ಐಎಸ್‌ಎಲ್: ಕೇರಳದ ಮೊದಲ ಜಯಕ್ಕೆ ತಡೆಯೊಡ್ಡಲು ಚೆನ್ನೈಯಿನ್ ಸಜ್ಜು

By Isl Media

ಗೋವಾ, ನವೆಂಬರ್ 28: ಆರಂಭಿಕ ಎರಡು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿ, ಮೊದಲ ಜಯದ ನಿರೀಕ್ಷೆಯಲ್ಲಿರುವ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ದಕ್ಷಿಣದ ಮತ್ತೊಂದು ಬಲಿಷ್ಠ ತಂಡ ಚೆನ್ನೈಯಿನ್ ಎಫ್ ಸಿ ತಡೆಯೊಡ್ಡಿ ಮೂರು ಅಂಕ ಗಳಿಸುವ ನಿರೀಕ್ಷೆಯಲ್ಲಿದೆ, ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಇತ್ತಂಡಗಳು ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

'ಹ್ಯಾಂಡ್ ಆಫ್ ಗಾಡ್' ಶರ್ಟ್ ನಿಮ್ಮದಾಗಬಹುದು, ಬೆಲೆಯೆಷ್ಟು ಗೊತ್ತಾ?!

ಇದುವರೆಗೂ ಇತ್ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, ಎರಡು ಬಾರಿ ಚಾಂಪಿಯನ್ ಚೆನ್ನೈಯಿನ್ ತಂಡ ಆರು ಬಾರಿ ಜಯ ಗಳಿಸಿ ಮೇಲುಗೈ ಸಾಧಿಸಿದೆ. ಐದು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದು, ಚೆನ್ನೈ ಮೂರು ಬಾರಿ ಸೋತಿದೆ.

ಬಿಬಿಎಲ್‌: ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿ ಪ್ರಶಸ್ತಿ ಗೆದ್ದ ಸಿಡ್ನಿ ಥಂಡರ್ಸ್

ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಸಿದ ನಂತರ ಕಾಬಾ ಲಾಜ್ಲೋ ಪಡೆ, ಮಿಡ್ ಫೀಲ್ಡ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ರಫಾಯಲ್ ಕ್ರಿವೆಲ್ಲರೊ ಮತ್ತು ಅನಿರುಧ್ ಥಾಪಾ ಅವರನ್ನು ಹೆಚ್ಚು ಅವಲಂಭಿಸಿದೆ. ಫಾರ್ವರ್ಡ್ ಆಟಗಾರ ಇಮ್ಮಾಯಿಲ್ ಗೊನ್ಸಾಲ್ವೆಸ್ ತಂಡದ ಮತ್ತೊಂದು ಶಕ್ತಿ ಎನಿಸಿದ್ದಾರೆ.

ಎದುರಾಳಿಯ ಬಗ್ಗೆ ಚೆನ್ನಾಗಿ ಗೊತ್ತು

ಎದುರಾಳಿಯ ಬಗ್ಗೆ ಚೆನ್ನಾಗಿ ಗೊತ್ತು

"ನಮಗೆ ನಮ್ಮ ಎದುರಾಳಿಯ ಬಗ್ಗೆ ಚೆನ್ನಾಗಿ ಗೊತ್ತು," ಎಂದಿರುವ ಲಾಜ್ಲೊ, " ನಾವು ಪಂದ್ಯವನ್ನು ನಿಯಂತ್ರಿಸುವ ಬಗ್ಗೆ ಯತ್ನಿಸಬೇಕು. ಕೇರಳ ಉತ್ತಮ ತಂಡ. ಅವರ ಕೋಚ್ (ಕಿಬು ವೆಕುನಾ) ಭಾರತದ ಫುಟ್ಬಾಲ್ ನಲ್ಲಿ ಎರಡನೇ ವರ್ಷವನ್ನು ಕಳೆದಿದ್ದು, ಇಲ್ಲಿಯ ಫುಟ್ಬಾಲ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ತಂಡಕ್ಕೆ ಮಾತ್ರ ಹೊಸಬರು ಅಷ್ಟೆ, ತಂಡದ ಪ್ರತಿಕ್ರಿಯೆ ಮತ್ತು ಅವರ ಆಸೆ ಇದು ಸಾಮಾನ್ಯವಾಗಿ ಪ್ರಮುಖವಾಗಿರುತ್ತದೆ. ಇದು ಡರ್ಬಿ ಪಂದ್ಯ, ಕೇವಲ ಮತ್ತೊಂದು ಪಂದ್ಯವಲ್ಲ,'' ಎಂದರು.

ಅದೇ ಮಾರ್ಗದಲ್ಲಿ ಸಾಗುವೆವು

ಅದೇ ಮಾರ್ಗದಲ್ಲಿ ಸಾಗುವೆವು

"ನಾವು ಯಾವ ರೀತಿಯಲ್ಲಿ ಆರಂಭ ಕಂಡಿದ್ದೇವೊ ಅದೇ ರೀತಿಯಲ್ಲಿ ಮುಂದುವರಿಯಲಿದ್ದೇವೆ. ನಮ್ಮ ಫುಟ್ಬಾಲ್ ಅಟ ಮತ್ತು ನಮ್ಮ ಶೈಲಿಯನ್ನು ಖುಷಿ ಪಡುವುದಕ್ಕಾಗಿ ಅದೇ ಮಾರ್ಗದಲ್ಲಿ ಸಾಗುವೆವು. ಜಯದೊಂದಿಗೆ ಮೂರು ಅಂಕಗಳನ್ನು ಗಳಿಸುತ್ತೇವೆಂಬ ಭರವಸೆ ಇದೆ,'' ಎಂದರು. ಮೊದಲ ಎರಡು ಪಂದ್ಯಗಳಲ್ಲಿ ಕೇರಳ ತಮ್ಮ ಎದುರಾಳಿ ತಂಡದ ವಿರುದ್ಧ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರೂ ಅವಕಾಶಗಳನ್ನು ನಿರ್ಮಿಸಲು ಹೆಣಗಾಡುತ್ತಿತ್ತು. ಅಟ್ಯಾಕ್ ಜತೆಯಲ್ಲಿ ವಿಕುನಾ ತಮ್ಮ ತಂಡದ ಡಿಫೆನ್ಸ್ ವಿಭಾಗ ಸುಧಾರಿಸಬೇಕು ಎಂದಿದ್ದಾರೆ.

ಸಹಾಲ್ ಆಡೋದು ಅನುಮಾನ

ಸಹಾಲ್ ಆಡೋದು ಅನುಮಾನ

ಕೇರಳ ಬ್ಲಾಸ್ಟರ್ಸ್ ತಂಡ ದ್ವಿತಿಯಾರ್ಧದಲ್ಲಿ ಎಲ್ಲ ಮೂರು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ಮಾಡಿಕೊಟ್ಟಿತ್ತು. ಸರ್ಗಿಯೋ ಸಿಡೊಂಚಾ ಅವರು ಮಿಡ್ ಫೀಲ್ಡ್ ನಲ್ಲಿರುವುದು ತಂಡದ ಆಧಾರ ಸ್ತಂಭ ಎನಿಸಿದ್ದಾರೆ. ಆದರೆ ಸಹಾಲ್ ಅಬ್ದುಲ್ ಸಮದ್ ನೇರವಾಗಿ ಆಡುವ ಹನ್ನೊಂದು ಮಂದಿಯಲ್ಲಿ ಸ್ಥಾನ ಪಡೆಯುವುದು ಸಂಶಯವೆನಿಸಿದೆ.

ಮತ್ತೆ ಮುಂದೆ ಸಾಗುತ್ತೇವೆ

ಮತ್ತೆ ಮುಂದೆ ಸಾಗುತ್ತೇವೆ

"ನಮ್ಮ ಎರಡೂ ಎದುರಾಳಿ ತಂಡಗಳ ವಿರುದ್ಧ ಚೆಂಡಿನ ಮೇಲೆ ಹೆಚ್ಚು ಕಾಲ ನಿಯಂತ್ರಣ ಸಾಧಿಸಿದ್ದು ನಿಜ, ಆದರೆ ನಾವು ಮಾಡಬೇಕಾಗಿರುವುದೇನೆಂದರೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದು." ಎಂದು ಹೇಳಿರುವ ವಿಕುನಾ, "ನಾವು ಪಂದ್ಯಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಯಾವ ವಿಭಾಗದಲ್ಲಿ ಸುಧಾರಣೆ ಆಗಬೇಕು ಎಂಬುದರ ಬಗ್ಗೆ ಮಾತನಾಡುತ್ತೇವೆ. ಮತ್ತೆ ಮುಂದೆ ಸಾಗುತ್ತೇವೆ. ಅದೊಂದು ಅಂಶ ಆದರೆ ನಾವು ಹಲವಾರು ಒಳ್ಳೆಯ ಅಂಶಗಳಲ್ಲಿ ಯಶಸ್ಸು ಕಂಡಿರುತ್ತೇವೆ, ನಮಗೆ ನಮ್ಮದೇ ಆದ ಯೋಜನೆಗಳಿರುತ್ತವೆ, ಅದಕ್ಕೆ ನಾವು ಅಂಟಿಕೊಂಡಿರುತ್ತೇವೆ. ನಾವು ದಾಳಿ ಮತ್ತು ರಕ್ಷಣೆ ಎರಡೂ ವಿಭಾಗಗಳಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ, ನಾವು ಆ ಬಗ್ಗೆ ಕಾರ್ಯಪ್ರವ್ರತ್ತರಾಗಿದ್ದೇವೆ. ನಾಳೆಯ ಪಂದ್ಯ ಕಠಿಣ ಸವಾಲಾಗಲಿದೆ,'' ಎಂದರು.

For Quick Alerts
ALLOW NOTIFICATIONS
For Daily Alerts
Story first published: Saturday, November 28, 2020, 20:22 [IST]
Other articles published on Nov 28, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X