದು ಜುವಾನ್ ಫೆರಾಂಡೊ ಪಡೆಗೆ ಅವಕಾಶ ತಪ್ಪಿದಂತಾಗಿದೆ. ಗೋವಾ ಡಿಫೆನ್ಸ್ ವಿಭಾಗದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಪ್ರಥಮ ಹಾಗೂ ದ್ವಿತಿಯಾರ್ಧಗಳಲ್ಲಿ ಆರಂಭದಲ್ಲೇ ಗೋಲು ಗಳಿಸಿದ್ದರೂ ಅಂತಿಮ ಕ್ಷಣದವರೆಗೂ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗಿತ್ತು.

Story first published: Tuesday, March 9, 2021, 9:50 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X