ಐಎಸ್‌ಎಲ್ 2020: ಪ್ಲೇಆಫ್ ಸ್ಥಾನ ಮತ್ತಷ್ಟು ಭದ್ರಪಡಿಸಿಕೊಂಡ ಮುಂಬೈ

By Isl Media

ಮುಂಬೈ, ಫೆಬ್ರವರಿ 7: ಅಮೈಮ್ ಚೆರ್ಮಿಟಿ (60ನೇ ನಿಮಿಷ) ಹಾಗೂ ವಿದ್ಯನಾಥನ್ ಸಿಂಗ್ (90ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ನೊಯ್ ಅಕೋಸ್ಟಾ (7ನೇ ನಿಮಿಷ) ಗಳಿಸಿದ ಗೋಲು ಟಾಟಾ ಪಡೆಯ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಸೋಲಿನೊಂದಿಗೆ ಟಾಟಾ ಪಡೆ ಟೂರನಿಯಿಂದ ಹೊರತಳ್ಳಲ್ಪಟ್ಟಿತು.

ಸಮಬಲ ಸಾಧಿಸಿದ ಮುಂಬೈ
ಪೆನಾಲ್ಟಿ ಅವಕಾಶದಿಂದ ಆರಂಭದಲ್ಲೇ ಮುನ್ನಡೆ ಕಂಡ ಜೆಮ್ಷೆಡ್ಪುರದ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 60ನೇ ನಿಮಿಷದಲ್ಲಿ ಅಮೈನ್ ಚೆರ್ಮಿಟಿ ಗಳಿಸಿದ ಗೋಲು ಪಂದ್ಯವನ್ನು 1-1 ರಲ್ಲಿ ಸಮಬಲಗೊಳಿಸಿತು, ಈ ಫಲಿತಾಂಶ ಇತ್ತಂಡಗಳಿಗೂ ತೃಪ್ತಿ ತರುವಂಥದ್ದಲ್ಲ. ಮುಂಬೈ ನಿಜವಾಗಿಯೂ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿ ಅವಕಾಶಗಳನ್ನು ನಿರ್ಮಿಸಿತ್ತು, ಆದರೆ ಗೋಲು ಗಳಿಸುವಲ್ಲಿ ವಿಫಲವಾಗಿತ್ತು.

ಪ್ರಮಾದಕ್ಕೆ ಬೆಲೆ ತೆತ್ತ ಮುಂಬೈ
ಪಂದ್ಯ ಆರಂಭಗೊಂಡ 7ನೇ ನಿಮಿಷದಲ್ಲೇ ಮುಂಬೈ ತಂಡ ಜೆಮ್ಷೆಡ್ಪುರದ ಮುನ್ನಡೆಗೆ ಅವಕಾಶ ಮಾಡಿಕೊಟ್ಟಿತು. ಮುಂಬೈಯ ಸೌರವ್ ದಾಸ್ ಅವರು ಗೋಲ್ ಬಾಕ್ಸ್ ನಲ್ಲಿ ಫಾರೂಕ್ ಚೌಧರಿ ಅವರನ್ನು ಉದ್ದೇಶಪೂರ್ವಕವಾಗಿ ನೆಲಕ್ಕುರುಳಿಸಿದ ಕಾರಣ ರೆಫರಿ ತಡಮಾಡದೆ ಪೆನಾಲ್ಟಿ ಘೋಷಿಸಿದರು. ನೊಯ್ ಅಕೋಸ್ಟಾ ಅವರು ಯಾವುದೇ ಪ್ರಮಾದ ಎಸಗದೆ ಮುಂಬೈ ಗೋಲ್ ಕೀಪರ್ ಅರ್ಮಿಂದರ್ ಸಿಂಗ್ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಮನೆಯಂಗಣದಲ್ಲಿ ಮುಂಬೈಗೆ ಆರಂಭದಲ್ಲೇ ಆಘಾತ. ಆ ನಂತರ ಮುಂಬೈಗೆ ಎರಡು ಉತ್ತಮ ಅವಕಾಶ ಸಿಕ್ಕಿದರೂ ಗೋಲು ಗಳಿಸುವಲ್ಲಿ ವಿಫಲವಾಯಿತು.

ಜಯವೊಂದೇ ಗುರಿ
ಮುಂಬೈ ಫುಟ್ಬಾಲ್ ಅರೇನಾದಲ್ಲಿ ಗುರುವಾರ ನಡೆಯಲಿರುವ ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ನಾಲ್ಕನೇ ಸ್ಥಾನದಲ್ಲಿ ತನ್ನ ಇರುವಿಕೆಯನ್ನು ಭದ್ರಪಡಿಸಿಕೊಳ್ಳುವ ಆಶಯದೊಂದಿಗೆ ಅಂಗಣಕ್ಕಿಳಿಯಿತು. ಚೆನ್ನೈಯಿನ್ ಎಫ್ ಸಿ ನಾಲ್ಕನೇ ಸ್ಥಾನಕ್ಕೆ ದಿಟ್ಟ ಸನಾಲು ನೀಡಿತ್ತಿರುವ ಕಾರಣ, ಇಲ್ಲಿ ಮುಂಬೈಗೆ ಜಯದ ಅಗತ್ಯ ಇದೆ.

ಮುಂಬೈ ತಂಡ ಇತ್ತೀಚಿನ ದಿನಗಳಲ್ಲಿ ಮನೆಯಂಗಣಲ್ಲಿ ಉತ್ತಮ ಪ್ರದರ್ಶನ ತೋರಿದೆ. ಮನೆಯಂಗಣದಲ್ಲಿ ಈ ಹಿಂದೆ ನಡೆದ ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಗೋಲನ್ನು ನೀಡದೆ ಜಯ ಗಳಿಸಿತ್ತು. ಮುಂಬೈ ತಂಡದ ಡಿಫೆನ್ಸ್ ವಿಭಾಗ ಎಷ್ಟು ಉತ್ತಮ ರೀತಿಯಲ್ಲಿ ಚೇತರಿಸಿದೆ ಎಂದರೆ ಕಳೆದ ಮೂರು ಪಂದ್ಯಗಳಲ್ಲಿ ತಂಡ ನೀಡಿರುವುದು ಕೇವಲ ಒಂದು ಗೋಲು. ತಂಡದ ಯಶಸ್ಸಿನಲ್ಲಿ ರಾಲಿನ್ ಬೋರ್ಗಸ್ ಉತ್ತಮ ಪಾತ್ರವಹಿಸಿದ್ದಾರೆ. ಆದರೆ ಗೇಮ್ ಚೇಂಜರ್ ಎಂದೇ ಖ್ಯಾತಿ ಪಡೆದಿರುವ ಡಿಗೋ ಕಾರ್ಲೋಸ್ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಜಯದ ಗೋಲು ಗಳಿಸಿದ್ದರು.

ಜೆಮ್ಷೆಡ್ಪುರ ಎಫ್ ಸಿ ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವುದು ಗನಾರ್ಹ. ಕಳೆದ ಮೂರು ಪಂದ್ಯಗಳಲ್ಲಿ ಜೆಮ್ಷೆಡ್ಪುರ ಜಯ ಗಳಿಸಿರಲಿಲ್ಲ. ಜೆಮ್ಷೆಡ್ಪುರ ಪ್ಲೇ ಆಫ್ ನಿಂದ ಇನ್ನೂ ಸಂಪೂರ್ಣವಾಗಿ ನಿರ್ಗಮಿಸಿಲ್ಲ. ಸೋಲು ಗೆಲುವಿನ ಸಮ್ಮಿಲನದೊಂದಿಗೆ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮುಂಬೈ ವಿರುದ್ಧ ಇಲ್ಲಿ ಜಯ ಗಳಿಸಿದರೆ ನಾಲ್ಕನೇ ಸ್ಥಾನಕ್ಕೆ ಕೇವನ ನಾಲ್ಕು ಅಂಕಗಳಿಂದ ಹಿಂದೆ ಬೀಳಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Friday, February 7, 2020, 7:17 [IST]
Other articles published on Feb 7, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X