ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Asian Games 2022: ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಏಷ್ಯನ್ ಗೇಮ್ಸ್; ನೂತನ ದಿನಾಂಕ ಪ್ರಕಟ

Asian Games 2022: Postponed 19th Asian Games set to begins from September 2023

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಹುನಿರೀಕ್ಷಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಬೇಕಿತ್ತು. ಹೌದು, 2022ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ 2022ರ ಸೆಪ್ಟೆಂಬರ್ ತಿಂಗಳ 10ರಿಂದ 25ರವರೆಗೆ ಆಯೋಜನೆಯಾಗಿತ್ತು. ಆದರೆ ಕೊರೋನಾವೈರಸ್ ಆತಂಕದ ಕಾರಣದಿಂದಾಗಿ ಈ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜನೆಯಾಗಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ದ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಸ್ಥಗಿತಗೊಳಿಸಿ ನಿರ್ಧಾರವನ್ನು ಕೈಗೊಂಡು ಬದಲಿ ದಿನಾಂಕವನ್ನು ಸೂಚಿಸುವಂತೆ ವಿಶೇಷ ಟಾಸ್ಕ್ ಫೋರ್ಸ್ ಅನ್ನು ಮೇ 22, 2022ರಂದು ರಚಿಸಿತ್ತು.

ಈ 5 ಸ್ಟಾರ್ ಆಟಗಾರರು ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಪದಾರ್ಪಣೆ ಮಾಡಿದ್ದು ಬಹುತೇಕರಿಗೆ ತಿಳಿದಿಲ್ಲ!ಈ 5 ಸ್ಟಾರ್ ಆಟಗಾರರು ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಪದಾರ್ಪಣೆ ಮಾಡಿದ್ದು ಬಹುತೇಕರಿಗೆ ತಿಳಿದಿಲ್ಲ!

ಈ ವಿಶೇಷ ಟಾಸ್ಕ್ ಫೋರ್ಸ್ ಕಳೆದೆರಡು ತಿಂಗಳುಗಳಲ್ಲಿ ಚೈನೀಸ್ ಒಲಿಂಪಿಕ್ ಕಮಿಟಿ ಹಾಗೂ ಹ್ಯಾಂಗ್ ಝೌ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿ ಜತೆ ನಿರಂತರ ಚರ್ಚೆಗಳನ್ನು ನಡೆಸಿ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ನಡೆಸಲು ಇದೀಗ ಹೊಸದೊಂದು ಅವಧಿಯನ್ನು ಸೂಚಿಸಿದೆ.

ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ವಿಶ್ವಕಪ್‌ ಹೀರೋ ಬೆನ್ ಸ್ಟೋಕ್ಸ್ ಬಳಿ ಇರುವ ಆಸ್ತಿಯ ಮೊತ್ತ ಎಷ್ಟು?ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ವಿಶ್ವಕಪ್‌ ಹೀರೋ ಬೆನ್ ಸ್ಟೋಕ್ಸ್ ಬಳಿ ಇರುವ ಆಸ್ತಿಯ ಮೊತ್ತ ಎಷ್ಟು?

ಈ ಹೊಸ ದಿನಾಂಕವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಪತ್ರಿಕಾ ಪ್ರಕಟಣೆಯ ಮೂಲಕ ಘೋಷಣೆ ಮಾಡಿದ್ದು, ಮುಂದಿನ ವರ್ಷ ಅಂದರೆ 2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಹ್ಯಾಂಗ್ ಝೌನಲ್ಲಿ ಈ ಕ್ರೀಡಾಕೂಟ ನಡೆಯಲಿದೆ.

ಈ ವರ್ಷ ಏಕೆ ಆಯೋಜನೆಯಾಗಲಿಲ್ಲ ಏಷ್ಯನ್ ಗೇಮ್ಸ್

ಈ ವರ್ಷ ಏಕೆ ಆಯೋಜನೆಯಾಗಲಿಲ್ಲ ಏಷ್ಯನ್ ಗೇಮ್ಸ್

ಇನ್ನು ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಈ ವರ್ಷದಿಂದ ಮುಂದಿನ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲ್ಪಟ್ಟದ್ದರ ಹಿಂದೆ ಇರುವ ಕಾರಣವೇನು ಎಂಬ ಪ್ರಶ್ನೆ ಮೂಡಿದೆ. ಏಷ್ಯನ್ ಒಲಿಂಪಿಕ್ ಸಮಿತಿ ಈ ವರ್ಷ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಆಯೋಜಿಸಿದರೆ ಇತರೆ ಕ್ರೀಡಾಕೂಟಗಳ ಸಂಘರ್ಷ ಉಂಟಾಗುವ ಸಾಧ್ಯತೆಗಳಿದ್ದು, ಇದನ್ನು ತಪ್ಪಿಸುವ ಸಲುವಾಗಿ ಮುಂಬರುವ ವರ್ಷಕ್ಕೆ ಕ್ರೀಡಾಕೂಟವನ್ನು ಮುಂದೂಡಿದೆ ಎನ್ನಲಾಗುತ್ತಿದೆ.

2018ರಲ್ಲಿ ಕೊನೆಯ ಕ್ರೀಡಾಕೂಟ

2018ರಲ್ಲಿ ಕೊನೆಯ ಕ್ರೀಡಾಕೂಟ

ಏಷ್ಯನ್ ಕ್ರೀಡಾಕೂಟದ ಕೊನೆಯ ಆವೃತ್ತಿ 2018ರಲ್ಲಿ ಇಂಡೋನೇಷ್ಯಾದ ಜಕಾರ್ತ ಪಾಲೆಂಬಾಂಗ್ ಎಂಬಲ್ಲಿ ನಡೆದಿತ್ತು. ಈ ಕ್ರೀಡಾಕೂಟದಲ್ಲಿ 289 ಪದಕಗಳನ್ನು ಗೆದ್ದಿದ್ದ ಚೀನಾ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು. ಉಳಿದಂತೆ 204 ಪದಕಗಳನ್ನು ಗೆದ್ದಿದ್ದ ಜಪಾನ್ ದ್ವಿತೀಯ ಸ್ಥಾನ, 176 ಪದಕಗಳನ್ನು ಗೆದ್ದಿದ್ದ ದಕ್ಷಿಣ ಕೊರಿಯಾ ತೃತೀಯ ಸ್ಥಾನ, 98 ಪದಕಗಳನ್ನು ಗೆದ್ದಿದ್ದ ಇಂಡೋನೇಷಿಯಾ ನಾಲ್ಕನೇ ಸ್ಥಾನ ಮತ್ತು 70 ಪದಕಗಳನ್ನು ಗೆದ್ದಿದ್ದ ಉಜ್ಬೇಕಿಸ್ತಾನ್ ಐದನೇ ಸ್ಥಾನ ಪಡೆದುಕೊಂಡಿತ್ತು.

2018ರಲ್ಲಿ ಭಾರತ ಗೆದ್ದಿದ್ದ ಪದಕಗಳೆಷ್ಟು?

2018ರಲ್ಲಿ ಭಾರತ ಗೆದ್ದಿದ್ದ ಪದಕಗಳೆಷ್ಟು?

2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಒಟ್ಟು 69 ಪದಕಗಳನ್ನು ಗೆದ್ದು ಪದಕಗಳ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿತ್ತು.

Story first published: Wednesday, July 20, 2022, 10:55 [IST]
Other articles published on Jul 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X