ಜುಲೈ 6: ಕ್ರೀಡಾಭಿಮಾನಿಗಳಿಗೆ ಒಂದೇ ದಿನ ಎರಡೆರಡು ರಸದೌತಣ!

ಬೆಂಗಳೂರು, ಜು. 5: ನಾಳಿನ ಶುಕ್ರವಾರ ಒಂದು ರೀತಿಯಲ್ಲಿ ಸೂಪರ್ ಶುಕ್ರವಾರ ಎನಿಸಲಿದೆ. ಜು. 6ರ ಶುಕ್ರವಾರದಂದು ಒಂದೇ ದಿನ ಎರಡೆರಡು ಕ್ರೀಡಾ ಆಕರ್ಷಣೆಗಳು ಕ್ರೀಡಾಭಿಮಾನಿಗಳನ್ನು ಸೆಳೆಯಲಿವೆ. ಒಂದು ಕಡೆ ರಷ್ಯಾದ ಫೀಫಾ ಫುಟ್ಬಾಲ್ ಕ್ವಾರ್ಟರ್ ಫೈನಲ್ ಕುತೂಹಲಕಾರಿ ಕಾದಾಟದಲ್ಲಿ ಬ್ರೆಜಿಲ್-ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು 2ನೇ ಟಿ20 ಗಾಗಿ ಮುಖಾಮುಖಿಯಾಗಲಿವೆ.
ಎರಡೂ ಪಂದ್ಯಗಳೂ ಆಕರ್ಷಣೀಯವೆ. ಇತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕ್ರಿಕೆಟ್ ನತ್ತ ಹೊರಳಿದರೆ, ಫುಟ್ಬಾಲ್ ಅಭಿಮಾನಿಗಳು ಫೀಫಾ ಪಂದ್ಯ ನೋಡಲಿದ್ದಾರೆ. ಎಲ್ಲಾ ಆಟಗಳನ್ನು ಅಷ್ಟೇ ಪ್ರೀತಿ-ಅಭಿಮಾನದಿದಂದ ಕಾಣುವವರದ್ದು ಕ್ರಿಕೆಟ್ಟೋ? ಫುಟ್ಬಾಲೋ ಎಂಬ ಇಕ್ಕಟ್ಟಿನ ಸ್ಥಿತಿ!
ನೀವೊಂದುವೇಳೆ ಫುಟ್ಬಾಲ್ ಅಭಿಮಾನಿಯಾಗಿದ್ದರೆ ನಾಳೆ (ಜು. 6) ರಾತ್ರಿ 7.30ಕ್ಕೆ ಆರಂಭವಾಗಲಿರುವ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಮೊದಲ ಪಂದ್ಯದಲ್ಲಿ ಉರುಗ್ವೆ-ಫ್ರಾನ್ಸ್ ಕಾದಾಟದತ್ತ ಹೊರಳಲಿದ್ದೀರಿ. ಈ ಪಂದ್ಯ ನಿಜ್ನಿ ನವ್ಗೊರೊಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಾಗಿ ರಾತ್ರಿ 11.30ಕ್ಕೆ ಬ್ರೆಜಿಲ್-ಬೆಲ್ಜಿಯಂ ತಂಡಗಳ ಮತ್ತೊಂದು ಕುತೂಹಲಕಾರಿ ಕಾದಾಟವೂ ನಿಮ್ಮ ಗಮನ ಸೆಳೆಯಲಿದೆ.
ಅದೇ ನೀವು ಕ್ರಿಕೆಟ್ ಪ್ರೇಮಿಯಾಗಿದ್ದರೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಇಂಗ್ಲೆಂಡ್-ಭಾರತ ನಡುವಿನ ಎರಡನೇ ಟಿ20 ಪಂದ್ಯದತ್ತ ಗಮನ ಹರಿಸಲಿದ್ದೀರಿ. ಈ ಪಂದ್ಯ ರಾತ್ರಿ 10ಕ್ಕೆ ಆರಂಭವಾಗಲಿದ್ದು, ಸೋನಿ ನೆಟ್ವರ್ಕ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಮೂರು ಪಂದ್ಯಗಳ ಈ ಟಿ20 ಸರಣಿಯಲ್ಲಿ ಭಾರತ ಈಗಾಗಲೆ 1-0ಯ ಮುನ್ನಡೆ ಸಾಧಿಸಿದೆ.
ಎಲ್ಲಾ ಕ್ರೀಡೆಯನ್ನೂ ಪ್ರೀತಿಸುವ ಕ್ರೀಡಾಭಿಮಾನಿಗಳ ಪಾಡು ಮಾತ್ರ ಜು. 6ರಂದು ಇಕ್ಕಟ್ಟಿಗೆ ಸಿಲುಕಲಿದೆ. ಮೊದಲ ಕ್ವಾರ್ಟರ್ ಫೈನಲ್ ಕಾದಾಟವಾಗಿ ಉರುಗ್ವೆ-ಫ್ರಾನ್ ಮುಖಾಮುಖಿಯನ್ನು ಮನಸಾರೆ ಸವಿಯಬಹುದು. ಆದರೆ ಎರಡನೇ ಕ್ವಾರ್ಟರ್ ಫೈನಲ್ ಆರಂಭವಾಗುವ ವೇಳೆ ಇತ್ತ ಕ್ರಿಕೆಟ್ಟೂ ಆರಂಭವಾಗಿರುತ್ತೆ!
ಆದರೆ ಕ್ರಿಕೆಟ್ ಪಂದ್ಯ ಫುಟ್ಬಾಲ್ ಎರಡನೇ ಕ್ವಾರ್ಟರ್ ಪಂದ್ಯ ಆರಂಭಕ್ಕೂ ಒಂದೂವರೆ ಗಂಟೆ ಮುಂಚಿತವಾಗಿ ಆರಂಭವಾಗುವುದರಿಂದ ಆ ಒಂದೂವರೆ ಗಂಟೆಗಳ ಕಾಲದ ಕ್ರಿಕೆಟ್ ಒಂದು ಇನ್ನಿಂಗ್ಸನ್ನು ಕ್ರೀಡಾಭಿಮಾನಿಗಳು ಸಾರಿಯಾಗಿ ನೋಡಬಹುದು. ಅದೇ ರಾತ್ರಿ 11.30ರ ಬಳಿಕವಾದರೆ ನೀವು ಯಾವುದನ್ನು ವೀಕ್ಷಿಸುತ್ತೀರಿ ಫುಟ್ಬಾಲನ್ನೋ? ಕ್ರಿಕೆಟನ್ನೋ? ಆಯ್ಕೆ ನಿಮ್ಮದು!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications