
ಅಮಿತ್ ರೋಹಿದಾಸ್ ಪಂದ್ಯದ ಆಟಗಾರ
ಇನ್ನು ಮತ್ತೊಂದು ಪಂದ್ಯದಲ್ಲಿ ವೇಲ್ಸ್ ವಿರುದ್ಧ ಹಾಕಿ ವಿಶ್ವಕಪ್ 2023ರ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ 5-0 ಗೋಲುಗಳ ಅಂತರದ ಗೆಲುವು ಪಡೆದು ಅಗ್ರಸ್ಥಾನದಲ್ಲಿದೆ. ಭಾರತ ಹಾಕಿ ತಂಡವು ಡಿ ಗುಂಪಿನಲ್ಲಿ ಇಂಗ್ಲೆಂಡ್ ನಂತರ 2ನೇ ಸ್ಥಾನದಲ್ಲಿದೆ.
ಭಾರತ ಮತ್ತು ಸ್ಪೇನ್ ನಡುವಿನ ಕಾಳಗದಲ್ಲಿ ಭರ್ಜರಿ ಗೋಲು ದಾಖಲಿಸಿದ ಸ್ಥಳೀಯ ಆಟಗಾರ ಅಮಿತ್ ರೋಹಿದಾಸ್ ಅವರನ್ನು ಪಂದ್ಯದ ಆಟಗಾರ ಎಂದು ಘೋಷಿಸಲಾಯಿತು. ಪೆನಾಲ್ಟಿ ಕಾರ್ನರ್‌ನಿಂದ ಡಿಫ್ಲೆಕ್ಷನ್ ಅನ್ನು ಹಿಡಿದಿಟ್ಟುಕೊಂಡು ಗೋಲು ಬಾರಿಸಿದಾಗ ರೂರ್ಕೆಲಾದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಆತಿಥೇಯ ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಮೊದಲ ಗೋಲು ಬಾರಿಸಿದ ನಂತರ ಹಾಕಿ ವಿಶ್ವಕಪ್‌ನಲ್ಲಿ ಭಾರತದ 200ನೇ ಗೋಲು ಗಳಿಸಿದಂತಾಯಿತು.

ಎರಡನೇ ಕ್ವಾರ್ಟರ್‌ನಲ್ಲಿ 2-0 ಮುನ್ನಡೆ
ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡವು ಮತ್ತಷ್ಟು ಗೋಲು ಬಾರಿಸುವ ಅವಕಾಶಗಳನ್ನು ಕಳೆದುಕೊಂಡಿತು. ಆದರೆ ಹಾರ್ದಿಕ್ ಸಿಂಗ್ ಅವರ ಬಿರುಸಿನ ಆಟವು ಎರಡನೇ ಕ್ವಾರ್ಟರ್‌ನಲ್ಲಿ 2-0 ಮುನ್ನಡೆಯುವಂತೆ ಮಾಡಿತು.
ಹಾರ್ದಿಕ್ ಸಿಂಗ್ ಎಡಭಾಗದಲ್ಲಿ ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದರು ಮತ್ತು ಸ್ಪೇನ್ ಡಿಫೆಂಡರ್‌ನಿಂದ ಚೆಂಡನ್ನು ವಂಚಿಸಿ ಗೋಲಿನತ್ತ ಬಾರಿಸಿದರು.
ಇನ್ನು ಮೂರನೇ ಕ್ವಾರ್ಟರ್‌ನಲ್ಲಿಯೂ ಭಾರತಕ್ಕೆ ಗೋಲು ಗಳಿಸುವ ಅದ್ಭುತ ಅವಕಾಶವಿತ್ತು. ಆದರೆ, ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ವೈಫಲ್ಯದಿಂದಾಗಿ ಗೋಲು ವಿಸ್ತರಿಸುವ ಅವಕಾಶಗಳನ್ನು ಕಳೆದುಕೊಂಡಿತು.

ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದ ಹರ್ಮನ್‌ಪ್ರೀತ್ ಸಿಂಗ್
ಭಾರತ ಹಾಕಿ ತಂಡದ ಕೋಚ್ ಗ್ರಹಾಂ ರೀಡ್ ಅವರು ಭಾರತೀಯ ಆಟಗಾರರ ಪೆನಾಲ್ಟಿ ಕಾರ್ನರ್ ಅನ್ನು ಗೋಲುಗಳಾಗಿ ಪರಿವರ್ತನೆ ಮಾಡದಿದ್ದರ ಬಗ್ಗೆ ಅತೃಪ್ತಿ ಹೊಂದಿದರು.
ಇತ್ತೀಚೆಗಷ್ಟೇ 100ನೇ ಗೋಲು ಬಾರಿಸಿದ್ದ ನಾಯಕ ಹರ್ಮನ್‌ಪ್ರೀತ್ ಸಿಂಗ್‌ಗೆ 2 ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. 3ನೇ ಕ್ವಾರ್ಟರ್‌ನಲ್ಲಿ ಅವರು ಪೆನಾಲ್ಟಿ ಸ್ಟ್ರೋಕ್ ಅನ್ನು ನೇರವಾಗಿ ಸ್ಪೇನ್ ಗೋಲ್‌ಕೀಪರ್‌ಗೆ ಹೊಡೆದು, ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದರು.
ಫೆಬ್ರವರಿ 2022ರ ನಂತರ ಮೊದಲ ಬಾರಿಗೆ ಸ್ಪೇನ್ ತಂಡವನ್ನು ಸೋಲಿಸಿದ ಭಾರತ ತಂಡವು ಮತ್ತೆ ಅಗ್ರ ಪ್ರದರ್ಶನ ನೀಡಿತು. ಭಾರತ ಕೊನೆಯ ಬಾರಿಗೆ ನವೆಂಬರ್ 2022ರಲ್ಲಿ FIH ಪ್ರೊ ಲೀಗ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಿ 2-0 ಮುನ್ನಡೆ ಸಾಧಿಸಿ, ನಂತರ 2-2ರಲ್ಲಿ ಡ್ರಾ ಸಾಧಿಸಿತು.

ಜನವರಿ 15ರಂದು ಇಂಗ್ಲೆಂಡ್ ವಿರುದ್ಧ ಭಾರತದ ಪಂದ್ಯ
ಭಾರತದ ಗೋಲ್‌ಕೀಪರ್ ಕ್ರಿಶನ್ ಪಾಠಕ್ ಅವರು ಸ್ಪೇನ್‌ನ ಕೆಲವು ನಿರ್ಣಾಯಕ ಗೋಲುಗಳನ್ನು ತಪ್ಪಿಸಿದರು. ಇದರಿಂದ ಭಾರತವು ಉತ್ಸಾಹಭರಿತ ಪ್ರದರ್ಶನ ನೀಡಲು ಸಾಧ್ಯವಾಯಿತು.
ಭಾರತ ಹಾಕಿ ತಂಡವು ತನ್ನ ಡಿ ಗುಂಪಿನ ಮುಂದಿನ ಪಂದ್ಯವನ್ನು ಭಾನುವಾರ, ಜನವರಿ 15ರಂದು ರೂರ್ಕೆಲಾದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
4 ಗುಂಪುಗಳ ಅಗ್ರ ಎರಡು ತಂಡಗಳು ನೇರವಾಗಿ ಕ್ವಾರ್ಟರ್-ಫೈನಲ್‌ಗೆ ಮುನ್ನಡೆಯುತ್ತಾರೆ. ಅಲ್ಲಿ ಅಂತಿಮ 4 ಅಗ್ರ ವಿಜೇತ ತಂಡಗಳು ಸೆಮಿಫೈನಲ್‌ನಲ್ಲಿ ಕಾದಾಡಲಿವೆ. ನಂತರ ಎರಡು ವಿಜೇತ ಹಾಕಿ ತಂಡಗಳು ವಿಶ್ವಕಪ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.