ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗುಹೆಯೊಳಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಫುಟ್ಬಾಲ್ ಆಟಗಾರರು!

FIFA world cup 2018 : ಗುಹೆಯೊಳಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಫುಟ್ಬಾಲ್ ಆಟಗಾರರು!
Thailand searches for teen football team trapped in flooded cave

ನವದೆಹಲಿ, ಜೂ. 26: ವಿಶ್ವದ ಜನರೆಲ್ಲರೂ ಈಗ ಫೀಫಾ ವಿಶ್ವಕಪ್ ಫುಟ್ಬಾಲ್ ಹಬ್ಬದ ಗುಂಗಿನಲ್ಲಿದ್ದಾರೆ. ಈ ನಡುವೆ ಅಚ್ಚರಿ ಮೂಡಿಸುವ, ಅಷ್ಟೇ ಬೇಸರವೂ ತರುವ ಘಟನೆಯೊಂದು ನಡೆದಿದೆ. ಥೈಲ್ಯಾಂಡ್ ನ ಅಂಡರ್ -16 ಫುಟ್ಬಾಲ್ ಟೀಂನ ಆಟಗಾರರು ಅಲ್ಲಿನ ಗುಹೆಯೊಂದರಲ್ಲಿ ನಾಪತ್ತೆಯಾಗಿದ್ದಾರೆ.

ಪೆನಾಲ್ಟಿಯನ್ನು ಗೋಲಾಗಿಸದೆ ಫೇಲಾದ ಫೇಮಸ್ ಆಟಗಾರರ ವಿಡಿಯೋಪೆನಾಲ್ಟಿಯನ್ನು ಗೋಲಾಗಿಸದೆ ಫೇಲಾದ ಫೇಮಸ್ ಆಟಗಾರರ ವಿಡಿಯೋ

ಥೈಲ್ಯಾಂಡ್ ನ ನ್ಯಾಷನಲ್ ಪಾರ್ಕ್ ನಲ್ಲಿರುವ ಗುಹೆಯೊಂದನ್ನು ನೋಡಲು ತೆರಳಿದ್ದ ಸುಮಾರು 11ರಿಂದ 15ರ ಹರೆಯದ ಒಟ್ಟು 12 ಮಂದಿ ಆಟಗಾರರ ಸಹಿತ ಕೋಚ್ ಕೂಡ ನಾಪತ್ತೆಯಾಗಿದ್ದು, ಬೃಹತ್ ಗುಹೆಯ ನಡುವಲ್ಲೆಲ್ಲೋ ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಎರಡು ದಿನಗಳ ಹಿಂದೆಯೇ ಅಂದರೆ ಶನಿವಾರವೇ ಥೈಲ್ಯಾಂಡ್ ಕಿರಿಯರ ಫುಟ್ಬಾಲ್ ತಂಡ ನಾಪತ್ತೆಯಾಗಿದೆ. ಎರಡು ದಿನಗಳಿಂದಲೂ ರಕ್ಷಣಾ ಪಡೆ ನಿಗೂಢ ರೀತಿಯಲ್ಲಿ ಕಾಣೆಯಾಗಿರುವ ಫುಟ್ಬಾಲ್ ಆಟಗಾರರಿಗಾಗಿ ಹುಡುಕಾಟ ನಡೆಸುತ್ತಿದೆ. ಗುಹೆಯ ದ್ವಾರದಲ್ಲಿರುವ ಆಟಗಾರರ ಸೈಕಲ್ ಗಳು ಆಟಗಾರರು ಗುಹೆ ಪ್ರವೇಶಿಸಿರುವುದಕ್ಕೆ ಸಾಕ್ಷಿ ಹೇಳುತ್ತಿವೆ. ಆದರೆ ಗುಹೆಯ ಒಳಹೊಕ್ಕಿದ ಆಟಗಾರರು ಎಲ್ಲಿದ್ದಾರೊ, ಏನಾಗಿದ್ದಾರೊ ಯಾರಿಗೂ ಗೊತ್ತಿಲ್ಲ.

ಗುಹೆಗಳಿಗೇ ಥೈಲ್ಯಾಂಡ್ ಪ್ರಸಿದ್ಧಿ ಹೊಂದಿದೆ. ಅಲ್ಲಿರುವ ಕುತೂಹಲಕಾರಿ ಗುಹೆಗಳನ್ನು ವೀಕ್ಷಿಸಲೆಂದೇ ವಿದೇಶದಿಂದ ಬಹಳಷ್ಟು ಮಂದಿ ಉತ್ತರ ಥೈಲ್ಯಾಂಡ್ ಗೆ ಭೇಟಿ ಕೊಡುತ್ತಿರುತ್ತಾರೆ. ಹೀಗೆ ಗುಹೆ ವೀಕ್ಷಿಸಲು ಹೋದ ಆಟಗಾರರ ತಂಡವೂ ಎಲ್ಲೋ ಸಿಲುಕಿಕೊಂಡಿದೆ. ತೀವ್ರ ಮಳೆಯೂ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗುತ್ತಿದೆ. ಗುಹೆಯ ಕೆಲವೆಡೆ ಕಗ್ಗತ್ತಲು, ಆಮ್ಲಜನಕದ ಕೊರತೆಯೂ ಇರುವುದರಿಂದ ಕಾಣೆಯಾಗಿರುವ ಕಿರಿಯ ಆಟಗಾರರ ಹುಡುಕಾಟ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.

Story first published: Tuesday, June 26, 2018, 18:57 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X