ಐಎಸ್‌ಎಲ್ 2020: ಮನೆಯಂಗಣದಲ್ಲಿ ಮಿಂಚಿ ಅಗ್ರಸ್ಥಾನಕ್ಕೇರಿದ ಗೋವಾ

By Isl Media

ಗೋವಾ, ಫೆಬ್ರವರಿ 5: ಹ್ಯುಗೋ ಬೌಮಾಸ್ (19 ಮತ್ತು 50ನೇ ನಿಮಿಷ), ಫೆರಾನ್ ಕೊರೊಮಿನಾಸ್ ( 68 ಮತ್ತು 87ನೇ ನಿಮಿಷ) ಗಳಿಸಿದ ಡಬಲ್ಸ್ ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್ ಸಿ ತಂಡವನ್ನು 4-1 ಗೋಲುಗಳ ಅಂತರದಲ್ಲಿ ಮಣಿಸಿದ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು. ಹೈದರಾಬಾದ್ ಪರ ಮಾರ್ಸೆಲೋ ಪೆರೆರಾ (64ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ದ್ವಿತಿಯಾರ್ಧದಲ್ಲಿ ಮಿಂಚಿನಾಟ
ಪ್ರಥಮಾರ್ಧಲ್ಲಿ ಮೇಲುಗೈ ಸಾಧಿಸಿದ್ದ ಗೋವಾ ದ್ವಿತಿಯಾರ್ಧದಲ್ಲೂ ತನ್ನ ಪ್ರಭುತ್ವವನ್ನು ಸಾಧಿಸಿತು. 50ನೇ ನಿಮಿಷದಲ್ಲಿ ಹ್ಯುಗೋ ಬೌಮಾಸ್ ಗಳಿಸಿದ ಗೋಲು ಆತಿಥೇಯ ತಂಡಕ್ಕರ 2-0 ಮುನ್ನಡೆ ಕಲ್ಪಿಸಿತು. ಆದರೆ ಈ ಬಾರಿ ಹೈದರಾಬಾದ್ ಕೂಡ ದಿಟ್ಟ ಸವಾಲನ್ನೊಡ್ಡಿತು. ಪರಿಣಾಮ 54ನೇ ನಿಮಿಷದಲ್ಲಿ ಮಾರ್ಸೆಲೋ ಪೆರೆರಾ ಗಳಿಸಿದ ಗೋಲಿನಿಂದ ಹೈದರಾಬಾದ್ ತನ್ನ ಗೋಲಿನ ಖಾತೆ ತೆರೆಯಿತು. ಗೋವಾದ ಗೋಲ್ ಮಿಷಿನ್ ಫೆರಾನ್ ಕೊರೊಮಿನಾಸ್ (68 ಮತ್ತು 87ನೇ ನಿಮಿಷ) ಗಳಿಸಿದ ಗೋಲು ಗೋವಾ ತಂಡಕ್ಕೆ 4-1ರ ಮುನ್ನಡೆ ನೀಡಿತು.

ಗೋವಾ ಮೇಲುಗೈ
19ನೇ ನಿಮಿಷದಲ್ಲಿ ಹ್ಯೂಗೋ ಬೌಮಾಸ್ ಗಳಿಸಿದ ಗೋಲಿನ ನೆರವಿನಿಂದ ಗೋವಾ ತಂಡ ಹೈದರಾಬಾದ್ ವಿರುದ್ಧ ನಿರೀಕ್ಷೆಯಂತೆ ಮೇಲುಗೈ ಸಾಧಿಸಿತು. ಹೈದರಾಬಾದ್ ಉತ್ತಮ ರೀತಿಯಲ್ಲೇ ಆ ನಂತರ ಪೈಪೋಟಿ ನೀಡಿದರೂ ಗೋಲು ದಾಖಲಾಗಲಿಲ್ಲ. 44ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್ ಗೆ ಸುಲಭವಾಗಿ ಗೋಲು ಗಳಿಸುವ ಅವಕಾಶ ಇದ್ದಿತ್ತು. ಆದರೆ ಅದನ್ನು ಗೋಲಾಗಿಸುವಲ್ಲಿ ವಿಫಲರಾದರು. ಹೈದರಾಬಾದ್ ಕೊನೆಯ ಕ್ಷಣದಲ್ಲಿ ದಿಟ್ಟ ಹೋರಾಟ ನೀಡಿದರೂ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು, ಗೋವಾ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು.

ಕಾಡುವ ಲೊಬೇರಾ, ಆಡುವ ಗೋವಾ
ಗೋವಾ ತಂಡವನ್ನು ಇದುವರೆಗೂ ಯಶಸ್ವಿಯಾಗಿ ಮುನ್ನಡೆಸಿ ಇದ್ದಕ್ಕಿದ್ದಂತೆ ಆಡಳಿತ ಮಂಡಳಿಯ ತೀರ್ಮಾನದ ಮೇರೆಗೆ ತೊರೆದು ಹೋದ ಕೋಚ್ ಸರ್ಗಿಯೋ ಲೊಬೆರಾ ಅವರ ಅನುಪಸ್ಥಿತಿಯಲ್ಲಿ ಗೋವಾ ತಂಡ ಹೈದರಾಬಾದ್ ಎಫ್ಸಿ ವಿರುದ್ಧ ಮತ್ತೊಂದು ಜಯ ಗಳಿಸಿ ಅತ್ರ ಸ್ಥಾನಕ್ಕೇರುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ನೇರವಾಗಿ ಗ್ರೂಪ್ ಹಂತಕ್ಕೆ ತೇರ್ಗಡೆಯಾಗುವ ಉದ್ದೇಶದಿಂದ ಗೋವಾ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಹಂಬಲದಲ್ಲಿದೆ.

ಮಧ್ಯಂತರ ಕ:ಚ್ ಕ್ಲಿಫೋರ್ಡ್ ಮಿರಾಂಡ ಅವರು ಆಟಗಾರರೊಂದಿಗೆ ಉತ್ತಮ ಸಂಪರ್ಕದಲ್ಲಿದ್ದ ಕಾರಣ ಮತ್ತು ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕಾರಣ ಹೊಸ ಜವಾಬ್ದಾರಿ ಅವರಿಗೆ ಕಷ್ಟವಾಗದು. 15 ಪಂದ್ಯಗಳನ್ನು ಆಡಿರುವ ಗೋವಾ ಒಟ್ಟು 32 ಗೋಲುಗಳನ್ನು ಗಳಿಸಿದೆ. ಮಿಡ್ ಫೀಲ್ಡರ್ ಎಡು ಬೇಡಿಯಾ ನಾಲ್ಕು ಬಾರಿ ಬುಕ್ ಆದ ಕಾರಣ ಅಮಾನತುಕೊಂಡಿದ್ದು, ಅವರ ಸ್ಥಾನದಲ್ಲಿ ಅಹಮದ್ ಜೊಹುವಾ ತಂಡಕ್ಕೆ ಮರಳಿದ್ದಾರೆ.

15 ಪಂದ್ಯಗಳನ್ನಾಡಿ ಕೇವಲ 6 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡಕ್ಕೆ ಹೀನಾಯ ದಾಖಲೆಯಿಂದ ತಪ್ಪಿಸಿಕೊಳ್ಳಲು ಇನ್ನೂ ನಾಲ್ಕು ಅಂಕಗಳ ಅಗತ್ಯ ಇದೆ. ಇದುವರೆಗೂ ಎದುರಾಳಿ ತಂಡಗಳಿಗೆ 33 ಗೋಲುಗಳನ್ನು ನೀಡಲು ಅವಕಾಶ ಕಲ್ಪಿಸಿರುವ ಹೈದಾರಾಬಾದ್ ತಂಡಕ್ಕೆ ಈಗ ತನ್ನ ಘನತೆಯನ್ನು ಕಾಯ್ದುಕೊಳ್ಳಬೇಕಾಗಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, February 6, 2020, 6:16 [IST]
Other articles published on Feb 6, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X