ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022 Auction: ಅತಿದೊಡ್ಡ ಮೊತ್ತಕ್ಕೆ ತಮಿಳ್ ತಲೈವಾಸ್ ಪಾಲಾದ ಬೆಂಗಳೂರು ಮಾಜಿ ಆಟಗಾರ ಪವನ್ ಶೆರಾವತ್

PKL 2022 Auction: Pawan Sehrawat has been sold for whopping price of 2.26 crores to Tamil Thalaivas

ಒಂಬತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಜರುಗುತ್ತಿದ್ದು, 500ಕ್ಕೂ ಹೆಚ್ಚು ಕಬಡ್ಡಿ ಆಟಗಾರರು ಈ ಮೆಗಾ ಹರಾಜಿನಲ್ಲಿ ಹರಾಜಾಗುತ್ತಿದ್ದಾರೆ.

CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?

ಇನ್ನು ಬೆಂಗಳೂರು ಬುಲ್ಸ್ ತಂಡದ ಮಾಜಿ ಆಟಗಾರ ಪವನ್ ಶೇರಾವತ್ ಬರೋಬ್ಬರಿ 2.26 ಕೋಟಿ ರೂಪಾಯಿಗಳಿಗೆ ತಮಿಳ್ ತಲೈವಾಸ್ ತಂಡದ ಪಾಲಾಗಿದ್ದು, ಇದು ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲೇ ಆಟಗಾರನೋರ್ವ ಪಡೆದ ಅತಿ ಹೆಚ್ಚು ಮೊತ್ತವಾಗಿದೆ. ಪವನ್ ಶೆರಾವತ್ ತಮಿಳ್ ತಲೈವಾಸ್ ತಂಡದ ಪಾಲಾಗುವುದರ ಜತೆಗೆ ಈ ಸಾರ್ವಕಾಲಿಕ ದಾಖಲೆಯನ್ನು ಇದೀಗ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಮಹಾರಾಜ ಟ್ರೋಫಿ 2022: ಈ 2 ಊರುಗಳಲ್ಲಿ ಮಾತ್ರ ನಡೆಯಲಿವೆ ಹೊಸ ಕೆಪಿಎಲ್‌ನ 34 ಪಂದ್ಯಗಳುಮಹಾರಾಜ ಟ್ರೋಫಿ 2022: ಈ 2 ಊರುಗಳಲ್ಲಿ ಮಾತ್ರ ನಡೆಯಲಿವೆ ಹೊಸ ಕೆಪಿಎಲ್‌ನ 34 ಪಂದ್ಯಗಳು

2013ರಲ್ಲಿ ತಮ್ಮ ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಆವೃತ್ತಿಯನ್ನಾಡಿದ ಪವನ್ ಶೆರಾವತ್ ಅಂದು ತಮ್ಮ ಕೋಚ್ ರಣಧೀರ್ ಸಿಂಗ್ ಶೆರಾವತ್ ಅವರಿಂದ ಪರಿಚಯಿಸಲ್ಪಟ್ಟಿದ್ದರು. ಆ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ 14 ಪಂದ್ಯಗಳ ಪೈಕಿ 13 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಪವನ್ ಶೆರಾವತ್ 45 ರೇಡ್ ಪಾಯಿಂಟ್ಸ್ ಪಡೆಯುವುದರ ಮೂಲಕ ಟೂರ್ನಿಯಲ್ಲಿ ತಂಡದ ಪರ ಅತಿ ಹೆಚ್ಚು ರೇಡ್ ಪಾಯಿಂಟ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದರು.

ಪವನ್ ಶೆರಾವತ್ ಮೇಲಿನ ಬಿಡ್ ಹೀಗಿತ್ತು

ಪವನ್ ಶೆರಾವತ್ ಮೇಲಿನ ಬಿಡ್ ಹೀಗಿತ್ತು

ಪವನ್ ಶೇರಾವತ್ ಹೆಸರು ಬರುತ್ತಿದ್ದಂತೆಯೇ ಇದೊಂದು ದೊಡ್ಡ ಬಿಡ್ ಆಗಲಿದೆ ಎಂಬ ಅಭಿಪ್ರಾಯ ಎಲ್ಲರಲ್ಲಿಯೂ ಇತ್ತು. ಅದರಂತೆ ಮೊದಲಿಗೆ ಹರಿಯಾಣ ಸ್ಟೀಲರ್ಸ್ ತಂಡ ಪವನ್ ಶೆರಾವತ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಬರೋಬ್ಬರಿ 1 ಕೋಟಿ ಹರಾಜನ್ನು ಕೂಗಿತು. ನಂತರ ಹರಿಯಾಣ ಸ್ಟೀಲರ್ಸ್ ಬಳಿಕ ಯು ಮುಂಬಾ ಕೂಡ ಪವನ್ ಶೆರಾವತ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಸಲುವಾಗಿ ಬಿಡ್ಡಿಂಗ್ ರೇಸ್‌ಗೆ ಇಳಿಯಿತು. ಆದರೂ ಸಹ ಛಲ ಬಿಡದ ಹರಿಯಾಣ ಸ್ಟೀಲರ್ಸ್ 1.20 ಕೋಟಿ ಬಿಡ್ ಮಾಡಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಮಿಳ್ ತಲೈವಾಸ್ ಪವನ್ ಶೆರಾವತ್ ಮೇಲೆ ಬರೋಬ್ಬರಿ 1.50 ಕೋಟಿ ರೂಪಾಯಿ ಬಿಡ್ ಮಾಡಿತು. ನಂತರ ಯು ಮುಂಬಾ ತಮಿಳ್ ತಲೈವಾಸ್ ಜತೆ ಪವನ್ ಶೆರಾವತ್ ಅವರನ್ನು ಖರೀದಿಸಲು ಜಿದ್ದಾಜಿದ್ದಿನ ಬಿಡ್ ನಡೆಸಿತು. ಆದರೆ ಕೊನೆಯ ಕ್ಷಣದವರೆಗೂ ದೃತಿಗೆಡದ ತಮಿಳ್ ತಲೈವಾಸ್ ಅಂತಿಮವಾಗಿ 2.26 ಕೋಟಿ ಬಿಡ್ ಮಾಡಿ ಪವನ್ ಶೆರಾವತ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

ಪವನ್ ಶೆರಾವತ್ ಕೈಬಿಟ್ಟು ಮರುಗಿದ ಬೆಂಗಳೂರು ಬುಲ್ಸ್

ಪವನ್ ಶೆರಾವತ್ ಕೈಬಿಟ್ಟು ಮರುಗಿದ ಬೆಂಗಳೂರು ಬುಲ್ಸ್

ಇತ್ತ ತಮ್ಮ ತಂಡದ ಪರ ಹಲವಾರು ವರ್ಷಗಳಿಂದ ಕಣಕ್ಕಿಳಿದು ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದ ಪವನ್ ಶೆರಾವತ್ ಅವರನ್ನು ಕೈಬಿಟ್ಟ ಬೆಂಗಳೂರು ಬುಲ್ಸ್ ತಂಡ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪವನ್ ಶೆರಾವತ್ ತಮ್ಮ ತಂಡದ ಪರ ಈ ಬಾರಿ ಆಡುವುದಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿದೆ. ಪವನ್ ಶೆರಾವತ್ ಅವರಿಗೆ ಶುಭ ಕೋರಿರುವ ಬೆಂಗಳೂರು ಬುಲ್ಸ್ ಇಂತಹ ವಜ್ರದಂತ ಆಟಗಾರರನ್ನು ಪಡೆದ ತಮಿಳ್ ತಲೈವಾಸ್ ತಂಡಕ್ಕೂ ಶುಭವಾಗಲಿ ಎಂದು ಬರೆದುಕೊಂಡಿದೆ. ಹಾಗೂ ಅಂತಿಮವಾಗಿ ಬೆಂಗಳೂರಿನ ಜನ ಶಾಶ್ವತವಾಗಿ ನಿಮ್ಮನ್ನು ಅವರ ಹೃದಯದಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ಬೆಂಗಳೂರು ಬುಲ್ಸ್ ಭಾವುಕವಾಗಿ ಬರೆದುಕೊಂಡಿದೆ.

ಕೆಲವೇ ನಿಮಿಷಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆ ಉಡೀಸ್

ಕೆಲವೇ ನಿಮಿಷಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆ ಉಡೀಸ್

2021ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪ್ರದೀಪ್ ನರ್ವಾಲ್ ಅವರನ್ನು ಯುಪಿ ಯೋಧಾ ತಂಡ ಬರೋಬ್ಬರಿ 1.65 ಕೋಟಿಗೆ ಖರೀದಿಸಿತ್ತು. ಇದು ಪ್ರೋ ಕಬಡ್ಡಿ ಲೀಗ್ ಆಟಗಾರರ ಹರಾಜಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಬಿಡ್ ಮೊತ್ತವಾಗಿತ್ತು. ಈ ದಾಖಲೆಯನ್ನು ಈ ವರ್ಷದ ಹರಾಜಿನಲ್ಲಿ ಬೆಂಗಳೂರು ಬುಲ್ಸ್ ವಿಕಾಸ್ ಖಂಡೋಲಾ ಅವರನ್ನು 1.70 ಕೋಟಿಗೆ ಖರೀದಿಸುವುದರ ಮೂಲಕ ಮುರಿದುಹಾಕಿತ್ತು. ಆದರೆ ಕೆಲವೇ ನಿಮಿಷಗಳ ನಂತರ ತಮಿಳ್ ತಲೈವಾಸ್ ಪವನ್ ಶೆರಾವತ್ ಅವರನ್ನು 2.26 ಕೋಟಿಗೆ ಖರೀದಿಸಿ ದಾಖಲೆ ಬರೆಯಿತು.

Story first published: Friday, August 5, 2022, 22:23 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X