ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Hockey World Cup 2023: ವೇಲ್ಸ್ ವಿರುದ್ಧ ಭಾರತಕ್ಕೆ 4-2 ಗೋಲುಗಳ ಗೆಲುವು, ನ್ಯೂಜಿಲೆಂಡ್‌ ವಿರುದ್ಧ ಗೆದ್ದರೆ ಕ್ವಾರ್ಟರ್ ಫೈನಲ್

Hockey World Cup 2023: India win Against Wales 4-2, Will Play Against New Zealand In Cross Over

ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಹಾಕಿ ತಂಡ ವೇಲ್ಸ್ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದೆ. ಆಕಾಶದೀಪ್ ಎರಡು ಗೋಲು ಗಳಿಸಿ ಭಾರತ ತಂಡದ ಗೆಲುವಿಗೆ ಸಹಾಯಕವಾದರು. ಈ ಗೆಲುವಿನ ಮೂಲಕ ಭಾರತ ಡಿ ಪೂಲ್‌ನಲ್ಲಿ 2ನೇ ಸ್ಥಾನ ಗಳಿಸಿತು.

ಭಾರತ, ಇಂಗ್ಲೆಂಡ್ ತಲಾ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು, ಹೆಚ್ಚಿನ ಗೋಲು ಗಳಿಸಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಆದರೆ, ಭಾರತ ಎರಡನೇ ಸ್ಥಾನ ಗಳಿಸಿದ್ದು, ಭಾರತ ಕ್ರಾಸ್-ಓವರ್‌ಗಳ ಮೂಲಕ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಬೇಕಾಗಿದೆ.

IPL 2023: ಐಪಿಎಲ್‌ಗಾಗಿ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ಬ್ಯಾಟಿಂಗ್ ಅಭ್ಯಾಸIPL 2023: ಐಪಿಎಲ್‌ಗಾಗಿ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ಬ್ಯಾಟಿಂಗ್ ಅಭ್ಯಾಸ

ಕ್ವಾರ್ಟರ್‌ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು ಎಂಟು ಗೋಲುಗಳ ಅಂತರದಿಂದ ಗೆಲ್ಲಬೇಕಾಗಿತ್ತು. ಆದರೆ 4-2 ಗೋಲುಗಳ ಅಂತರದಲ್ಲಿ ಗೆಲ್ಲುವ ಮೂಲಕ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಯಿತು.

ಭಾರತ ಮತ್ತು ಇಂಗ್ಲೆಂಡ್ ಎರಡೂ ಎರಡು ಪಂದ್ಯಗಳನ್ನು ಗೆದ್ದು ಒಂದನ್ನು ಡ್ರಾ ಮಾಡಿದ ನಂತರ ತಲಾ ಏಳು ಅಂಕಗಳೊಂದಿಗೆ ಸಮಬಲ ಸಾಧಿಸಿದರು. ಆದರೆ, ಇಂಗ್ಲೆಂಡ್ ತಂಡ ಹೆಚ್ಚಿನ ಗೋಲುಗಳ ವ್ಯತ್ಯಾಸ ಹೊಂದಿದ್ದ ಕಾರಣ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಪೂಲ್ ಡಿ ಪಂದ್ಯದಲ್ಲಿ ಸ್ಪೇನ್ ಅನ್ನು 4-0 ಅಂತರದಿಂದ ಸೋಲಿಸಿದ್ದ ಇಂಗ್ಲೆಂಡ್ ಹೆಚ್ಚಿನ ಗೋಲು ಗಳಿಸುವ ಮೂಲಕ ಅಗ್ರಸ್ಥಾನ ಪಡೆಯಿತು.

Hockey World Cup 2023: India win Against Wales 4-2, Will Play Against New Zealand In Cross Over

ನ್ಯೂಜಿಲೆಂಡ್ ವಿರುದ್ಧ ಮುಂದಿನ ಪಂದ್ಯ

ಭಾರತ ಭಾನುವಾರ ನಡೆಯಲಿರುವ ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಸೆಣೆಸಲಿದೆ. ಫೂಲ್‌ ಸಿಯಲ್ಲಿ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ವಿರುದ್ಧ ಗೆದ್ದರೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಲಿದೆ.

ಜಂಪಾಕ್ಡ್ ಕಳಿಂಗ ಸ್ಟೇಡಿಯಂನಲ್ಲಿ ಕೇವಲ 20 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಗಾಳಿಯ ಪರಿಸ್ಥಿತಿಯಲ್ಲಿ ಆಡಿದ ಭಾರತ ವೇಲ್ಸ್ ವಿರುದ್ಧ ಸೆಣೆಸಿತು. ಪಂದ್ಯ ಪೂರ್ತಿ ಭಾರತ ತಂಡ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೂ ನಿರೀಕ್ಷಿತ ಗೋಲುಗಳನ್ನು ಗಳಿಸುವಲ್ಲಿ ವಿಫಲವಾಯಿತು.

5ನೇ ರ್‍ಯಾಂಕಿಂಗ್‌ನಲ್ಲಿರುವ ಭಾರತದ ದಾಳಿಯನ್ನು 14ನೇ ಶ್ರೇಯಾಂಕಿತ ವೇಲ್ಸ್ ಯಶಸ್ವಿಯಾಗಿಯೇ ತಡೆಯಿತು. ಮೊದಲ ನಿಮಿಷದಲ್ಲೇ ಮನ್‌ದೀಪ್ ಸಿಂಗ್‌ ಹೊಡೆದ ಗೋಲನ್ನು ವೇಲ್ಸ್ ಗೋಲ್‌ಕೀಪರ್ ತಡೆದರು. ಭಾರತೀಯರು ಏಳು ಪೆನಾಲ್ಟಿ ಕಾರ್ನರ್‌ಗಳು ಮತ್ತು ಕನಿಷ್ಠ ಆರು ಇತರ ಸ್ಕೋರಿಂಗ್ ಅವಕಾಶಗಳನ್ನು ಪಡೆದರು ಆದರೆ ಅವರ ಫಾರ್ವರ್ಡ್‌ಗಳು ಹೆಚ್ಚಿನ ಅವಕಾಶಗಳನ್ನು ವ್ಯರ್ಥ ಮಾಡಿದರು.

Story first published: Thursday, January 19, 2023, 23:35 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X