ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ 2022 ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ಕಾರಣ?

ಇದೇ ಸೆಪ್ಟೆಂಬರ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಸಂಘಟಕರು ಶುಕ್ರವಾರ ಹೇಳಿದ್ದಾರೆ.

ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಏಷ್ಯನ್ ಕ್ರೀಡಾಕೂಟ ವಿಳಂಬಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಆದರೂ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಿಂದಲೂ ಕೋವಿಡ್ -19 ನಿಯಂತ್ರಿಸಲು ಚೀನಾ ಹೋರಾಡುತ್ತಿದೆ.

"2022ರ ಸೆಪ್ಟೆಂಬರ್ 10ರಿಂದ 25 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಬೇಕಿದ್ದ 19ನೇ ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಲಾಗುವುದು ಎಂದು ಏಷ್ಯಾದ ಒಲಿಂಪಿಕ್ ಕೌನ್ಸಿಲ್ ಪ್ರಕಟಿಸಿದೆ," ಎಂದು ಅಧಿಕೃತ ಗೇಮ್ಸ್ ವೆಬ್‌ಸೈಟ್‌ ಹೇಳಿಕೆಯನ್ನು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಕ್ರೀಡಾ ಸ್ಪರ್ಧೆಯ ಹೊಸ ದಿನಾಂಕಗಳನ್ನು ನಂತರದ ದಿನಾಂಕದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿಕೆ ಸೇರಿಸಿದೆ.

 Asian Games 2022 Stands Postponed Due To Chinas Zero Tolerance Against COVID-19

ಆತಿಥೇಯ ನಗರವಾದ ಚೀನಾದ ಹ್ಯಾಂಗ್‌ಝೌ ದೇಶದ ಅತಿದೊಡ್ಡ ನಗರವಾದ ಶಾಂಘೈನಿಂದ ಕಡಿಮೆ (120 ಮೈಲುಗಳು) ದೂರದಲ್ಲಿದೆ. ಇದು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಕೊರೊನಾ ವೈರಸ್ ವಿರುದ್ಧ ಶೂನ್ಯ-ಸಹಿಷ್ಣು ವಿಧಾನದ ಭಾಗವಾಗಿ ವಾರಗಳ ಅವಧಿಯ ಲಾಕ್‌ಡೌನ್ ಅನ್ನು ಮಾಡಲಾಗಿದೆ.

ಪೂರ್ವ ಚೀನಾದ 12 ಮಿಲಿಯನ್ ಜನರಿರುವ ನಗರವಾಗಿರುವ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ಗಾಗಿ ಸುಮಾರು 56 ಸ್ಪರ್ಧಾತ್ಮಕ ಸ್ಥಳಗಳನ್ನು ನಿರ್ಮಿಸುವುದನ್ನು ಪೂರ್ಣಗೊಳಿಸಿದೆ ಎಂದು ಸಂಘಟಕರು ಕಳೆದ ತಿಂಗಳು ಹೇಳಿದ್ದರು.

ಫೆಬ್ರವರಿ ಸಮಯದಲ್ಲಿ ಕಟ್ಟುನಿಟ್ಟಾದ ಕೋವಿಡ್-ಸುರಕ್ಷಿತ ಬಯೋ ಬಬಲ್‌ನಲ್ಲಿ ನಡೆದ ಬೀಜಿಂಗ್ ವಿಂಟರ್ ಒಲಿಂಪಿಕ್ಸ್‌ನ "ಯಶಸ್ವಿ ಅನುಭವದಿಂದ ಕಲಿಯುವ' ವೈರಸ್ ನಿಯಂತ್ರಣ ಯೋಜನೆಯಡಿ ಕಾರ್ಯಕ್ರಮ‌ಗಳನ್ನು ನಡೆಸಲು ಅವರು ಯೋಜಿಸಿದ್ದಾರೆ ಎಂದು ಸೂಚಿಸಿದ್ದರು.

1990ರಲ್ಲಿ ಬೀಜಿಂಗ್ ಮತ್ತು 2010ರಲ್ಲಿ ಗುವಾಂಗ್‌ಝೌ ನಂತರ ಏಷ್ಯನ್ ಗೇಮ್ಸ್ ಸ್ಪರ್ಧೆಯನ್ನು ಆಯೋಜಿಸುವ ಚೀನಾದ ಮೂರನೇ ನಗರ ಹ್ಯಾಂಗ್‌ಝೌ ಸಿದ್ಧವಾಗಿದೆ. ನಿಂಗ್ಬೋ, ವೆಂಝೌ, ಹುಝೌ, ಶಾಕ್ಸಿಂಗ್ ಮತ್ತು ಜಿನ್ಹುವಾ ಸೇರಿದಂತೆ ಇತರ ಪ್ರಾಂತೀಯ ನಗರಗಳಲ್ಲಿ ಕೆಲವು ಸ್ಪರ್ಧೆಗಳು ನಡೆಯಬೇಕಿತ್ತು.

2019ರ ಕೊನೆಯಲ್ಲಿ ಚೀನಾದ ನಗರವಾದ ವುಹಾನ್‌ನಲ್ಲಿ ಕೋವಿಡ್ ಹೊರಹೊಮ್ಮಿದಾಗಿನಿಂದ ಚೀನಾದಲ್ಲಿ ಬಹುತೇಕ ಎಲ್ಲಾ ಅಂತರರಾಷ್ಟ್ರೀಯ ಕ್ರೀಡೆಗಳು ಸ್ಥಗಿತಗೊಂಡಿವೆ.

ಬೀಜಿಂಗ್ ಒಲಿಂಪಿಕ್ಸ್ ಒಂದು ಅಪವಾದವಾಗಿತ್ತು. ಆದರೆ ಕ್ರೀಡಾಪಟುಗಳು, ಸಿಬ್ಬಂದಿಗಳು, ಸ್ವಯಂಸೇವಕರು ಮತ್ತು ಮಾಧ್ಯಮಗಳು ಸೇರಿದಂತೆ ಪ್ರತಿಯೊಬ್ಬರೊಂದಿಗೆ ಕಟ್ಟುನಿಟ್ಟಾದ ನಿರ್ಬಂಧಗಳಲ್ಲಿ ನಡೆಸಲಾಯಿತು.

ಚೀನಾ ಮೊಂಡುತನದಿಂದ ಶೂನ್ಯ-ಕೋವಿಡ್ ನೀತಿಗೆ ಅಂಟಿಕೊಂಡಿದೆ, ಕಟ್ಟುನಿಟ್ಟಾದ ಲಾಕ್‌ಡೌನ್‌ಗಳು, ಕ್ವಾರಂಟೈನ್‌ಗಳು ಮತ್ತು ಸಾಮೂಹಿಕ ಪರೀಕ್ಷಾ ಕಾರ್ಯಕ್ರಮಗಳನ್ನು ವಿಧಿಸುತ್ತದೆ. ಆದರೆ ಇತರ ದೇಶಗಳು ಸಾಂಕ್ರಾಮಿಕ ರೋಗವು ಕಡಿಮೆಯಾಗುತ್ತಿದ್ದಂತೆ ಮತ್ತೆ ತೆರೆಯಲು ಪ್ರಾರಂಭಿಸಿವೆ.

ಭೌತಿಕ ಕಾಳಜಿಗಿಂತ ಮಾನವನ ಜೀವವನ್ನು ಅದು ಗೌರವಿಸುತ್ತದೆ ಮತ್ತು ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಬಹುದು ಎಂಬುದಕ್ಕೆ ಪುರಾವೆಯಾಗಿ ಚೀನಾ ಸರ್ಕಾರವು ಲಾಕ್‌ಡೌನ್ ತಂತ್ರವನ್ನು ಅನುಸರಿಸಿದೆ. ಇದರಿಂದಾಗಿ ಏಷ್ಯನ್ ಗೇಮ್ಸ್ ಸಹ ಮುಂದೂಡಿಕೆಯಾಗಿದೆ.

Story first published: Friday, May 6, 2022, 13:48 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X