ISL 2021-22 Final Highlights: ಕೇರಳ ಬ್ಲಾಸ್ಟರ್ಸ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಹೈದರಾಬಾದ್ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ 2021-22ನೇ ಆವೃತ್ತಿಯ ಫೈನಲ್ ಸೆಣೆಸಾಟ ಮುಕ್ತಾಯವಾಗಿದ್ದು ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಹೈದರಾಬಾದ್ ಎಫ್‌ಸಿ ಭರ್ಜರಿ ಗೆಲುವು ಸಾಧಿಸಿದ್ದು ಈ ಬಾರಿಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ ಹೈದರಾಬಾದ್ ಎಫ್‌ಸಿ.

ಗೋವಾದ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಫೆನಾಲ್ಟಿ ಮೂಲಕ ಪಂದ್ಯದ ವಿಜೇತರನ್ನು ನಿರ್ಧರಿಸಲಾಯಿತು. ಇದರಲ್ಲಿ ಹೈದರಾಬಾದ್ ಎಫ್‌ಸಿ ತಂಡ 3-1 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಬಾರಿಗೆ ಟ್ರೋಫಿ ಜಯಿಸಿದೆ. ಇತ್ತ ಕೇರಳ ಬ್ಲಾಸ್ಟರ್ಸ್ ತಂಡ ಮೂರನೇ ಬಾರಿ ಫೈನಲ್‌ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದೆ.

ಆರಂಭದಿಂದಲೂ ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಕೂಡ ತಲಾ ಒಂದೊಂದು ಗೋಲು ಗಳಿಸಲು ಯಶಸ್ವಿಯಾಗಿದ್ದವು. ನಂತರ ಹೆಚ್ಚುವರಿ ಅವಧಿಯನ್ನು ನೀಡಿದರು ಕೂಡ ಪಂದ್ಯದ ವಿಜೇತರನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫೆನಾಲ್ಟಿ ಮೂಲಕ ಪಂದ್ಯದ ವಿಜೇರನ್ನು ನಿರ್ಧರಿಸಲಾಗಿದೆ. ಇದರಲ್ಲಿ ಹೈದರಾಬಾದ್ ಎಫ್‌ಸಿ ಮೇಲುಗೈ ಸಾಧಿಸಿದ್ದು ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಇನ್ನು ನಿಗದಿತ ಅವಧಿಯಲ್ಲಿ ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಕುಡ ಗೋಲು ಗಳಿಸಲು ವಿಫಲವಾಗಿತ್ತು. ಆದರೆ ಪಂದ್ಯದ 68ನೇ ನಿಮಿಷದಲ್ಲಿ ರಾಹುಲ್ ಕೆಪಿ ಕೇರಳ ತಂಡದ ಪರವಾಗಿ ಮೊದಲ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಲು ಯಶಸ್ವಿಯಾಗಿದ್ದರು. ಅಂತಿಮ ಹಂತದವರೆಗೂ ಈ ಮುನ್ನಡೆ ಸಾಧಿಸಿದ್ದ ಕೇರಳ ಕೊನೇಯ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟಿತ್ತು. 88ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡದ ಪರವಾಗಿ ಸಾಹಿಲ್ ತಾವೊರ ಗೋಲು ಗಳಿಸುವ ಮೂಲಕ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಫೆನಾಲ್ಟಿ ಮೂಲಕ ವಿಜೇತರನ್ನು ನಿರ್ಧರಿಸಲಾಗಿದೆ.

ಇನ್ನು ಫೆನಾಲ್ಟಿಯಲ್ಲಿ ಕೇರಳ ತಂಡದ ಪರವಾಗಿ ಆಯುಚ್ ಅಧಿಕಾರಿ ಮಾತ್ರವೇ ಗೋಲು ಗಳಿಸಲು ಸಫಲವಾದರು. ಇತ್ತ ಹೈದರಾಬಾದ್ ತಂಡದ ಪರವಾಗಿ ಜಾವೋ ವಿಕ್ಟರ್, ಖಾಸ ಕಮಾರ ಹಾಗೂ ಹಲಿಚರಣ್ ನಜರೆ ಗೋಲು ಗಳಿಸಿ ಗೆಲುವಿಗೆ ಕಾರಣವಾದರು. ಇತ್ತ ಹೈದರಾಬಾದ್ ತಂಡದ ಗೋಲ್‌ಕೀಪ್ ಕೂಡ ಈ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು ಮೂರು 'ಸೇವ್' ಮಾಡಿದ್ದಾರೆ.

ಇನ್ನು ಈ ಬಾರಿಯ ಐಎಸ್‌ಎಲ್ ಟೂರ್ನಿಯನ್ನು ಸಂಪೂರ್ಣವಾಗಿ ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ಫೈನಲ್ ಪಂದ್ಯಕ್ಕೆ ಮಾತ್ರ ಪ್ರೇಕ್ಷಕರಿಗೆ ಅವಕಾಶವನ್ನು ನೀಡಲಾಗಿದೆ. ಹೀಗಾಗಿ ಅಂತಿಮ ಸೆಣೆಸಾಟವನ್ನು ವೀಕ್ಷಿಸಲು ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾರೀ ಪ್ರಮಾಣದಲ್ಲಿ ಪ್ರೇಕ್ಷಕರು ನೆರೆದಿದ್ದರು.

For Quick Alerts
ALLOW NOTIFICATIONS
For Daily Alerts
Story first published: Monday, March 21, 2022, 8:26 [IST]
Other articles published on Mar 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X