ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫರ್ನಾಂಡೋ ಹೆಗಲಿಗೆ ಸ್ಪೇನ್ ರಾಷ್ಟ್ರೀಯ ಫುಟ್ಬಾಲ್ ತಂಡದ ಜವಾಬ್ದಾರಿ

Spain sack manager Julen Lopetegui as Fernando Hierro takes over

ಮ್ಯಾಡ್ರಿಡ್, ಜೂ. 13: ನಾಳೆಯೇ ಫೀಫಾ ವಿಶ್ವಕಪ್ ಫುಟ್ಬಾಲ್ ಆರಂಭವಾಗಲಿದೆ. ಫುಟ್ಬಾಲ್ ಬಲಾಡ್ಯ ರಾಷ್ಟ್ರಗಳಿಗೆ ಅತ್ಯಂತ ಪ್ರಮುಖವೆನಿಸಿರುವ ಈ ಹೊತ್ತಿನಲ್ಲೇ ಸ್ಪೇನ್ ರಾಷ್ಟ್ರೀಯ ತಂಡದ ಕೋಚ್ ಜೂಲೆನ್ ಲೋಪೆಟೆಗುಯಿ ತಂಡ ತೊರೆದಿದ್ದು, ಅವರ ಸ್ಥಾನಕ್ಕೆ ಫರ್ನಾಂಡೋ ಹಿರೋರೊ ಅವರು ಆಯ್ಕೆಯಾಗಿದ್ದಾರೆ.

ವಿಶ್ವಕಪ್ ಹೊತ್ತಿನಲ್ಲೆ ಸ್ಪೇನ್ ಗೆ ಕೈಕೊಟ್ಟ ಕೋಚ್ ಲೋಪೆಟೆಗುಯಿವಿಶ್ವಕಪ್ ಹೊತ್ತಿನಲ್ಲೆ ಸ್ಪೇನ್ ಗೆ ಕೈಕೊಟ್ಟ ಕೋಚ್ ಲೋಪೆಟೆಗುಯಿ

ಇಂದು (ಬುಧವಾರ) ಸ್ಪೇನ್ ತಂಡದ ಕೋಚ್ ಲೋಪೆಟೆಗುಯಿ ಅವರು ತಂಡವನ್ನು ತೊರೆದು ರಿಯಲ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಳ್ಳುವ ಮೂಲಕ ಸ್ಪೇನ್ ಗೆ ಅಘಾತವನ್ನು ನೀಡಿದ್ದರು. ಇದೀಗ ತೆರವಾಗಿದ್ದ ಕೋಚ್ ಸ್ಥಾನಕ್ಕೆ ಸ್ಪೇನ್ ತಂಡದ ನಿರ್ದೇಶಕರಾಗಿದ್ದ ಮಾಜಿ ಫುಟ್ಬಾಲಿಗ ಫರ್ನಾಂಡೋ ಅವರು ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಜೂನ್ 15ರಂದು ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೆರಡೇ ದಿನಗಳಲ್ಲಿ ಸ್ಪೇನ್ ತಂಡ ಪೋರ್ಚುಗಲ್ ನ ಕಠಿಣ ಸವಾಲು ಸ್ವೀಕರಿಸುವುದರಲ್ಲಿದೆ. ಈ ಕಾವೇರಿದ ಹೊತ್ತಿನಲ್ಲೇ ಲೋಪೆಟೆಗುಯಿ ತಾನು ತರಬೇತಿ ನೀಡುತ್ತಿದ್ದ ಸ್ಪೇನ್ ತಂಡವನ್ನು ತೊರೆದಿದ್ದು ಫುಟ್ಬಾಲ್ ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.

ಈ ಬಗ್ಗೆ ಸ್ಪ್ಯಾನಿಷ್ ಫುಟ್ಬಾಲ್ ಫೆಡೆರೇಶನ್ ನ ಅಧ್ಯಕ್ಷ ಲೂಯೀಸ್ ರೂಬಿಯಾಲೆಸ್ ಅವರು ಪ್ರತಿಕ್ರಿಯಿಸಿ, 'ನಾವೀಗ ನಿಜಕ್ಕೂ ತುಂಬಾ ಕಠಿಣ ಸಂದರ್ಭದಲ್ಲಿದ್ದೇವೆ. ನಮಗಿದು ತುಂಬಾ ತುಂಬಾ ಸವಾಲಿನ ಹೊತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಹಿರೋರೊ ಅವರು ತಂಡದ ಜವಾಬ್ದಾರಿ ಹೊತ್ತಿರುವುದರಿಂದ ಸ್ಪೇನ್ ತಂಡಕ್ಕೆ ಸಣ್ಣ ಸಮಾಧಾನ ದೊರೆತಂತಾಗಿದೆ. ಹಿರೋರೊ ಹಿಂದೆ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ತಂಡವನ್ನು ಬಲ್ಲವರೆ. ಹಾಗಾಗಿ ಇಂಥ ಸವಾಲಿನ ಸಂದರ್ಭದಲ್ಲಿ ತಂಡವನ್ನು ಹಿರೋರೊ ನಿಭಾಯಿಸಬಲ್ಲರೆಂಬ ನಂಬುಗೆ ಸ್ಪೇನಿಗರದ್ದು.

Story first published: Wednesday, June 13, 2018, 20:22 [IST]
Other articles published on Jun 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X