ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup: ರೊನಾಲ್ಡೋ ಇಲ್ಲದೆಯೇ ಸ್ವಿಟ್ಜರ್ಲೆಂಡ್ ವಿರುದ್ಧ 6-1 ಗೋಲುಗಳ ಭರ್ಜರಿ ಜಯ ಸಾಧಿಸಿದ ಪೋರ್ಚುಗಲ್

Portugal Beat Switzerland 6-1 Enter To The FIFA World Cup Quarter-Finals

ಫಿಫಾ ವಿಶ್ವಕಪ್ 2022ರ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೊನ್ಕಾಲೊ ರಾಮೋಸ್ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಪೋರ್ಚುಗಲ್ ತಂಡ ಸ್ವಿಟ್ಜರ್ಲೆಂಡ್ ವಿರುದ್ಧ 6-1 ಗೋಲುಗಳ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಆಘಾತಕಾರಿ ನಿರ್ಧಾರದಲ್ಲಿ ಕ್ರಿಶ್ಚಿಯಾನೊ ರೊನಾಲ್ಡೋ ಅವರನ್ನು ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕೈಬಿಡಲಾಯಿತು. ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಗೊನ್ಕಾಲೊ ರಾಮೋಸ್ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ತಂಡದ ಆಯ್ಕೆಗೆ ನ್ಯಾಯ ಒದಗಿಸಿದರು.

ಗೊನ್ಕಾಲೊ ರಾಮೋಸ್ ಜೊತೆಗೆ ಪೆಪೆ, ರಾಫೆಲ್ ಗೆರೆರೊ ಮತ್ತು ರಾಫೆಲ್ ಲಿಯೊ ಕೂಡ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೋಲುಗಳನ್ನು ಗಳಿಸುವ ಮೂಲಕ ದಾಖಲೆಯ ಜಯದೊಂದಿಗೆ ಪೋರ್ಚುಗಲ್ ಮುಂದಿನ ಹಂತಕ್ಕೆ ಪ್ರವೇಶಿಸಲು ಕಾರಣವಾದರು.

ಐಸಿಸಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿ; ಶಾಹೀನ್ ಅಫ್ರಿದಿ ಸೇರಿ 3 ಜನರ ನಾಮನಿರ್ದೇಶನಐಸಿಸಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿ; ಶಾಹೀನ್ ಅಫ್ರಿದಿ ಸೇರಿ 3 ಜನರ ನಾಮನಿರ್ದೇಶನ

21 ವರ್ಷ ವಯಸ್ಸಿನ ರಾಮೋಸ್ ಹ್ಯಾಟ್ರಿಕ್ ಸಾಧನೆ ಮಾಡುವ ನಾಕೌಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 1958 ರಲ್ಲಿ ಪೀಲೆ ವಿಶ್ವಕಪ್‌ ನಾಕೌಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

Portugal Beat Switzerland 6-1 Enter To The FIFA World Cup Quarter-Finals

ದ್ವಿತೀಯಾರ್ಧದಲ್ಲಿ ಪೋರ್ಚುಗಲ್ ಮಿಂಚು

ಐದು ವಿಶ್ವಕಪ್‌ಗಳಲ್ಲಿ ಗೋಲು ಹೊಡೆದಿರುವ ಏಕೈಕ ಫುಟ್ಬಾಲ್ ಆಟಗಾರ, ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನೇ ತರಬೇತುದಾರ ಫರ್ನಾಂಡೋ ಸ್ಯಾಂಟೋಸ್ ಪ್ರಮುಖ ಪಂದ್ಯದಿಂದ ಕೈಬಿಟ್ಟರು. ಕೊನೆಯ ಗುಂಪಿನ ಹಂತದ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಕೊರಿಯಾ ಆಟಗಾರನ ಜೊತೆ ಜಗಳ ಆಡಿಕೊಂಡಿದ್ದು ಸ್ಯಾಂಟೋಸ್ ಕೋಪಕ್ಕೆ ಕಾರಣವಾಗಿತ್ತು.

ಹಿಂದಿನ ಮೂರು ಪಂದ್ಯಗಳಲ್ಲಿ 33 ನಿಮಿಷಗಳ ಕಾಲ ಆಡಿದ್ದ ಸ್ಟ್ರೈಕರ್ ರಾಮೋಸ್‌ಗೆ ರೊನಾಲ್ಡೊ ಬದಲಿಗೆ ಅವಕಾಶ ನೀಡಲಾಯಿತು. ರೊನಾಲ್ಡೊ ಅಂತಹ ಪ್ರಮುಖ ಆಟಗಾರನನ್ನೇ ಕೂರಿಸಿ ಹೊಸ ಆಟಗಾರನಿಗೆ ಅವಕಾಶ ಕೊಟ್ಟದ್ದು ಹಲವರಿಗೆ ಆಘಾತಕಾರಿಯಾಗಿತ್ತು. ಆದರೆ, ಪಂದ್ಯದ 17ನೇ ನಿಮಿಷದಲ್ಲೇ ಮೊದಲ ಗೋಲು ಬಾರಿಸಿದ ರಾಮೋಸ್ ತರಬೇತುದಾರರ ಆಯ್ಕೆ ಸರಿ ಇದೆ ಎನ್ನುವ ಸಂದೇಶ ನೀಡಿದರು.

ಪೆಪೆ 33ನೇ ನಿಮಿಷದಲ್ಲಿ ಗೋಲು ಬಾರಿಸಿ 2-0 ಮುನ್ನಡೆ ಸಾಧಿಸಲು ಕಾರಣವಾದರು. ಮೊದಲಾರ್ಧದ ಅಂತ್ಯಕ್ಕೆ ಪೋರ್ಚುಗಲ್ 2-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದ ಆರಂಭದಲ್ಲೇ ಪೋರ್ಚುಗಲ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು.

ರಾಮೋಸ್ 51ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಬಾರಿಸುವ ಮೂಲಕ ಅಂತರವನ್ನು 3-0 ಹೆಚ್ಚಿಸಿದರು. ಅದಾದ 4 ನಿಮಿಷದ ಅಂತರದಲ್ಲೇ ರಾಫೆಲ್ ಗೆರೆರೊ ಕೂಡ ಗೋಲು ಬಾರಿಸುವ ಮೂಲಕ 4-0 ಮುನ್ನಡೆ ಪಡೆದುಕೊಂಡಿತು. 58ನೇ ನಿಮಿಷದಲ್ಲಿ ಸ್ವಿರ್ಟರ್ಲೆಂಡ್‌ನ ಮಾನುಯಲ್ ಅಕಂಜಿ ಮೊದಲನೇ ಗೋಲು ಬಾರಿಸಿ ಅಂತರವನ್ನು 1-4 ಕ್ಕೆ ಕಡಿಮೆ ಮಾಡಿದರು.

ರಾಮೋಸ್ 67 ನಿಮಿಷದಲ್ಲಿ ತಮ್ಮ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಅಂತರವನ್ನು 5-1 ಕ್ಕೆ ಹೆಚ್ಚಿಸಿದರು. ರಫೇಲ್ ಲಿಯೋ ಆಟದ ಹೆಚ್ಚುವರಿ ಸಮಯದಲ್ಲಿ (90+2) ನಿಮಿಷದಲ್ಲಿ ಗೋಲು ಬಾರಿಸಿ ಪೋರ್ಚುಗಲ್‌ ದಾಖಲೆಯ ಜಯ ಸಾಧಿಸಲು ಕಾರಣವಾದರು.

Story first published: Wednesday, December 7, 2022, 8:34 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X