ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ವಿರುದ್ಧದ ದೂರು ಸಲ್ಲಿಸಿದ್ದ ಅರ್ಜಿ ವಜಾ; ಏನಿದು ಪ್ರಕರಣ?

Ethics Officer Vineet Saran Dismisses Conflict Of Interest Complaint Against BCCI President Roger Binny

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ವಿರುದ್ಧ ದಾಖಲಾಗಿದ್ದ 'ಸ್ವಹಿತಾಸಕ್ತಿ ಸಂಘರ್ಷ' ಪ್ರಕರಣವನ್ನು ಬಿಸಿಸಿಐ ನೈತಿಕ ಅಧಿಕಾರಿ ಹಾಗೂ ನಿವೃತ್ತ ನ್ಯಾಯಮೂರ್ತಿ ವಿನೀತ್ ಸರನ್ ಅವರು ವಜಾಗೊಳಿಸಿದ್ದು, ದೂರುದಾರ ಸಂಜೀವ್ ಗುಪ್ತಾ ಅವರ ದೂರು ಯಾವುದೇ ಅರ್ಹತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.

1983ರ ವಿಶ್ವಕಪ್ ವಿಜೇತ ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್ ಬಿನ್ನಿ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿರುವುದು ಮತ್ತು ಬಿಸಿಸಿಐ ಜೊತೆ ಪ್ರಸಾರ ಒಪ್ಪಂದ ಮಾಡಿಕೊಂಡಿರುವುದು ಸ್ವಹಿತಾಸಕ್ತಿ ಸಂಘರ್ಷವಾಗಿದೆ ಎಂದು ಸಂಜೀವ್ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದರು.

ಸ್ಟಾರ್ ಸ್ಪೋರ್ಟ್ಸ್ ಎಲ್ಲಾ ಐಸಿಸಿ ಟೂರ್ನಿಗಳ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಭಾರತ ತಂಡದ ತವರಿನ ಕ್ರಿಕೆಟ್ ಸರಣಿಗಳ ಅಧಿಕೃತ ಪ್ರಸಾರಕ ಚಾನೆಲ್ ಆಗಿದೆ.

Sania Mirza Retirement: ಟೆನ್ನಿಸ್‌ಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾSania Mirza Retirement: ಟೆನ್ನಿಸ್‌ಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಮಾಜಿ ಅಪೆಕ್ಸ್ ಕೌನ್ಸಿಲ್ ಸದಸ್ಯ ಸಂಜಿವ್ ಗುಪ್ತಾ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿ ಸುದ್ದಿಯಲ್ಲಿದ್ದವರು.

BCCI Ethics Officer Vineet Saran Dismisses Conflict Of Interest Complaint Against BCCI President Roger Binny

ಬಿಸಿಸಿಐ ನೈತಿಕ ಅಧಿಕಾರಿ ವಿನೀತ್ ಸರನ್ ಅವರು ತಮ್ಮ 11 ಪುಟಗಳ 20 ಅಂಶಗಳ ವರದಿಯಲ್ಲಿ, ಸಂಜೀವ್ ಗುಪ್ತಾ ಅವರ ದೂರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

bcci.tv ನಲ್ಲಿ ಅಪ್‌ಲೋಡ್ ಮಾಡಿದ ತೀರ್ಪಿನಲ್ಲಿ ವಿನೀತ್ ಸರನ್, "ಮಯಾಂತಿ ಲ್ಯಾಂಗರ್ ಬಿನ್ನಿ ಅವರು ಸ್ಟಾರ್ ಸ್ಪೋರ್ಟ್ಸ್‌ನ ಮಾರಾಟ, ಮಾರುಕಟ್ಟೆ, ವ್ಯವಹಾರ ಅಥವಾ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸಂಜೀವ್ ಗುಪ್ತಾ ಅವರ ದೂರಿನ ಪ್ರಕರಣವಲ್ಲ," ಎಂದು ತಿಳಿಸಿದ್ದಾರೆ.

"ಮಯಾಂತಿ ಲ್ಯಾಂಗರ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಾಗಿ ನೇರ ಪ್ರಸಾರ ಮತ್ತು ಪ್ಯಾನೆಲ್‌ಗಳ ನಿರೂಪಕಿಯಾಗಿದ್ದಾರೆ. ಎಪ್ರಿಲ್ 5, 2018ರಿಂದ ಜೂನ್ 27, 2022ರವರೆಗೆ ಬಿಸಿಸಿಐ ಮತ್ತು ಐಪಿಎಲ್‌ಗಾಗಿ ಮಾಧ್ಯಮ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಲಾಗಿರುವ ಯಾವ ಅಂಶವೂ ವಿವಾದಾತ್ಮಕವಾಗಿಲ್ಲ," ಎಂದು ವಿನೀತ್ ಸರನ್ ಹೇಳಿದ್ದಾರೆ.

IND vs SL: ಭಾರತದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಈತ ಎಲ್ಲವನ್ನೂ ಮಾಡುತ್ತಿದ್ದಾನೆ; ಇರ್ಫಾನ್ ಪಠಾಣ್IND vs SL: ಭಾರತದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಈತ ಎಲ್ಲವನ್ನೂ ಮಾಡುತ್ತಿದ್ದಾನೆ; ಇರ್ಫಾನ್ ಪಠಾಣ್

"ಬಿಸಿಸಿಐ ಅಧ್ಯಕ್ಷರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತನ್ನ ಸೊಸೆಯ ನೇಮಕದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಹೇಳಲಾಗುವುದಿಲ್ಲ. ಮಯಾಂತಿ ಲ್ಯಾಂಗರ್ ಸ್ಟಾರ್ ಸ್ಪೋರ್ಟ್ಸ್‌ನ ಉದ್ಯೋಗಿ ಅಲ್ಲ, ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ನಿರೂಪಕಿಯಾಗಿ ಒಪ್ಪಂದದ ಮೇರೆಗೆ ಕೆಲಸ ಮಾಡುತ್ತಿದ್ದಾರೆ," ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

"ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಒಪ್ಪಂದದ ಮೇರೆಗೆ ಕೆಲಸ ಮಾಡುತ್ತಿರುವಾಗ ಸ್ವಹಿತಾಸಕ್ತಿ ಸಂಘರ್ಷದ ಯಾವುದೇ ನಿದರ್ಶನಗಳಿಲ್ಲ. ವಾಸ್ತವವಾಗಿ, ರೋಜರ್ ಬಿನ್ನಿ ಮತ್ತು ಮಯಾಂತಿ ಲ್ಯಾಂಗರ್ ನಡುವಿನ ಮಾವ ಮತ್ತು ಸೊಸೆ ಸಂಬಂಧ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಪುರಾವೆಗಳು ಸಾಕಾಗುವುದಿಲ್ಲ," ಎಂದು ವಿನೀತ್ ಸರನ್ ಉಲ್ಲೇಖಿಸಿದ್ದಾರೆ.

Story first published: Friday, January 13, 2023, 21:27 [IST]
Other articles published on Jan 13, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X