ಐಎಸ್‌ಎಲ್‌: ಗೋವಾ ಎದುರಾಳಿ ಎಟಿಕೆ, ಆಕ್ರಮಣಕಾರಿ ತಂಡಗಳ ಮುಖಾಮುಖಿ

By Isl Media

ಗೋವಾ, ಡಿಸೆಂಬರ್ 14: ಹೀರೋ ಇಂಡಿಯನ್ ಲೀಗ್ ನ ಎರಡು ಆಕ್ರಮಣಕಾರಿ ತಂಡಗಳು ಪರಸ್ಪರ ಮುಖಾಮುಖಿಯಾದರೆ ಏನಾಗಬಹುದು? ಉತ್ತಮ ಹೋರಾಟ, ನಾಟಕೀಯ ಬೆಳವಣಿಗೆ ಮತ್ತು ಗೋಲು ದಾಖಲಾಗುವುದು ಖಚಿತ. ಶನಿವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಎಫ್ ಸಿ ಗೋವಾ ಹಾಗೂ ಎಟಿಕೆ ತಂಡಗಳು ಮುಖಾಮುಖಿಯಾದಾಗ ಕುತೂಹಲ ಮನೆ ಮಾಡುವುದು ಸಹಜ.

ಐಎಸ್‌ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ

ಆತಿಥೇಯ ಗೋವಾ ತಂಡ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದೆ, ಆದರೆ ಈ ಋತುವಿನಲ್ಲಿ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಡಿಗೆ. ಗಾಯದ ಸಮಸ್ಯೆ ಹಾಗೂ ಅಮಾನತು ಇದಕ್ಕೆ ಮುಖ್ಯ ಕಾರಣವಾಗಿತ್ತು. ಮೂರು ಬಾರಿ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿರುವ ತಂಡ ಸೋಲಿನಿಂದ ಪಾರಾಗಿತ್ತು.

ಆಡಿರುವ ಏಳು ಪಂದ್ಯಗಳಲ್ಲಿ 12 ಅಂಕಗಳನ್ನು ಗಳಿಸಿರುವ ಕಾಡೆತ್ತು ಖ್ಯಾತಿಯ ಗೋವಾ ಈಗ ಮೂರನೇ ಸ್ಥಾನದಲ್ಲಿದೆ. ಎದುರಾಳಿ ಎಟಿಕೆ ತಂಡ ಈ ಬಾರಿ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿ ಕಳೆದ ಆರು ಪಂದ್ಯಗಳಲ್ಲಿ ಅಜೇಯವಾಗಿದೆ. ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋತ ಬಳಿಕ ಎಟಿಕೆ ಮತ್ತೆ ಸೋಲು ಅನುಭವಿಸಿರಲಿಲ್ಲ. 14 ಅಂಕಗಳನ್ನು ಗಳಿಸಿರುವ ಕೋಲ್ಕೊತಾ ಮೂಲದ ತಂಡ ಅಗ್ರ ಸ್ಥಾನದಲ್ಲಿದೆ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಎಟಿಕೆ 15 ಗೋಲುಗಳನ್ನು ಗಳಿಸಿದರೆ, ಗೋವಾ ಇದುವರೆಗೂ 13 ಗೋಲುಗಳನ್ನು ಗಳಿಸಿದೆ.

ಫರಾನ್ ಕೊರೊಮಿನಾಸ್ ಅವರ ಆಗಮನದಿಂದ ಗೋವಾದ ಆಕ್ರಮಣಕಾರಿ ಆಟಕ್ಕೆ ಮತ್ತೆ ಶಕ್ತಿ ಲಭಿಸಿದೆ. ಬ್ರೆನ್ದಾನ್ ಫೆರ್ನಾಂಡೀಸ್ ಉತ್ತಮವಾಗಿ ಆಡಬೇಕಾಗಿರುವುದು ಸೆರ್ಗಿಯೋ ಲೊಬೆರಾ ಪಡೆಗೆ ಅಗತ್ಯವಾಗಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೋವಾ 1-0 ಗೋಲಿನಿಂದ ಜಯ ಗಳಿಸುವಲ್ಲಿ ಫೆರ್ನಾಂಡೀಸ್ ಅವರ ಪಾತ್ರ ಪ್ರಮುಖವಾಗಿತ್ತು. ಮನ್ವೇರ್ ಸಿಂಗ್ ಅವರಿಗೆ ಪಾಸ್ ನೀಡುವ ಮೂಲಕ ಸಿಂಗ್ ಗಳಿಸಿದ ಗೋಲಿನಿಂದ ಗೋವಾ ಗೆದ್ದಿತ್ತು.

ಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ, ದಿನಾಂಕ, ಸಮಯ

''ನಾವು ಗೋವಾ ತಂಡದ ವಿರುದ್ಧ ಆಡುತ್ತಿದ್ದೇವೆಯೇ ವಿನಹ ಫರಾನ್ ಕೊರೊಮಿನಾಸ್ ವಿರುದ್ಧ ಆಡುತ್ತಿಲ್ಲ. ಕೊರೊಮಿನಾಸ್ ಒಬ್ಬ ಉತ್ತಮ ಆಟಗಾರ ಎಂಬುದು ನನಗೆ ಚೆನ್ನಾಗಿ ಗೊತ್ತು. ಅವರ ಬಗ್ಗೆ ನಾವು ವಿಶೇಷವಾದ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ. ಯಾವುದೇ ತಂಡ ಆಗಿರಲಿ ನಾವು ಒಬ್ಬ ಆಟಗಾರನನ್ನು ಗಮನದಲ್ಲಿರಿಸಿಕೊಳ್ಳುವುದಿಲ್ಲ. ಫುಟ್ಬಾಲ್ ಒಂದು ಸಂಘಟಿತ ಆಟ, ಅದೊಂದು ವೈಯಕ್ತಿಕ ಆಟವಲ್ಲ,'' ಎಂದು ಎಟಿಕೆ ಕೋಚ್ ಅಂಟೋನಿಯೋ ಹಬ್ಬಾಸ್ ಹೇಳಿದ್ದಾರೆ.

ರಾಯ್ ಕೃಷ್ಣ ಅವರ ನೇತೃತ್ವದ ಎಟಿಕೆ ದಾಳಿ ವಿಭಾಗ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ರಾಯ್ ಕೃಷ್ಣ ಈಗಾಗಲೇ ಆರು ಗೋಲುಗಳನ್ನು ಗಳಿಸಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಅದೇ ರೀತಿ ಡೇವಿಡ್ ಮಿಲ್ಲರ್ಸ್ ಕೂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಬಲ್ಲ ಆಟಗಾರ. ಜವೀರ್ ಹೆರ್ನಾಂಡೀಸ್, ಎಡು ಗಾರ್ಸಿಯಾ ಗೋವಾ ತಂಡವನ್ನು ಕಟ್ಟಿಹಾಬಲ್ಲ ಆಟಗಾರರು.

ಗೋವಾ ತಂಡ ಚೆಂಡನ್ನು ಹೆಚ್ಚು ಸಮಯ ನಿಯಂತ್ರಣದಲ್ಲಿರಿಸಿಕೊಳ್ಳುತ್ತ್ತದೆ, ಆದರೆ ಎಟಿಕೆ ಈ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಸಿಕ್ಕ ಅವಕಾಶದಲ್ಲೇ ದಾಳಿ ಮಾಡುವ ಸಾಮರ್ಥ್ಯವನ್ನು ಅಂಟೋನಿಯೋ ಹಬ್ಬಾಸ್ ಪಡೆ ಹೊಂದಿದೆ. ಕೃಷ್ಣ ಹಾಗೂ ವಿಲಿಯಮ್ಸ್ ಅವರನ್ನು ನಿಯಂತ್ರಿಸುವಲ್ಲಿ ವಿಫಲವಾದ ನಾರ್ತ್ ಈಸ್ಟ್ ಯುನೈಟೆಡ್ 3-0 ಅಂತರದಲ್ಲಿ ಸೋಲನುಭವಿಸಿತ್ತು.

''ನನ್ನ ಪ್ರಕಾರ ಗೋಲನ್ನು ಕಾಯ್ದುಕೊಳ್ಳಬೇಕು, ನಿಮ್ಮಿಂದ ಉತ್ತಮವಾದ ಪ್ರದರ್ಶನ ಅಗತ್ಯ. ನಮ್ಮಲ್ಲಿ ಉತ್ತಮ ಸ್ಟ್ರೈಕರ್ ಗಳು ಇದ್ದಾರೆ.ನಾವು ಕಠಿಣ ಪರಿಶ್ರಮವಹಿಸಿ ಆಡಿ, ಪ್ರತಿಯೊಂದು ಪಂದ್ಯದ ಕಡೆಗೆ ಗಮನ ಹರಿಸಬೇಕು. ಕೇವಲ ಎಟಿಕೆ ಮಾತ್ರವಲ್ಲ,'' ಗೋವಾ ಕೋಚ್ ಸೆರ್ಗಿಯೋ ಲೊಬೆರಾ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, December 14, 2019, 7:07 [IST]
Other articles published on Dec 14, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X