ಐಎಸ್‌ಎಲ್ 2020: ಗೋವಾ, ಮುಂಬೈ ನಡುವೆ ಕುತೂಹಲಕಾರಿ ಪಂದ್ಯ

By Isl Media

ಗೋವಾ, ಫೆಬ್ರವರಿ 11: ಬುಧವಾರ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಸಿಟಿ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಎಫ್ ಸಿ ಗೋವಾ ತಂಡ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ.

ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ ನಂತರ ಎಫ್ ಸಿ ಗೋವಾ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಇತ್ತೀಚೆಗೆ ತಂಡವು ಸರ್ಗಿಯೊ ಲೊಬೆರಾ ಬದಲಿಗೆ ಕ್ಲಿಫರ್ಡ್ ಮಿರಾಂಡ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿರುವುದು ತಂಡದ ಸಾಧನೆಯ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರಲಿಲ್ಲ. ತಂಡ ಎಂದಿನಂತೆ ಹೈದರಾಬಾದ್ ವಿರುದ್ಧ 4-1 ಗೋಲಿನಿಂದ ಜಯ ಗಳಿಸಿ ತನ್ನ ಪ್ರಭುತ್ವ ಸಾಧಿಸಿತ್ತು.

33 ಅಂಕಗಳನ್ನು ಗಳಿಸಿರುವ ಗೋವಾ, ಸದ್ಯ ಎಟಿಕೆಯೊಂದಿಗೆ ಸಮಬಲ ಸಾಧಿಸಿದೆ. ಬೆಂಗಳೂರು ಎಫ್ ಸಿ ಗಿಂತ ಮೂರು ಅಂಕ ಮೇಲುಗಯ ಸಾಧಿಸಿದೆ. ಗೋಲುಗಳ ಅಂತರದಲ್ಲಿ ಎಟಿಕೆ ಮೇಲುಗೈ ಸಾಧಿಸಿರುವುದರಿಂದ ಅಗ್ರ ಸ್ಥಾನ ತಲುಪಿತು. ಗೋವಾ ಹಾಗೂ ಎಟಿಕೆ ತಂಡಗಳ ಮುಖಾಮುಖಿಯನ್ನು ಗಮನಿಸಿದಾಗ, ಇನ್ನು ಮುಂದೆ ಗೋವಾ ತಂಡ ಯಾವುದೇ ಕಾರಣಕ್ಕೂ ಅಂಕವನ್ನು ಕಳೆದುಕೊಳ್ಳಬಾರದು.

''ಎರಡೂ ತಂಡಗಳಗೂ ಆಡಲು ಎರಡು ರೀತಿಯ ಉದ್ದೇಶವಿದೆ. ಇದು ಅತ್ಯಂತ ಒತ್ತಡದಿಂದ ಕೂಡಿದ ಪಂದ್ಯವಾಗಲಿದೆ. ಇಲ್ಲಿ ತಪ್ಪುಗಳಿಗೆ ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ಇದು ಎರಡೂ ತಂಡಗಳಿಗೂ ಕಠಿಣ ಎನಿಸಲಿರುವ ಪಂದ್ಯವಾಗಿದೆ,'' ಎಂದು ಗೋವಾದ ಮಧ್ಯಂತರ ಕೋಚ್ ಮಿರಾಂಡ ಹೇಳಿದ್ದಾರೆ.

''ನಾವು ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಮುಂದೇನಾಗುತ್ತದೆ ಎಂಬುದನ್ನು ನೋಡಬೇಕು. ಜಯ ಗಳಿಸುವುದು ನಮ್ಮ ಉದ್ದೇಶವಾಗಿದೆ. ಅಗ್ರ ಸ್ಥಾನದಲ್ಲಿರುವ ತಂಡಕ್ಕೆ ಹೆಚ್ಚು ಒತ್ತಡ ಇರುತ್ತದೆ. ಸದ್ಯ ಎಟಿಕೆ ಅಗ್ರ ಸ್ಥಾನದಲ್ಲಿರವುದರಿಂದ ಆ ತಂಡವೇ ಹೆಚ್ಚು ಒತ್ತಡವನ್ನು ಎದುರಿಸಲಿದೆ,'' ಎಂದು ಮಿರಾಂಡ ಹೇಳಿದ್ದಾರೆ.

ಮುಂಬೈ ಸಿಟಿ ತಂಡ ಇತ್ತೀಚಿಗೆ ಆಡಡಿದ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ, ಜೆಮ್ಷೆಡ್ಪುರ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆದ್ದಿರುವುದು ತಂಡದ ಇತ್ತೀಚಿನ ಸಾಧನೆಯಾಗಿದೆ. ಅಮೈನ್ ಚೆರ್ಮಟಿ ಹಾಗೂ ವಿದ್ಯನಾಥನ್ ಸಿಂಗ್ ದ್ವಿತಿಯಾರ್ಧದಲ್ಲಿ ಗಳಿಸಿದ ಗೋಲು ತಂಡಕ್ಕೆ ಯಶಸ್ಸು ತಂದುಕೊಟ್ಟಿತು. ಇದು ಗೋವಾ ವಿರುದ್ಧ ಅಂತ್ಯಂತ ಆತ್ಮವಿಶ್ವಾಸದಲ್ಲಿ ಆಡಲು ತಂಡಕ್ಕೆ ನೆರವಾಗಲಿದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಪಂದ್ಯವೊಂದನ್ನು ಅಡಬೇಕಾಗಿರುವುದರಿಂದ ಗೋವಾ ವಿರುದ್ಧ ಮುಂಬೈಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಮುಂಬೈ 26 ಅಂಕಗಳನ್ನು ಗಳಿಸಿದ್ದರೆ ಚೆನ್ನೈ 22 ಅಂಕಗಳನ್ನು ಗಳಿಸಿದ್ದು ಒಂದು ಪಂದ್ಯ ಹೆಚ್ಚು ಹೊಂದಿದೆ.

''ಇದು ಮುಕ್ತ ಪಂದ್ಯ, ಅವರಿಗೆ ರಕ್ಷಣಾತ್ಮಕ ಫುಟ್ಬಾಲ್ ಆಡಿ ಅಭ್ಯಾಸವಿಲ್ಲ. ಆದರೆ ಅವರದ್ದೆ ಆದ ಶೈಲಿ ಇರುವುದು ಗಮನಾರ್ಹ. ಅವರು ಅಗ್ರ ಸ್ಥಾನಕ್ಕಾಗಿ ಹೋರಾಟ ನಡೆಸಲಿದ್ದಾರೆ, ನಾವು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಹೋರಾಡಲಿದ್ದೇವೆ. ಎರಡೂ ತಂಡಗಳಿಗೂ ಒತ್ತಡವಿದೆ, ಪ್ರೇಕ್ಷಕರಿಗೆ ಇದು ಫುಟ್ಬಾಲ್ ನ ರೋಚಕತೆಯನ್ನಗ ನೀಡಲಿದೆ,'' ಎಂದು ಮುಂಬೈ ತಂಡದ ಕೋಚ್ ಜಾರ್ಜ್ ಕೋಸ್ಟಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, February 11, 2020, 21:14 [IST]
Other articles published on Feb 11, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X