ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಂಠೀರವ ಸ್ಟೇಡಿಯಂನ ಜಿಮ್ನ್ಯಾಸ್ಟಿಕ್ಸ್ ವಿಭಾಗದಲ್ಲಿ ಅವ್ಯವಸ್ಥೆ: ರಾಷ್ಟ್ರೀಯ ಕ್ರೀಡಾಪಟು ಆರೋಪ

A national-level gymnast has been accused of being a mess at Kanteerava Stadium

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಂಠೀರವ ಸ್ಟೇಡಿಯಂನಲ್ಲಿ ಅವ್ಯಸ್ಥೆಯಿದೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯವಾಗಿ ಜಿಮ್ನ್ಯಾಸ್ಟಿಕ್ ವಿಭಾಗದಲ್ಲಿ ಕ್ರೀಡಾ ಪರಿಕರಗಳು ಹಾಳಾಗುತ್ತಿವೆ. ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಬಾಲಚಂದ್ರ ಎನ್‌ಕೆ ಆರೋಪಿಸಿದ್ದಾರೆ. ಬಾಲಚಂದ್ರ ಅವರು ಜಿಮ್ನ್ಯಾಸ್ಟಿಕ್‌ನಲ್ಲಿ ಹಲವಾರು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಒಟ್ಟು 9 ವಿಶ್ವದಾಖಲೆಗಳು ಬಾಲಚಂದ್ರ ಹೆಸರಿನಲ್ಲಿವೆ.

ಆಟದ ಮಧ್ಯೆ ಪ್ರವೇಶಿಸಿ ಜಾನಿ ಬೇರ್ಸ್ಟೋವ್‌ಗೆ ಗುದ್ದಿದ ಜಾರ್ವೋ: ವಿಡಿಯೋಆಟದ ಮಧ್ಯೆ ಪ್ರವೇಶಿಸಿ ಜಾನಿ ಬೇರ್ಸ್ಟೋವ್‌ಗೆ ಗುದ್ದಿದ ಜಾರ್ವೋ: ವಿಡಿಯೋ

ಏಷ್ಯಾ ಬುಕ್‌ ಆಫ್ ರೆಕಾರ್ಡ್ 1 ದಾಖಲೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ 3 ದಾಖಲೆಗಳು ಮತ್ತು ಕಲಾಂ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್‌ನಲ್ಲಿ 5 ದಾಖಲೆಗಳನ್ನು ಬಾಲಚಂದ್ರ ನಿರ್ಮಿಸಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಜಿಮ್ನ್ಯಾಸ್ಟಿಕ್ ವಿಭಾಗದಲ್ಲಿ ಬಸವರಾಜು ಎಂಬವರು ಕೋಚಿಂಗ್ ಜವಾಬ್ದಾರಿಯಲ್ಲಿದ್ದಾರೆ. ಆದರೆ ಬಸವರಾಜ್ ಸ್ಟೇಡಿಯಂಗೆ ಸರಿಯಾಗಿ ಬರುತ್ತಿಲ್ಲ.

ಭಾರತ vs ಇಂಗ್ಲೆಂಡ್: ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್ಭಾರತ vs ಇಂಗ್ಲೆಂಡ್: ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್

ದಿನದಲ್ಲಿ ಬೆಳಗ್ಗೆ ಮತ್ತು ಸಂಜೆ ಜಿಮ್ನ್ಯಾಸ್ಟಿಕ್ ವಿಭಾಗದ ಪ್ರವೇಶ ಗೇಟು ಮುಚ್ಚಿಯೇ ಇರುತ್ತದೆ. ಇದರಿಂದ ಆಸಕ್ತ ಕ್ರೀಡಾಪಟುಗಳಿಗೆ ಕಂಠೀರವ ಸ್ಟೇಡಿಯಂನಲ್ಲಿ ಜಿಮ್ನ್ಯಾಸ್ಟಿಕ್ ಅಭ್ಯಾಸಕ್ಕೆ ಅವಕಾಶವೇ ಸಿಗುತ್ತಿಲ್ಲ ಎಂದು ಬಾಲಚಂದ್ರ ದೂರಿದ್ದಾರೆ.

ಅವ್ಯವಸ್ಥೆಗಳಿದ್ದರೆ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪದಕಗಳು ಹೇಗೆ ಬರುತ್ತವೆ?

ಅವ್ಯವಸ್ಥೆಗಳಿದ್ದರೆ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪದಕಗಳು ಹೇಗೆ ಬರುತ್ತವೆ?

ಒಲಿಂಪಿಕ್ಸ್ ಗೇಮ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮೊದಲಾದ ಪ್ರಮುಖ ಕ್ರೀಡಾಕೂಟಗಳ ವೇಳೆ ರಾಜ್ಯಕ್ಕೆ, ದೇಶಕ್ಕೆ ಹೆಚ್ಚಿನ ಪದಕಗಳು ಬರೋದಿಲ್ಲ, ಕ್ರೀಡಾಕೂಟಕ್ಕೆ ರಾಜ್ಯದಿಂದ ಯಾರೂ ಆಯ್ಕೆಯೇ ಆಗುತ್ತಿಲ್ಲ ಎಂದು ಹಲವಾರು ಮಂದಿ ಗೊಣಗುತ್ತಾರೆ. ಆದರೆ ಪ್ರಮುಖ ಸ್ಟೇಡಿಯಂಗಳಲ್ಲೇ ಇಂಥ ಅವ್ಯವಸ್ಥೆಯಿದ್ದರೆ ದೊಡ್ಡ ಕ್ರೀಡಾಕೂಟಗಳ ವೇಳೆ ಪದಕಗಳು ಹೇಗೆ ಬರುತ್ತವೆ, ಕ್ರೀಡಾಪಟುಗಳು ಆಯ್ಕೆಯಾಗಲು ಹೇಗೆ ಸಾಧ್ಯ? ಎಂದು ಬಾಲಕೃಷ್ಣ ಪ್ರಶ್ನಿಸಿದ್ದಾರೆ(ಸ್ಟೇಡಿಯಂನ ಹಾಳಾಗಿರುವ ಪ್ಯಾರಲೆಲ್ ಬಾರ್ ಮತ್ತು ನಿಜವಾದ ಪ್ಯಾರಲೆಲ್ ಬಾರ್‌ನ ಚಿತ್ರ).

ಅವೈಜ್ಞಾನಿಕ ಕಟ್ಟಡ, ಕ್ರೀಡಾ ಉಪಕರಣಗಳೆಲ್ಲಾ ಹಾಳು ಬಿದ್ದಿವೆ

ಕಂಠೀರವ ಸ್ಟೇಡಿಯಂನಲ್ಲಿರುವ ಜಿಮ್ನಸ್ಟಿಕ್ ವಿಭಾಗದ ಕಟ್ಟದ ತಗ್ಗಾಗಿದ್ದು ಅಲ್ಲಿ ಸರಿಯಾಗಿ ಅಭ್ಯಾಸ ನಡೆಸಲು ಆಗುತ್ತಿಲ್ಲ. ಜಿಮ್ನ್ಯಾಸ್ಟಿಕ್ ಅಭ್ಯಾಸಕ್ಕೆ ತಕ್ಕಂತೆ ಕಟ್ಟಡದ ಎತ್ತರವಿದ್ದರೆ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಕ್ರೀಡಾಪಟುಗಳಿಗೆ ಗಂಭೀರ ಗಾಯಗಳಾಗುವ ಸಾಧ್ಯತೆಯಿದೆ ಎಂದು ಎಂದು ಬಾಲಚಂದ್ರ ಹೇಳಿದ್ದಾರೆ.
ಅಷ್ಟೇ ಅಲ್ಲ, ಸ್ಟೇಡಿಯಂನ ಜಿಮ್ನ್ಯಾಸ್ಟಿಕ್ ವಿಭಾಗದ ಒಳಗಿರುವ ಪರಿಕರಗಳು ಹಾಳುಬಿದ್ದುಹೋಗಿವೆ. ಜಿಮ್ನ್ಯಾಸ್ಟಿಕ್ ಅಭ್ಯಾಸ ನಡೆಸಲು ಬೇಕಾದ ಹೈ ಬಾರ್, ಪ್ಯಾರಲೆಲ್ ಬಾರ್, ರಿಂಗ್ಸ್, ಅನ್‌ಈವನ್ ಬಾರ್ ಎಲ್ಲವೂ ಹಾಳಾಗಿದ್ದು, ಅವುಗಳನ್ನು ಬಳಸಿ ಅಭ್ಯಾಸ ನಡೆಸಲು ಸಾಧ್ಯವಿಲ್ಲವಾಗಿದೆ ಎಂದು ಬಾಲಚಂದ್ರ ತಿಳಿಸಿದ್ದಾರೆ.

ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಬಾಲಚಂದ್ರ ಒತ್ತಾಯ

ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಬಾಲಚಂದ್ರ ಒತ್ತಾಯ

ಸ್ಟೇಡಿಯಂನ ಜಿಮ್ನ್ಯಾಸ್ಟಿಕ್ ವಿಭಾಗದ ಕೋಚ್ ಬಸವರಾಜ್ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗೂ ಅಲಕ್ಷ್ಯ ತೋರುತ್ತಿದ್ದಾರೆ. ಈ ಅವ್ಯವಸ್ಥೆಗಳು ಹೀಗೇ ಮುಂದುವರೆದರೆ ಅನೇಕ ಪ್ರತಿಭೆಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕಂಠೀರವ ಸ್ಟೇಡಿಯಂನ ಜಿಮ್ನ್ಯಾಸ್ಟಿಕ್ ವಿಭಾಗದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಬೇಕೆಂದು ಬಾಲಚಂದ್ರ ಒತ್ತಾಯಿಸಿದ್ದಾರೆ (ಸ್ಟೇಡಿಯಂನಲ್ಲಿ ಹಾಳಾಗಿರುವ ಅನೀವನ್ ಬಾರ್ ಮತ್ತು ನಿಜವಾದ ಅನೀವನ್ ಬಾರ್‌ನ ಚಿತ್ರ).

ಬಾಲಚಂದ್ರ ಹೆಸರಿನಲ್ಲಿ ಅನೇಕ ವಿಶ್ವದಾಖಲೆಗಳು

ಬಾಲಚಂದ್ರ ಹೆಸರಿನಲ್ಲಿ ಅನೇಕ ವಿಶ್ವದಾಖಲೆಗಳು

ಬೆಂಗಳೂರಿನ ಸುಬ್ಬರಾಜ್ ಲೇಔಟ್‌ನ ಲಕ್ಕಸಂದ್ರದ ಗಣೇಶ ದೇವಸ್ಥಾನದ ಸಮೀಪ ವಾಸವಿರುವ ಬಾಲಚಂದ್ರ, ಜಿಮ್ನ್ಯಾಸ್ಟಿಕ್‌ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಫ್ರೆಂಟ್‌ರೋಲ್ಸ್, ಕಿಪ್‌ಅಪ್ಸ್‌, ಫ್ರೆಂಟ್ ಹ್ಯಾಂಡ್‌ ಸ್ಪ್ರಿಂಗ್ಸ್‌, ಕಾರ್ಟ್ ವೀಲ್ಸ್ ನಲ್ಲಿನ ಕಸರತ್ತಿಗಾಗಿ ದಾಖಲೆಗಳನ್ನು ನಿರ್ಮಿಸಿರುವ ಬಾಲಚಂದ್ರ, ಫೆಬ್ರವರಿ 2020ರಂದು ಚೆನ್ನೈಯಲ್ಲಿ ನಿಮಿಷದಲ್ಲಿ 72 ಕೊಸ್ಯಾಕ್ ಸ್ಕ್ವಾಟ್ ಮಾಡಿ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ ಹೆಸರು ಬರೆಸಿಕೊಂಡಿದ್ದಾರೆ.

Story first published: Saturday, September 4, 2021, 11:48 [IST]
Other articles published on Sep 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X