ಐಎಸ್‌ಎಲ್ 2020: ಗೆದ್ದ ಚೆನ್ನೈಯಿನ್‌ನ ಪ್ಲೇ ಆಫ್ ಆಸೆ ಜೀವಂತ

By Isl Media

ಚೆನ್ನೈ, ಜನವರಿ 17: ರಫಾಯಿಲ್ ಕ್ರಿವೆಲ್ಲರೊ (57ನೇ ನಿಮಿಷ) ಮತ್ತು ನೆರಿಜುಸ್ ವಾಸ್ಕಿಸ್ (59ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 2-0 ಗೋಲಗಳಿಂದ ಮಣಿಸಿದ ಚೆನ್ನೈಯಿನ್ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಹಂತವನ್ನು ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಕೊನೆಯ ಹಂತದಲ್ಲಿದ್ದ ಚೆನ್ನೈಯಿನ್ ತಂಡ ನೂತನ ಕೋಚ್ ಓವೆನ್ ಆವರ ಆಗಮನದಿಂದ ಹೊಸ ಉತ್ಸಾಹ ಪಡೆದ ತಂಡ ಪ್ರತಿಯೊಂದು ಪಂದ್ಯದಲ್ಲೂ ಯಶಸ್ಸಿನ ಹಾದಿ ತುಳಿಯುತ್ತಿದೆ. ನಾಳೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಬೆಂಗಳೂರು ಜಯ ಗಳಿಸಿದ್ದಲ್ಲಿ ಚೆನ್ನೈಯಿನ್ ಹಾದಿ ಮತ್ತಷ್ಟು ಸುಲಭವಾಗಲಿದೆ.

ಗೋಲಿಲ್ಲದ ಪ್ರಥಮಾರ್ಧ: ಇಲ್ಲಿ ಜಯ ಮುಖ್ಯ, ಡ್ರಾದಿಂದ ಯಾವುದೇ ಪ್ರಯೋಜನವಿಲ್ಲ. ಸಮಬಲ ಸಾಧಿಸಿದರೂ ಇತ್ತಂಡಗಳಿಗೆ ಹಿನ್ನಡೆಯೇ ಸರಿ. ಇದನ್ನು ಗಮನದಲ್ಲಿರಿಸಿಕೊಂಡ ಇತ್ತಂಡಗಳು ಆಕ್ರಮಣಕಾರಿ ಆಟ ಆಡಿದರೂ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ನಾರ್ಥ್ ಈಸ್ಟ್ ಯುನೈಟೆಡ್ ಪರ ಅವಕಾಶ ಉತ್ತಮವಾಗಿದ್ದರೂ ತಂಡದ ಗೋಲು ಗಳಿಸುವ ಸಮಸ್ಯೆ ಎಲ್ಲ ಕಡೆಯಂತೆ ಇಲ್ಲಿಯೂ ಕಂಡುಬಂತು. ಅವಕಾಶಗಳನ್ನು ಕೈ ಚೆಲ್ಲಿದ ನಾರ್ಥ್ ಈಸ್ಟ್ ನ ನಡೆ ಅಂತಿಮ ನಾಲ್ಕರ ಹಂತವನ್ನು ಕೈ ಚೆಲ್ಲಿದಂತೆ ಕಂಡುಬಂತು. ನಿರಿಜುಸ್ ವಾಲ್ಸ್ಕಿಸ್ ಕೂಡ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಇದರೊಂದಿಗೆ ಮೊದಲ 45 ನಿಮಿಷಗಳ ಆಟ 0-0 ಯಲ್ಲಿ ಅಂತ್ಯಗೊಂಡಿತು.

ಪ್ರಮುಖ ಪಂದ್ಯ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಂತಿಮ ನಾಲ್ಕರ ಹಂತ ತಲಪುವ ಬಗ್ಗೆ ಹೋರಾಟ ತೀವ್ರಗೊಂಡಿದ್ದು, ಆ ಹಂತ ತಲುಪಲು ಕಷ್ಟಸಾದ್ಯದ ಸ್ಥಿತಿಯಲ್ಲಿರುವ ಚೆನ್ನೈಯಿನ್ ಹಾಗೂ ನಾರ್ಥ್ ಈಸ್ಟ್ ತಂಡಗಳು ಜವಹರನಾಲ್ ನೆಹರು ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಈ ತಂಡಗಳ ನಡುವಿನ ಅಂಕಗಳ ಅಂತರ ಮಾತ್ರ ಒಂದು.

ಹೈದರಾಬಾದ್ ಎಫ್ ಸಿ ವಿರುದ್ಧ ಕಂಡ ಯಶಸ್ಸನ್ನೇ ಮುಂದಿಟ್ಟುಕೊಂಡು, ಅಂತಿಮ ನಾಲ್ಕರ ಹಂತಕ್ಕೆ ತಲುಪಲು ತೀವ್ರ ಪೈಪೋಟಿ ನೀಡುತ್ತಿರುವ ತಂಡದ ವಿರುದ್ಧ ಜಯ ಗಳಿಸುವ ಗುರಿ ಹೊಂದಿದೆ. ಆತಿಥೇಯ ತಂಡ ಇಂದು ಗೆದ್ದರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಲಿದೆ, ಐದನೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡಕ್ಕಿಂತ ಒಂದು ಅಂಕ ಹಿಂದೆ ಬೀಳಲಿದೆ. ನೂತನ ಕೋಚ್ ಓವೆನ್ ಕೊಯ್ಲ್ ಅವರ ಆಗಮನದ ನಂತರ ಚೆನ್ನೈಯಿನ್ ತಂಡ ಆಕ್ರಮಣಕಾರಿ ಆಟ ಆರಂಭಿಸಿದ್ದು, ನೆರಿಜುಸ್ ವಾಲ್ಸ್ಕಿ, ಚಾಂಗ್ಟೆ ಹಾಗೂ ಕ್ರಿವೆಲ್ಲರೋ ಉತ್ತಮ ರೀತಿಯಲ್ಲಿ ಆಡಲಾರಂಭಿಸಿದ್ದಾರೆ.

ತಂಡದ ಪ್ರಮುಖ ದೌರ್ಬಲ್ಯವೆಂದರೆ ಡಿಫೆನ್ಸ್ ವಿಭಾಗದ ವೈಫಲ್ಯ. ತಂಡ ಈಗಾಗಲೇ ಎದುರಾಳಿ ತಂಡಕ್ಕೆ 19 ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿತ್ತು. ನಾರ್ತ್ ಈಸ್ಟ್ ಯುನೈಟೆಡ್ ತಂಡ ಅವಕಾಶ ಸಿಕ್ಕರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ತಂಡ ಗಳಿಸಿರುವುದು ಕೇವಲ 11 ಅಂಕಗಳು. ಫೆಡ್ರಿಕೊ ಗಲ್ಲೆಗೋ, ಮಾರ್ಟಿನ್ ಚಾವೆಸ್ ಮತ್ತು ರೆಡೀಮ್ ತ್ಲಾಂಗ್ ಉತ್ತಮವಾಗಿ ಆಡಬೇಕಾಗಿದೆ. ಉತ್ತಮವಾಗಿ ಆರಂಭ ಕಂಡಿದ್ದ ನಾರ್ಥ್ ಈಸ್ಟ್ ಈಗ ಸತತ ಆರು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಯಿತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, January 17, 2020, 13:50 [IST]
Other articles published on Jan 17, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X