ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೇಂದ್ರದ ಒಪ್ಪಿಗೆಯಿಲ್ಲದೆ ಪಾಕಿಸ್ತಾನದಲ್ಲಿ ಕಬಡ್ಡಿ ಚಾಂಪಿಯನ್ಶಿಪ್‌ನಲ್ಲಿ ಪಾಲ್ಗೊಂಡ ಆಟಗಾರರು

 Sports Minister Kiren Rijiju Clearification On Indian Kabaddi Players Visit To Pakistan

ಪಾಕಿಸ್ತಾನದಲ್ಲಿ ನಡೆಯಲಿರುವ ಕಬಡ್ಡಿ ಚಾಂಪಿಯನ್ಶಿಪ್ ವಿವಾದವೊಂದರ ಕೇಂದ್ರ ಬಿಂದುವಾಗಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಭಾರತದ ಸುಮಾರು 60 ಕಬಡ್ಡಿ ಆಟಗಾರರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಕೇಂದ್ರದ ಅನುಮತಿಯಿಲ್ಲದೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಟಗಾರರು ತೆರಳಿರುವುದು ಇದೀಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

ಸುಮಾರು 60 ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಲ್ ಮಾದರಿಯ ಕಬಡ್ಡಿ ಚಾಂಪಿಯನ್ಶಿಪ್ ಇದಾಗಿದ್ದು ತೆರಳಿರುವ ಬಹುತೇಕ ಆಟಗಾರರು ಪಂಜಾಬ್ ಮೂಲದವರಾಗಿದ್ದಾರೆ ಎಂದು ಮಾಹಿತಿ ದೊರಕಿದೆ. ಪಾಕಿಸ್ತಾನದ ಕಬಡ್ಡಿ ಫೆಡರೇಷನ್‌ನ ಅಧಿಕಾರಿಗಳು ಭಾರತದ ತಂಡವನ್ನು ಖುದ್ದಾಗಿ ಸ್ವಾಗತಿಸಿದ್ದಾರೆ.

U-19 ಚಾಂಪಿಯನ್ ಆದ ಬಾಂಗ್ಲಾ ವರ್ತನೆ ಜಂಟಲ್‌ಮೆನ್ ಗೇಮ್‌ಗೆ ಅವಮಾನ ! ವಿಡಿಯೋU-19 ಚಾಂಪಿಯನ್ ಆದ ಬಾಂಗ್ಲಾ ವರ್ತನೆ ಜಂಟಲ್‌ಮೆನ್ ಗೇಮ್‌ಗೆ ಅವಮಾನ ! ವಿಡಿಯೋ

ಚಾಂಪಿಯನ್ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದಿಂದ ಲಾಹೋರ್‌ಗೆ ಭಾರತದ ತಂಡ ಭಾನುವಾರ ತೆರಳಿದೆ. ವಾಘಾ ಗಡಿಯ ಮೂಲಕ ತೆರಳಿದ ತಂಡ ಲಾಹೋರನ್ನು ತಲುಪಿದ್ದು ಇದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಈ ಟೂರ್ನಿಯನ್ನು ಮೊದಲ ಬಾರಿಗೆ ಆಯೋಜನೆ ಮಾಡುತ್ತಿದೆ.

ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕ್ರೀಡಾ ಸಚಿವ ಕಿರಣ್ ರಿಜಿಜು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾದರೆ ಕ್ರೀಡಾ ಇಲಾಖೆಯಿಂದ ಪಡೆಯಲೇ ಬೇಕಾಗಿರುವ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ ಎಂದು ಹೇಳಿಕೆಯನ್ನು ನೀಡಿದ್ದು ಇದು ಅಧಿಕೃತವಾಗಿ ತೆರಳಿರುವ ತಂಡವಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇ: ಪಾಕ್ ಮಾಜಿ ನಾಯಕ ಹೊಗಳಿದ್ದು ಭಾರತೀಯನನ್ನು!ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇ: ಪಾಕ್ ಮಾಜಿ ನಾಯಕ ಹೊಗಳಿದ್ದು ಭಾರತೀಯನನ್ನು!

ಪಾಕಿಸ್ತಾನ ಇದೇ ಮೊದಲ ಬಾರಿಗೆ ಸರ್ಕಲ್ ಮಾದರಿಯ ಕಬಡ್ಡಿ ಚಾಂಪಿಯನ್ಶಿಪ್ ಆಯೋಜನೆ ಮಾಡುತ್ತಿದೆ. ಈಗಾಗಲೇ ಭಾರತ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಅಧೀಕೃತವಾಗಿ ಸ್ಪಷ್ಟಪಡಿಸಿದೆ. ಹಾಗಿದ್ದರೂ ಭಾರತೀಯ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದು ವಿವಾದವಾಗಿದೆ.

Story first published: Monday, February 10, 2020, 17:08 [IST]
Other articles published on Feb 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X