ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯಾ ರೋಡ್ ಚೇಸಿಂಗ್ ಚಾಂಪಿಯನ್‌ಶಿಪ್‌ 2022: ಹೋಂಡಾ ರೇಸಿಂಗ್ ಇಂಡಿಯಾಗೆ ಮತ್ತೊಂದು ಅಂಕ

Honda race

ಮಲೇಷಿಯಾದಲ್ಲಿ ನಡೆಯುತ್ತಿರುವ ಎಫ್‌ಐಎಂ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನ (ಎಆರ್‌ಆರ್‌ಸಿ) 2ನೇ ರೌಂಡ್‌ನ 2ನೇ ದಿನವು ನಾಟಕೀಯ ತಿರುವು ಪಡೆಯಿತು. ಚಾಂಪಿಯನ್‌ಶಿಪ್‌ನ ಏಷ್ಯಾ ಪ್ರೊಡಕ್ಷನ್ 250 ವಿಭಾಗದಲ್ಲಿ (ಎಪಿ250) ಹೋಂಡಾ ರೇಸಿಂಗ್ ಇಂಡಿಯಾ ತಂಡವು ಉತ್ತಮ ಸೂಚನೆಯೊಂದಿಗೆ ಸುತ್ತು ಮುಗಿಸುವ ಮೂಲಕ ಮತ್ತೊಂದು ಅಂಕವನ್ನು ಸೇರಿಸಿಕೊಂಡಿತು.

ಮಲೇಷ್ಯಾದ ಸೆಪಾಂಗ್ ಇಂಟರ್‌ನ್ಯಾಷನಲ್‌ನಲ್ಲಿ ಇಂದು 5 ವಿಭಾಗಗಳಲ್ಲಿ 14 ರೈಡರ್‌ಗಳು ಹಿಡಿತವನ್ನು ಕಳೆದುಕೊಂಡು ಅಪಘಾತಕ್ಕೀಡಾದರು. ಇದರ ನಡುವೆಯು ಹೋಂಡಾ ರೇಸಿಂಗ್ ಇಂಡಿಯಾ ಮತ್ತೊಂದು ಅಂಕ ಸಂಪಾದಿಸಿದೆ.

ನಮ್ಮೂರ ಪ್ರತಿಭೆ: ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಕರ್ನಾಟಕದ ಎಂ.ಆರ್ ಪೂವಮ್ಮನಮ್ಮೂರ ಪ್ರತಿಭೆ: ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಕರ್ನಾಟಕದ ಎಂ.ಆರ್ ಪೂವಮ್ಮ

ಇಂದಿನ ರೇಸ್‌ನಲ್ಲಿ ಉತ್ತಮ ಆರಂಭವನ್ನು ಮಾಡಿದ ರಾಜೀವ್ ಸೇತು ಅವರು, ಲ್ಯಾಪ್ 1ನ್ನು ಮುಗಿಸುವ ಮೊದಲು 16ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ತ್ವರಿತವಾಗಿ ಮುನ್ನುಗ್ಗಿದರು. ತದನಂತರ ಅವರು, ಫಿಟ್ರಿಯನ್‌ಶ್ಯಾ ಕೇಟೆ ಮತ್ತು ಸ್ಥಳೀಯ ರೈಡರ್ ಎಂಡಿ ಇಡ್ಲಾನ್ ಹಕಿಮಿ ಅವರೊಂದಿಗೆ ಕಠಿಣ ಹೋರಾಟ ಎದುರಿಸಬೇಕಾಯಿತು. ಅಲ್ಲಿಂದ ಅವರು ಲ್ಯಾಪ್ 5ರಲ್ಲಿ 17 ಸ್ಥಾನದಲ್ಲಿ ಹಿಂದುಳಿಯುವಂತಾಯಿತು. 6ನೇ ಲ್ಯಾಪ್ ನಂತರ 16ನೇ ಸ್ಥಾನಕ್ಕೆ ಮರಳಿದರು. ಕೊನೆಯ ಲ್ಯಾಪ್‌ನಲ್ಲಿ ರಾಜೀವ್ ಪೂರ್ಣ ಹಿಡಿತ ಪಡೆದರು ಮತ್ತು 15ನೇ ಸ್ಥಾನ ಪೂರ್ಣಗೊಳಿಸಲು ರೈಡರ್‌ಗಳನ್ನು ಹಿಂದಿಕ್ಕಿದರು ಮತ್ತು ಹೋಂಡಾ ರೇಸಿಂಗ್ ಇಂಡಿಯಾ ಕಿಟ್ಟಿಗೆ ಮತ್ತೊಂದು ಅಂಕವನ್ನು ಸೇರಿಸಿದರು.

Honda race2

"ಇದು ಖಂಡಿತವಾಗಿಯೂ ನನಗೆ ತೃಪ್ತಿದಾಯಕ ರೇಸ್ ಆಗಿರಲಿಲ್ಲ. ಅದಾಗ್ಯೂ ನಾನು ರೇಸ್‌ನಲ್ಲಿ ಉತ್ತಮ ಆರಂಭ ಮಾಡಿದೆ. ಆದರೆ, ಕುಸಿತ ತಪ್ಪಿಸಲು ಪ್ರತಿಸ್ಪರ್ಧಿ ಸವಾರರರಿಗೆ ಹತ್ತಿರವಾದ ನಂತರ ಲ್ಯಾಪ್ 5ರಲ್ಲಿ ಹಿಂದುಳಿದೆ. ಅದೇನೇ ಇದ್ದರೂ, ಇದು ನನಗೆ ಕಲಿಕೆಯ ಮತ್ತೊಂದು ದಿನವಾಗಿತ್ತು. ನನ್ನ ಕೌಶಲ್ಯಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ನನ್ನ ದೇಶಕ್ಕೆ ಪ್ರಶಸ್ತಿಗಳನ್ನು ತರಲು ನಾನು ಮತ್ತಷ್ಟು ಶಕ್ತಿಯುತವಾಗಿ ಹಿಂತಿರುಗುತ್ತೇನೆ" ಎಂದು ರೈಡರ್ ರಾಜೀವ್ ಸೇತು ಹೇಳಿದ್ದಾರೆ.

ರಾಜೀವ್ ತಂಡದ ಸಹ ಆಟಗಾರ ಸೆಂಥಿಲ್ ಕುಮಾರ್ ಇಂದು ಕಠಿಣ ಹೋರಾಟ ನಡೆಸಿದರು. ಗ್ರಿಡ್‌ನಲ್ಲಿ 17ನೇ ಸ್ಥಾನದಿಂದ ಪ್ರಾರಂಭಿಸಿದ ಅವರು, ಲ್ಯಾಪ್ 1ರಲ್ಲಿ 16ನೇ ಸ್ಥಾನಕ್ಕೆ ಮುನ್ನುಗ್ಗಿದರು ಮತ್ತು ಲ್ಯಾಪ್ 2ರವರೆಗೆ ತಮ್ಮ ಸ್ಥಾನವನ್ನು ಕಾಯ್ದುಕೊಂಡರು. ಆದರೆ, ಲ್ಯಾಪ್ 3ರಲ್ಲಿ 17ನೇ ಸ್ಥಾನಕ್ಕೆ ಮರಳಿದರು. 4 ಮತ್ತು 5ರ ನಡುವೆ ಅವರು, ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮತ್ತಷ್ಟು ವೇಗ ಹೆಚ್ಚಿಸಿ ಸತತವಾಗಿ 14ನೇ ಸ್ಥಾನವನ್ನು ಪಡೆದರು

''ಇಂದು ನನಗೆ ಮತ್ತೊಂದು ಕಷ್ಟದ ದಿನವಾಗಿತ್ತು. ಆರಂಭದಲ್ಲಿ ನಾನು ಮೊದಲ ಸ್ಥಾನ ಗಳಿಸಿದೆ. ಆದರೆ ಲ್ಯಾಪ್ 3ರಲ್ಲಿ 17ನೇ ಸ್ಥಾನಕ್ಕೆ ಇಳಿದೆ. ಅದರ ನಂತರ, ಉಸಿರು ಬಿಗಿಹಿಡಿದು ಮತ್ತಷ್ಟು ವೇಗವಾಗಿ ಮುನ್ನುಗಿದೆ ಮತ್ತು ಅಂತಿಮವಾಗಿ 5ನೇ ಲ್ಯಾಪ್‌ನಲ್ಲಿ 4 ರೈಡರ್‌ಗಳನ್ನು ಹಿಂದಿಕ್ಕಿದೆ. ನಂತರ, ಕೊನೆಯವರೆಗೂ ಕಠಿಣವಾಗಿ ಹೋರಾಡುತ್ತಿದ್ದೆ. ಆದರೆ, ಲ್ಯಾಪ್ 8ರ ಕೊನೆಯ ಮೂಲೆಯಲ್ಲಿ ರೈಡರ್ ಹೊಡೆದ ಡಿಕ್ಕಿಯಿಂದ ನಾನು 16ನೇ ಸ್ಥಾನಕ್ಕೆ ಪೂರ್ಣಗೊಳಿಸಲು ಕಾರಣವಾಯಿತು" ಎಂದು ಸೆಂಥಿಲ್ ಕುಮಾರ್ ಹೇಳಿದ್ದಾರೆ.

ಇದರ ಜೊತೆಗೆ ಸೆಪಾಂಗ್‌ನಲ್ಲಿ 2:29.078ರ ವೈಯಕ್ತಿಕ ಅತ್ಯುತ್ತಮ ಲ್ಯಾಪ್ ಅನ್ನು ದಾಖಲಿಸಿದರು. ಅಲ್ಲಿಂದ ಮುಂದೆ ತನ್ನ ಆವೇಗ ಎದುರಿಸಲು ಹರಸಾಹಸಪಡುತ್ತಾ, ಸೆಂಥಿಲ್ ಅವರು 8ನೇ ಲ್ಯಾಪ್ ರೇಸ್ ಅನ್ನು ಕೊನೆಯ ಮೂಲೆಯಲ್ಲಿ ದೂರ ಉಳಿದು ಕ್ರ್ಯಾಶ್ ಆದರೂ ಚೇತರಿಸಿಕೊಂಡರು ಮತ್ತು ರೇಸ್ ಅನ್ನು ಮುಗಿಸುವಲ್ಲಿ ಯಶಸ್ವಿಯಾದರು.

Story first published: Monday, May 30, 2022, 16:57 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X